ಚಿಕ್ಕಮಗಳೂರು: ಆರ್ಕೆಸ್ಟ್ರಾ ಹಾಡಿಗಾಗಿ ಯುವಕನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಆರೋಪಿಗಳನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ.
ಲೋಹಿತ್, ಮಂಜುನಾಥ್, ಅರ್ಜಿತ್, ಶರತ್ ಬಂಧಿತ ಆರೋಪಿಗಳು.
ಕೆಲ ದಿನಗಳ ಹಿಂದೆ ತರೀಕೆರೆ ಪಟ್ಟಣದ ರೇವಣ ಸಿದ್ದೇಶ್ವರ ದೇವಾಲಯ ಬಳಿ ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅಭಿನಂದನಾ ಕಾರ್ಯಕ್ರಮದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಹಾಡು ಬದಲಾಯಿಸಿದ್ದರಿಂದ ವರುಣ್ ಎಂಬಾತನಿಗೆ ಕಾಬಾಬ್ ಮೂರ್ತಿ ಚಾಕು ಇರಿದು ಹತ್ಯೆ ಮಾಡಿದ್ದನು. ಬಳಿಕ ಕಬಾಬ್ ಮೂರ್ತಿ ಸೇರಿದಂತೆ ನಾಲ್ವರು ಅಜ್ಜಂಪುರದಲ್ಲಿ ತಲೆ ತಲೆಮರಿಸಿಕೊಂಡಿದ್ದರು.
ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತರೀಕೆರೆ ನಿವಾಸಿಗಳಾದ ಮೂರ್ತಿ, ಮಂಜು, ನವೀನ್, ಧನು, ಈಶ್ವರ್, ಪರಮೇಶ್ವರ್, ನಿತಿನ್ನನ್ನು ಬಂಧಿಸಲಾಗಿತ್ತು. ಇದೀಗ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ವರುಣ್ ಹತ್ಯೆ ಸಂಬಂಧ ಪೊಲೀಸರು 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.