ಮನೆ ಅಂತಾರಾಷ್ಟ್ರೀಯ ಜಿಂಬಾಬ್ವೆ: ಚಿನ್ನದ ಗಣಿ ಕುಸಿತದಿಂದ 6 ಮಂದಿ ಸಾವು, 15 ಮಂದಿ ನಾಪತ್ತೆ

ಜಿಂಬಾಬ್ವೆ: ಚಿನ್ನದ ಗಣಿ ಕುಸಿತದಿಂದ 6 ಮಂದಿ ಸಾವು, 15 ಮಂದಿ ನಾಪತ್ತೆ

0

ಹರಾರೆ: ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ವೇಳೆ ಗಣಿ ಕುಸಿದು ಆರು ಮಂದಿ ಮೃತಪಟ್ಟು ಹದಿನೈದು ಮಂದಿ ಸಿಲುಕಿರುವ ಘಟನೆ ಜಿಂಬಾಬ್ವೆಯ ಬೇ ಹಾರ್ಸ್ ಗಣಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

Join Our Whatsapp Group

ರಾಜಧಾನಿ ಹರಾರೆಯಿಂದ ಪಶ್ಚಿಮಕ್ಕೆ 100 ಕಿಲೋಮೀಟರ್ (62 ಮೈಲಿ) ದೂರದಲ್ಲಿರುವ ಚೆಗುಟುವಿನ ಜಿಂಬಾಬ್ವೆಯ ಬೇ ಹಾರ್ಸ್ ಗಣಿಯಲ್ಲಿ ದುರಂತ ಸಂಭವಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ಶುಕ್ರವಾರ ರಾತ್ರಿ ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದೆ. ಇನ್ನೂ 15 ಗಣಿಗಾರರು ಭೂಗತರಾಗಿದ್ದಾರೆ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.

ಶುಕ್ರವಾರದಂದು ಗಣಿಯಲ್ಲಿ ಸುಮಾರು 34 ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಕುಸಿತವಾಗಿದೆ ಈ ವೇಳೆ ಹದಿಮೂರು ಮಂದಿ ಪಾರಾಗಿದ್ದು ಇಪ್ಪತ್ತೊಂದು ಮಂದಿ ಗಣಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ ಬಳಿಕ ರಕ್ಷಣಾ ತಂಡದ ಸತತ ಪ್ರಯತ್ನದ ಮೂಲಕ ಆರು ಮಂದಿಯನ್ನು ರಕ್ಷಣೆ ಮಾಡಿದ್ದೂ ಇನ್ನೂ ಹದಿನೈದು ಮಂದಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಹಿಂದಿನ ಲೇಖನಎಡಿಜಿಪಿ ಅಲೋಕ್ ಕುಮಾರ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮುಂದಿನ ಲೇಖನಬಾಲಕರ ವಸತಿ ನಿಲಯಕ್ಕೆ ಎಸಿ, ತಹಶೀಲ್ದಾರ್ ದಿಢೀರ್ ಭೇಟಿ: ಪರಿಶೀಲನೆ