ಚಿಂಚೋಳಿ: ತಾಲೂಕಿನ ತುಮಕುಂಟಾ-ಸಾಲೇಬೀರನಳ್ಳಿ ಗ್ರಾಮಗಳ ಮಧ್ಯೆ ಯುವಕನೋರ್ವನನ್ನುಕೊಲೆ ಮಾಡಿರುವ ಘಟನೆ ಅ.17ರ ಗುರುವಾರ ನಡೆದಿದೆ.
ಕೊಲೆಯಾದ ಯುವಕ ಯಾರು, ಎಲ್ಲಿಯವನು ಎಂಬ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಸ್ಥಳಕ್ಕೆ ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೆಮಠ, ಸಿಪಿಐ ಕಪಿಲದೇವ, ಪಿಎಸೈ ಗಂಗಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.














