ಯಳಂದೂರು: ಯುವಕನೊಬ್ಬ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಸಮೀಪದ ಕುದೇರು ಬಸ್ ನಿಲ್ದಾಣದಲ್ಲಿ ಜ.16ರ ಗುರುವಾರ ಬೆಳಗ್ಗೆ ನಡೆದಿದೆ.
ಯಳಂದೂರು ತಾಲೂಕಿನ ಅಗರ ಗ್ರಾಮದ ಎಸ್.ಪ್ರದೀಪ್ (25) ಮೃತಪಟ್ಟವರು.
ಪ್ರದೀಪ್ ಜ.15ರ ಬುಧವಾರ ರಾತ್ರಿ ವೇಳೆ ಕುದೇರು ಬಸ್ ನಿಲ್ದಾಣದ ಅಂಗಡಿಯೊಂದರ ಮುಂಭಾಗ ಮಲಗಿದ್ದರು. ಗುರುವಾರ ಬೆಳಗ್ಗೆ ಅದೇ ಸ್ಥಿತಿಯಲ್ಲಿ ಅಸುನೀಗಿದ್ದಾರೆ.
ವಿಷಯ ತಿಳಿದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.
ಸಾವಿಗೆ ಖಚಿತವಾದ ಕಾರಣ ತಿಳಿದುಬಂದಿಲ್ಲ.














