ಮೈಸೂರು : ಖರ್ಚಿಗೆ ಹಣ ನೀಡಿಲ್ಲವೆಂದು ಕೋಪಗೊಂಡು ಮಂಗಳಮುಖಿಯರ ಮೇಲೆ ಯುವಕರು ತಲ್ವಾರ್ ನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ.
ಆನಮ್ ಎಂಬ ಮಂಗಳಮುಖಿ ಬಳಿ ಅಮೃತ ಬಡಾವಣೆಯ ಕೆಲ ಯುವಕರು ಖರ್ಚಿಗೆ ಹಣ ಕೇಳಿದ್ದಾರೆ. ಇದಕ್ಕೆ ಆನಮ್ ನಿರಾಕರಿಸಿದಾಗ ಯುವಕರು ಗಲಾಟೆ ತೆಗೆದಿದ್ದಾರೆ. ಆಗ ಸ್ನೇಹಿತೆಯಾದ ಆನಮ್ ತನ್ನ ಸ್ನೇಹಿತೆ ಪಾರಿಯನ್ನು ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಗೌಸಿಯಾನಗರದ ಪಾರಿ ಸ್ಥಳಕ್ಕೆ ಬಂದಾಗ ಯುವಕರು ಹಲ್ಲೆ ಮಾಡಿದ್ದಾರೆ.
ಈ ಸಂಬಂಧಿಸಿದಂತೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಯುವಕರ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ.















