ಮನೆ ಅಪರಾಧ ಕ್ರಿಕೆಟ್‌ ಟೂರ್ನಮೆಂಟ್‌ ಗಳಲ್ಲಿ ಅವಕಾಶ ಕೊಡಿಸುವುದಾಗಿ ಯುವ ಕ್ರಿಕೆಟಿಗನಿಗೆ ವಂಚನೆ: ದೂರು ದಾಖಲು

ಕ್ರಿಕೆಟ್‌ ಟೂರ್ನಮೆಂಟ್‌ ಗಳಲ್ಲಿ ಅವಕಾಶ ಕೊಡಿಸುವುದಾಗಿ ಯುವ ಕ್ರಿಕೆಟಿಗನಿಗೆ ವಂಚನೆ: ದೂರು ದಾಖಲು

0

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್ಸ್‌ ಆಯೋಜಿಸುವ ಕ್ರಿಕೆಟ್‌ ಟೂರ್ನಮೆಂಟ್‌ ಗಳಲ್ಲಿ ಅವಕಾಶ ಕೊಡಿಸುವುದಾಗಿ ಯುವ ಕ್ರಿಕೆಟಿಗನ ಪೋಷಕರಿಂದ 12.23 ಲಕ್ಷ ರೂ. ಪಡೆದು ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಖಾಸಗಿ ಕ್ರಿಕೆಟ್‌ ಅಕಾಡೆಮಿ ತರಬೇತುದಾರನ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ರಾಜಾಜಿನಗರ ನಿವಾಸಿ ಶ್ಯಾಮ್‌ ಪ್ರಸಾದ್‌ ಶೆಟ್ಟಿ ಎಂಬವರು ಕೋರ್ಟ್‌ ಗೆ ಸಲ್ಲಿಸಿದ್ದ ಪಿಸಿಆರ್‌ ಸಂಬಂಧ ಕೋರ್ಟ್‌ ಸೂಚನೆ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಗಾಂಧಿನಗರದ ರೋರ್‌ ಕ್ರಿಕೆಟ್‌ ಅಕಾಡೆಮಿ ತರಬೇತುದಾರ ಗೌರವ್‌ ಧೀಮಾನ್‌ ವಿರುದ್ಧ ವಂಚನೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರುದಾರ ಶ್ಯಾಮ್‌ ಪ್ರಸಾದ್‌ ಶೆಟ್ಟಿ ಪುತ್ರ ಆಯುಷ್‌ ಪೂರ್ಣಚಂದ್ರ ಶೆಟ್ಟಿ (23) ಕೆಎಸ್‌ಸಿಎ ನಡೆಸುವ ಪ್ರಥಮ ದರ್ಜೆ ಕ್ರಿಕೆಟ್‌ ಲೀಗ್‌ ಸಂಬಂಧ ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್‌ ಪರ ಕ್ರಿಕೆಟ್‌ ಆಡು ತ್ತಿದ್ದರು. ಈ ಟೂರ್ನಿಯಲ್ಲಿ ಉತ್ತಮ ರನ್‌ ಗಳಿಸಿದರಿಂದ ಮಿರ್ಜಾ ಇಸ್ಮಾ ಯಿಲ್‌ ಅಂಡರ್‌-23 ವಲಯ ಮಟ್ಟದ ಟೂರ್ನಿಗೆ ಅವಕಾಶ ಪಡೆದಿದ್ದರು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡದ್ದರಿಂದ ಇತರ ಮೂರು ಪಂದ್ಯಗಳಿಗೆ ಅವಕಾಶ ನಿರಾಕರಿಸಲಾಗಿತ್ತು.

ಹೀಗಾಗಿ ಆಯುಷ್‌ ಪೂರ್ಣಚಂದ್ರ ಶೆಟ್ಟಿ ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿರುವ ರೋರ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಂಡಿದ್ದರು. ಆಗ ಅಕಾಡೆಮಿಯಲ್ಲಿ ತರಬೇತುದಾರನಾಗಿದ್ದ ಗೌರವ್‌ ಧೀಮಾನ್‌ ಪರಿಚಯವಾಗಿದ್ದು, ಒಮ್ಮೆ ದೂರುದಾರರ ಮನೆಗೂ ಬಂದಿದ್ದ. ಆಗ, ಕೆಎಸ್‌ ಸಿಎ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಅವರ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ ವ್ಯವಸ್ಥಾಪಕರು ಮುಂದಿನ ದಿನಗಳಲ್ಲಿ 2 ದಿನದ ಪ್ರಥಮ ದರ್ಜೆ ಲೀಗ್‌ ಸರ್‌.ಮಿರ್ಜಾ ಇಸ್ಮಾಯಿಲ್‌ ಟ್ರೋಫಿ, ಟಿ-20 ಮಾದರಿಯ ಕಸ್ತೂರಿ ರಂಗನ್‌ ಮೆಮೋರಿಯಲ್‌ ಟ್ರೋಫಿ, 50 ಓವರ್‌ ನ ಏಕದಿನ ಪಂದ್ಯ ವೈ.ಎಸ್‌. ರಾಮಯ್ಯ ಮೆಮೋರಿಯಲ್‌ ಟ್ರೋಫಿ ಟೂರ್ನಮೆಂಟ್‌ ಗಳಿಗೆ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ. ಈ ಟೂರ್ನಮೆಂಟ್‌ ಗಳು ಹಾಗೂ ಎಸ್‌. ಎ.ಶ್ರೀನಿವಾಸ ಮೆಮೋರಿಯಲ್‌ ಟ್ರೋಫಿ ಅಂಡರ್‌-23 ವಲಯ ಮಟ್ಟದ ಪಂದ್ಯಾವಳಿಗೆ ಆಯುಷ್‌ಗೆ ಅವಕಾಶ ಕೊಡಿಸುತ್ತೇನೆ ಎಂದಿದ್ದರು.

ಅಲ್ಲದೆ 2022-23ನೇ ಸಾಲಿನಲ್ಲಿ ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್‌ ಪರ ಆಡದಂತೆ ಆಯುಷ್‌ ಗೆ ತಿಳಿಸಿದ್ದ. ಟೂರ್ನಮೆಂಟ್‌ ಗಳಲ್ಲಿ ಅವಕಾಶದ ಜತೆಗೆ ಒಳ್ಳೆಯ ಬ್ಯಾಟ್‌ ಗಳು ಹಾಗೂ ಉತ್ತಮ ತರಬೇತಿ ಕೊಡಿಸುತ್ತೇನೆ ಎಂದು ದೂರುದಾರರಿಂದ ವಿವಿಧ ಹಂತಗಳಲ್ಲಿ 12.23 ಲಕ್ಷ ರೂ. ಪಡೆದುಕೊಂಡಿದ್ದನು. ಆನಂತರ ಯಾವುದೇ ಟೂರ್ನಿಗಳಲ್ಲಿ ಅವಕಾಶ ಕೊಡಿಸದೆ, ಕ್ರಿಕೆಟ್‌ ಸಾಮಗ್ರಿಗಳನ್ನು ಕೊಡಿಸದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಿಂದಿನ ಲೇಖನಟಿಪ್ಪರ್ ಗೆ ಬೈಕ್ ಡಿಕ್ಕಿ: ಯುವಕ‌ ಸಾವು, ಓರ್ವನಿಗೆ ಗಾಯ
ಮುಂದಿನ ಲೇಖನರಾಜ್ಯಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭ