ಮನೆ ರಾಷ್ಟ್ರೀಯ ಆಯ್ದ ನಗರಗಳಲ್ಲಿ ₹1ರಷ್ಟು ಸೇವಾ ಶುಲ್ಕ ಹೆಚ್ಚಳ ಮಾಡಿದ ಝೊಮ್ಯಾಟೊ

ಆಯ್ದ ನಗರಗಳಲ್ಲಿ ₹1ರಷ್ಟು ಸೇವಾ ಶುಲ್ಕ ಹೆಚ್ಚಳ ಮಾಡಿದ ಝೊಮ್ಯಾಟೊ

0

ನವದೆಹಲಿ:   ಸಿದ್ಧ ಆಹಾರಗಳನ್ನು ರೆಸ್ಟೋರೆಂಟ್‌ ನಿಂದ ಗ್ರಾಹಕರ ಸ್ಥಳಕ್ಕೆ ತಲುಪಿಸುವ  ಫುಡ್‌ ಡೆಲಿವರಿ ಅಪ್ಲಿಕೇಷನ್ ಝೊಮ್ಯಾಟೊ ತನ್ನ ಸೇವಾ ಶುಲ್ಕವನ್ನು ಆಯ್ದ ನಗರಗಳಲ್ಲಿ ₹1ರಷ್ಟು ಹೆಚ್ಚಳ ಮಾಡಿದೆ.

Join Our Whatsapp Group

ಈ ಮೊದಲು ಪ್ರತಿ ಡೆಲಿವರಿಯ ಶುಲ್ಕ ₹5 ಇತ್ತು. ಅದನ್ನು ಈಗ ₹6ಕ್ಕೆ ಝೊಮಾಟೊ ಹೆಚ್ಚಿಸಿದೆ. ಈ ಶುಲ್ಕ ಹೆಚ್ಚಳ ಕ್ರಮ ಬೆಂಗಳೂರು, ಮುಂಬೈ ಹಾಗೂ ದೆಹಲಿಗೆ ಮಾತ್ರ ಅನ್ವಯ.

ಝೊಮ್ಯಾಟೊದ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡಾ ಕಳೆದ ಭಾನುವಾರ ಇದೇ ರೀತಿಯ ಕ್ರಮವನ್ನು ಆಯ್ದ ನರಗಳಲ್ಲಿ ತೆಗೆದುಕೊಂಡಿತ್ತು. ಆದರೆ ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿ ಸೋಮವಾರವೇ ಈ ಕ್ರಮದಿಂದ ಹಿಂದೆ ಸರಿದಿರುವುದು ಸ್ವಿಗ್ಗಿ ಆ್ಯಪ್‌ನಲ್ಲಿ ಸ್ಪಷ್ಟವಾಗಿದೆ.

 ಆದರೆ ಈ ಬೆಲೆ ಏರಿಕೆಯ ಹಿಂದಿನ ಕ್ರಮದ ಕುರಿತು ಪ್ರತಿಕ್ರಿಯೆಗೆ ಝೊಮ್ಯಾಟೊ ಹಾಗೂ ಸ್ವಿಗ್ಗಿ ಎರಡೂ ನಿರಾಕರಿಸಿವೆ. ಈ ಎರಡೂ ಕಂಪನಿಗಳು ಪ್ಲಾಟ್‌ಫಾರ್ಮ್‌ ಫೀ ಅನ್ನು ಕಳೆದ ವರ್ಷ ₹2ರಿಂದ ಆರಂಭಿಸಿದವು. ಅಲ್ಲಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಬಂದಿವೆ.

 ರೆಸ್ಟೋರೆಂಟ್ ಹಾಗೂ ಗ್ರಾಹಕರ ನಡುವಿನ ಸಂಪರ್ಕ ಸೇತುವಾಗಿರುವ ಈ ಕಂಪನಿಗಳು ತಮ್ಮ ಶುಲ್ಕವನ್ನು ಹೆಚ್ಚಿಸುವ ಮೂಲಕ ಲಾಭಾಂಶವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಫುಡ್‌ ಡೆಲಿವರಿ ಝೊಮ್ಯಾಟೊ ಹಾಗೂ ಸ್ವಿಗ್ಗಿ ಪ್ರಮುಖ ಕಂಪನಿಗಳಾಗಿದ್ದು,  ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿವೆ.