ಮನೆ ಮನರಂಜನೆ ಯುವರಾಜ್‌  ಚೊಚ್ಚಲ ಸಿನಿಮಾ ʼಯುವʼ ಟ್ರೈಲರ್‌ ಬಿಡುಗಡೆ

ಯುವರಾಜ್‌  ಚೊಚ್ಚಲ ಸಿನಿಮಾ ʼಯುವʼ ಟ್ರೈಲರ್‌ ಬಿಡುಗಡೆ

0

ಬೆಂಗಳೂರು: ರಾಜ್‌ ಕುಮಾರ್‌ ಕುಡಿ, ರಾಘವೇಂದ್ರ ರಾಜ್‌ ಕುಮಾರ್‌ ಅವರ ಕಿರಿಮಗ ಯುವರಾಜ್‌ ಅವರ ಚೊಚ್ಚಲ ಸಿನಿಮಾ ʼಯುವʼ ಚಿತ್ರದ ಟ್ರೈಲರ್‌ ಗುರುವಾರ(ಮಾ.21 ರಂದು) ರಿಲೀಸ್‌ ಆಗಿದೆ.

ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಆ್ಯಕ್ಷನ್ ಕಟ್‌ ಹೇಳಿ ಸೈ ಎನ್ನಿಸಿಕೊಂಡಿರುವ ಸಂತೋಷ್‌ ಆನಂದರಾಮ್‌ ರಾಜ್‌ ಕುಮಾರ್‌ ಯುವರಾಜ್‌ ಕುಮಾರ್‌ ಅವರೊಂದಿಗೆ ಇದೇ ಮೊದಲ ಬಾರಿ ಸಿನಿಮ ಮಾಡುತ್ತಿದ್ದಾರೆ. ಆ ಮೂಲಕ ʼಯುವʼ ಅಪ್ಪು ಅಭಿಮಾನಿಗಳಿಗೂ ಸ್ಪೆಷೆಲ್‌ ಸಿನಿಮಾವೆಂದು ಹೇಳಿದರೆ ತಪ್ಪಾಗದು.

ಮಿಡಲ್‌ ಹುಡುಗನೊಬ್ಬ ಇಂಜಿನಿಯರ್‌ ಕಲಿಯುವ ಕನಸು ಕಾಣುತ್ತಾನೆ. ಕಾಲೇಜಿನಲ್ಲಿ ಒಂದು ಗಲಾಟೆ, ಆ ಗಲಾಟೆ ಗ್ಯಾಂಗ್‌ ವಾರ್‌ ಆಗಿ ಬದಲಾಗುತ್ತದೆ. ಲೋಕಲ್‌ ಡಾನ್‌ ನೊಬ್ಬನನ್ನು ಎದುರು ಹಾಕಿಕೊಳ್ಳುವ ಮಟ್ಟಿಗೆ ವಾರ್‌ ಮುಂದುವರೆಯುತ್ತದೆ. ನಿಯತ್ತೇ ಬದುಕೆಂದು ಬದುಕುತ್ತಿರುವ ಕುಟುಂಬಕ್ಕೆ ಮಗನ ಈ ವರ್ತನೆಯಿಂದ ಮುಜುಗರ ಉಂಟಾಗುತ್ತದೆ.

ಮೊದಲ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಯುವರಾಜ್‌ ಕುಮಾರ್‌, ನಟನೆ ಎಲ್ಲರ ಗಮನ ಸೆಳೆಯುತ್ತದೆ. ಮಸ್ತ್‌ ಆ್ಯಕ್ಷನ್, ಖಡಕ್‌ ಡೈಲಾಗ್ಸ್‌ ಗಳಿಂದ ʼಯುವʼ ಗಮನ ಸೆಳೆಯುತ್ತದೆ.

ಮಿಡಲ್‌ ಕ್ಲಾಸ್‌ ಕುಟುಂಬದ ಜವಬ್ದಾರಿ ಹೊತ್ತ ತಂದೆ, ಕಲಿತ ವಿದ್ಯೆಗೆ ಸಿಗದ ಸಮರ್ಪಕ ಕೆಲಸ, ದುಡಿಮೆ ಎಂದರೆ ಎಷ್ಟು ಕಷ್ಟವೆಂದು ಹೇಳುವ ಅಂಶಗಳನ್ನು ಟ್ರೈಲರ್‌ ನಲ್ಲಿ ಹೇಳಲಾಗಿದ್ದು, ಸೆಂಟಿಮೆಂಟ್‌ ವಿಚಾರವನ್ನು ಹೇಳಿದ್ದಾರೆ ನಿರ್ದೇಶಕರು.

ಯಕಿಯಾಗಿ ಸಪ್ತಮಿ ಗೌಡ ಅವರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ತುಳು ಭಾಷೆಯೂ ಟ್ರೈಲರ್‌ ನಲ್ಲಿ ಕೇಳಿಸುತ್ತದೆ.

ಒಟ್ಟಿನಲ್ಲಿ ಮೊದಲ ಸಿನಿಮಾದಲ್ಲೇ ಭರವಸೆಯ ನಟನಾಗುವ ಎಲ್ಲಾ ಲಕ್ಷಣಗಳು ಟ್ರೈಲರ್‌ ನಲ್ಲಿ ಗೋಚರಿಸುತ್ತದೆ.

ಯುವರಾಜ್‌ ಕುಮಾರ್‌ , ಸಪ್ತಮಿ ಗೌಡ ಜೊತೆ ಅಚ್ಯುತ್‌ ಕುಮಾರ್‌, ಸುಧಾರಾಣಿ, ಕಿಶೋರ್ ಮುಂತಾದವರು ಟ್ರೈಲರ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದೇ ಮಾ.29 ರಂದು ಸಿನಿಮಾ ರಿಲೀಸ್‌ ಆಗಲಿದೆ.