ಮನೆ ಪೌರಾಣಿಕ ಜಡಭರತೋಪಾಖ್ಯಾನ

ಜಡಭರತೋಪಾಖ್ಯಾನ

0

 ಮುಂದುವರಿಯುವುದು ಭಾಗ  2 :

      ಭರತನು ಈ ರೀತಿಯಾಗಿ ಸಾಮಾನ್ಯ ಬ್ರಾಹ್ಮಣನಾಗಿ ಕ್ಷೇತ್ರಕರ್ಮಗಳಲ್ಲಿ ತಲ್ಲೀನನಾಗಿರಲು, ಒಮ್ಮೆ ಸೌವೀರ ದೇಶವನ್ನು ಪರಿಪಾಲಿಸುತ್ತಿರುವ ವೀರಭೂಪತಿಯು ಸಂಸಾರ ದುಃಖ ಪರಂಪರೆಯೊಂದಿಗೆ ಬೇಸರವಾಗಿ ಜೀವನವನ್ನು ಅದ್ವಿತೀಯವಾದ ಬ್ರಹ್ಮಜ್ಞಾನದೊಂದಿಗೆ ಬೆಳೆಸಿಕೊಳ್ಳಬೇಕೆಂದು ಸರ್ವಸಂಗ ಪರಿತ್ಯಾಗವನ್ನು ಮಾಡಿ ಇಕ್ಷುಮತೀ ನದೀ ತೀರದಲ್ಲಿದ್ದ ಕಪಿಲ ಮಹರ್ಷಿಯ ಆಶ್ರಮಕ್ಕೆ ಹೋಗುತ್ತಾ ಮಾರ್ಗ ಮಧ್ಯದಲ್ಲಿ ಸಾಲಿಗ್ರಾಮ ತೀರಕ್ಕೆ ಬಂದನು. ಸೌವೀರ ರಾಜನೊಂದಿಗೆ ಆತನ ಪರಿವಾರವೂ ಸಹ ಮುಕ್ತಾಮುಕ್ತವಾಗಿ ಹಿಂಬಾಲಿಸಿತು. ರಾಜಸೇವಕರು ದೂರಾಯಾಸದೊಂದಿಗೆ ಸುಸ್ತಾದರು. ಬೋಯರಿಗೆ ಮಹಾರಾಜನು ಕುಳಿತುಕೊಂಡಿರುವ ಪಲ್ಲಕ್ಕಿಯನ್ನು ಮೇಲೆತ್ತಲೂ ಸಹ ಆಗದಂತಾಯಿತು. ಯಾರಾದರೊಬ್ಬರ ಸಹಾಯವು ಬೇಕೆನಿಸಿತು. ಆಗ ಅವರಲ್ಲೊಬ್ಬ ಅಗ್ರವೇತನನು ಊರಿನ ಹೊರಗೆ ಹೊಲದಲ್ಲಿ ತನ್ನಷ್ಟಕ್ಕೆ ತಾನು ತಲೆ ತಗ್ಗಿಸಿಕೊಂಡು ಕೆಲಸ ಮಾಡುತ್ತಿದ್ದ ಭರತನನ್ನು ನೋಡಿ ಈ ಅಮಾಯಕನು ವಿದ್ಯೆ ಬರಹಗಳಿಲ್ಲದ ಬ್ರಾಹ್ಮಣನಂತೆ ಕಾಣಿಸುತ್ತಿದ್ದಾನೆ. ಇವನಿಗೆ ಯಾರೂ ಇದ್ದಂತಿಲ್ಲ. ಇವನನ್ನು ಭಯಪಡಿಸಿ ವೇತನ ಭತ್ಯೆಗಳಿಲ್ಲದೇ ಆಸ್ಥಾನದಲ್ಲಿ ಇಟ್ಟುಕೊಳ್ಳಬಹುದು ಎಂದು ನೆನೆದು ಭರತನ ಬಳಿಗೆ ಬಂದು ಭುಜವನ್ನು ತಟ್ಟಿ ಅವನನ್ನು ಎಳೆದುಕೊಂಡು ಹೋಗಿ ತನ್ನ ಸ್ವಜನರೊಂದಿಗೆ ಸೇರಿಸಿಕೊಂಡನು. ಆ ರೀತಿಯಾಗಿ ಆತ್ಮಯೋಗ ರಹಿತಾತ್ಮನಾಗಿ ಅತ್ಯುನ್ನತ ಶಿಖರಗಳನ್ನು ಅಧಿರೋಹಿಸಿ ಬ್ರಹ್ಮಜ್ಞಾನಿ ಶಿಬಿಕಾ ವಾಹಕನಾಗಿ ರಾಜಪಲ್ಲಕ್ಕಿಯನ್ನು ಬೆನ್ನಿನ ಮೇಲಕ್ಕೆ ಎತ್ತಿಕೊಂಡು ಹೊರಬೇಕಾಯಿತು! ಭರತನಿಗೆ ರಾಜಾಂದೋಳಿಕೆಯನ್ನು ಸಮನ್ವಯವನ್ನಾಗಿ ನಡೆಸಿಕೊಂಡು ಹೋಗುವುದಕ್ಕೆ ಆಗಲಿಲ್ಲ. ದೃಷ್ಟಿಯನ್ನು ದರ್ಶನಾಧ್ವದ ಮೇಲೆ ನಿಲ್ಲಿಸಲಾಗದೇ ನಾಸಾಗ್ರದ ತುತ್ತ ತುದಿಯಲ್ಲಿ ಕೇಂದ್ರೀಕರಿಸಿ ಮುನ್ನಡೆಸಿದ್ದರಿಂದ ಗುಣಿ, ಎತ್ತರಗಳು ಬಂದಾಗ ಪಲ್ಲಕ್ಕಿಯನ್ನು ಅಲುಗಾಡಿಸಲಾಯಿತು. ದುಷ್ಕರ ಕಾರ್ಯಾಭ್ಯಾಸವಿಲ್ಲದ ಆತನ ವಿಷಮಗಮನದಿಂದ ಬೋಯ (ಬೇಡ)ರಿಗೂ ಸಹ ಪಾದಗಳು ಸರಿಯಾಗಿಡಲಾಗದೇ ಅಲುಗಾಡಿ ಪಲ್ಲಕ್ಕಿಯನ್ನು ಭುಜಗಳ ಮೇಲಿನಿಂದ ಪಕ್ಕಕ್ಕೆ ಸರಿಸಲು ಒಳಗೆ ಸುಖೋಪವಿಷ್ಟನಾಗಿ ಕುಳಿತಿದ್ದ ಸೌವೀರನೃಪತಿಗೆ ಮುಗ್ಗರಿಸಿ ದಂತಾಯಿತು. ಆತನು ಬೇಡರನ್ನು ಗಟ್ಟಿ ಧ್ವನಿಯಿಂದ ಎಚ್ಚರಿಸಿ ಏನಿದು? ಅಲುಗಾಡಿಸುವುದು? ಪಲ್ಲಕ್ಕಿಯನ್ನು ಸರಿಯಾಗಿ ಭುಜಗಳ ಮೇಲಿಟ್ಟುಕೊಂಡು ಸಮವೇಗದಿಂದ ನಡಸಿರಿ” ಎಂದು ಆಜ್ಞಾಪಿಸಿದನು. ಆಗ ಭರತನೂ ಸಹ ಅಸಾಮರ್ಥ್ಯದಿಂದ ಆಂದೋಳಿಕೆಯನ್ನು ಮುಂದಕ್ಕೂ, ಹಿಂದಕ್ಕೂ ಅಲುಗಾಡಿಸಲು ಮಹಾರಾಜನಿಗೆ ಮತ್ತೆ ಶರೀರಾಯಾಸವುಂಟಾಯಿತು. ಕೂಡಲೇ ರಾಜನು ಕುಪಿತನಾಗಿ, ಯಾರೋ ಅದು? ರಾಜ ಪಲ್ಲಕ್ಕಿಯನ್ನು ಈ ರೀತಿ ನಿರ್ಲಕ್ಷ್ಯವಾಗಿ ಹೊರುತ್ತಿರುವವನು? ಎಂದು ಕ್ರೋಧಾವೇಶ ದಿಂದ ಗದರಿಸಿದನು. ಆದರೂ ಪಲ್ಲಕ್ಕಿಯು ನೆಮ್ಮದಿಯಾಗಿ ಮುಂದೆ ಸಾಗಲಿಲ್ಲ. ಶಿಬಿಕಾ ವಾಹಕರು ಬೇರೇನೂ ಮಾಡಲಾಗದೇ ಎಲೈ! ರಾಜೇಂದ್ರಾ! ಇವನು ಚೆನ್ನಾಗಿ ಬಲಿಷ್ಠ ನಾಗಿದ್ದಾನೆಂದು ಕಂಡು ರಾಜಸೇವೆಗೆ ನಿಯೋಜಿಸಿದೆವು. ಇವನ ನಡಿಗೆಯು ವಕ್ರವಾಗಿದೆ. ನಮ್ಮೊಂದಿಗೆ ಸರಿಸಮಾನವಾಗಿ ಹೆಜ್ಜೆ ಹಾಕುವುದಕ್ಕೆ ಕೈಲಾಗದೇ ಅಲುಗಾಡಿಸುತ್ತಿದ್ದಾನೆ” ಎಂದು ಮೊರೆಯಿಟ್ಟುಕೊಂಡರು. ವಾಹಕರ ಮಾತುಗಳನ್ನು ಕೇಳಿ ಶಿಬಿಕಾ ಸೌವೀರನೃಪತಿ ಭರತನನ್ನು ತೀಕ್ಷ್ಯ ದೃಷ್ಟಿಯಿಂದ, ಪರಿಹಾಸಪೂರ್ವಕವಾಗಿ ನೋಡಿ ಎಲೈ! ಪರಿವ್ರಾಜಕನೇ! ನಿನ್ನ ದೇಹವು ನೋಡುವುದಕ್ಕೆ ಕಟ್ಟುಮಸ್ತಾಗಿದೆ. ಚೆನ್ನಾಗಿ ಮಾಂಸಖಂಡಗಳನ್ನು ಬೆಳೆಸಿದಂತೆ ಗೋಚರಿಸುತ್ತಿದೆ. ತುಂಬಾ ದೂರದವರೆಗೂ ನಡೆದಿರುವುದರಿಂದ ಸುಸ್ತಾಗಿದ್ದೀಯಾ ಏನು? ಹಿಡಿತವನ್ನು ಕಳೆದುಕೊಂಡು ಪಲ್ಲಕ್ಕಿಯನ್ನು ಅಲುಗಾಡಿಸುತ್ತಿದ್ದೀಯಾ” ಎಂದು ಪ್ರಶ್ನಿಸಿದನು. ಜಾಲ್ಯ ವೃತ್ತಿಯಲ್ಲಿ ಸಂಚರಿಷ್ಯಮಾನನಾದ ಅಕುಂಠಿತ ಸತ್ಯ ದೀಕ್ಷೆಯಿಂದ ನಿರ್ಭಿತನಾದ ಭರತ ಬ್ರಾಹ್ಮಣನು ಮಹಾರಾಜನ ಮಾತುಗಳನ್ನು ಕೇಳಿ ಈ ರೀತಿಯಾಗಿ ಉತ್ತರಿಸಿದನು.

ಭರತ :-ಮಹಾರಾಜಾ! ಇಷ್ಟು ದೂರದವರೆಗೂ ನಡೆದು ಸುಸ್ತಾಗಿರುವುದ ರಿಂದ ಕರ್ತವ್ಯ ಹಾನಿ ಸಂಭವಿಸಿದೆಯೆಂದು ಹೇಳುವುದು ಅಸತ್ಯವಾದುದು. ನನಗೆ ಇದು ಸಮ್ಮತವಲ್ಲ.

ಮಹಾರಾಜಾ :- ಎಲೈ! ನೀನು ಹೊಸಬನಾಗಿದ್ದು ಮಾರ್ಗಾಯಾಸದಿಂದ ಸುಸ್ತಾಗಿರುವುದು ಸತ್ಯವಲ್ಲದಿದ್ದಲ್ಲಿ ಪಲ್ಲಕ್ಕಿ ಏತಕ್ಕಾಗಿ ಅಲುಗಾಡಿತು? ಆ ಪಲ್ಲಕ್ಕಿಯನ್ನು ನೀನು ಹೊರಲಿಲ್ಲವೆನ್ನುತ್ತಿದ್ದೀಯಾ ಏನು?

ಭರತ :-ಮಹಾರಾಜನೇ! ನೀವು ಹೇಳುತ್ತಿರುವುದು ವಾಸ್ತವವೇ ನಾನು ತುಂಬಾ ದೂರ ನಡೆದುದಕ್ಕಾಗಿ ಸುಸ್ತಾಗಲಿಲ್ಲ. ಪಲ್ಲಕ್ಕಿಯು ನನ್ನಿಂದ ಹೊರಲ್ಪಡಲಿಲ್ಲ. ನಿನ್ನ ಆಗ್ರಹವು ಅಸತ್ಯವಾದುದು!

     ಮಹಾರಾಜ :- ಅಯ್ಯೋ! ಇಷ್ಟು ಜನ ಪರಿವ್ರಾಜಕರು ನೋಡುತ್ತಿರಲು ನೀನು ಪಲ್ಲಕ್ಕಿಯನ್ನು ಭುಜದ ಮೇಲಕ್ಕೆ ಎತ್ತಿಕೊಂಡೇ ಪಲ್ಲಕ್ಕಿ ಪಲ್ಲಕ್ಕಿಯನ್ನು ಅಲುಗಾಡಿಸಲಾಗಿ ನನಗೆ ಶರೀರಾಯಾಸವುಂಟಾಯಿತು. ಪ್ರತ್ಯಕ್ಷವಾಗಿ ಕಾಣಿಸುತ್ತಿರುವುದನ್ನು ಇಲ್ಲವೆಂದು ವಾದಿಸುತ್ತಿದ್ದೀಯಾ! ಇದು ನಿನಗೆ ಸಮಂಜಸವೇ?

     ಭರತ : ಮಹಾರಾಜಾ! ನೀನು ಪ್ರತ್ಯಕ್ಷ ಗೋಚರವನ್ನುತ್ತಿರುವುದು ಆಧಾರಾಯದ್ಯೇ ಭಾವವನ್ನು ಆಧರಿಸಿ ಮಾಡಿದ ನಿರೂಪಣೆಯಲ್ಲಿ ಯಾವುದನ್ನು ಪ್ರತ್ಯಕ್ಷವೆಂದು ನೀನು ಹೇಳುತ್ತಿದ್ದೀಯೋ ಆ ಪ್ರಮಾಣ ವಿಮರ್ಶೆಗೆ ಸಾಕ್ಷಿ ಏನು? ನಾನು ಪಲ್ಲಕ್ಕಿಯನ್ನು ಹೊತ್ತಿದ್ದು ನೀನು ಅಂದುಕೊಳ್ಳುತ್ತಿರುವ ಪ್ರತ್ಯಕ್ಷ ಪ್ರಮಾಣಕ್ಕೆ ವಿಷಯದಲ್ಲ, ಪಲ್ಲಕ್ಕಿಯ ಭಾರವು ನನ್ನ ಮೇಲಿದ್ದುದೂ ಸಹ ತರ್ಕ ಯೋಗ್ಯವಾದ ವ್ಯವಹಾರವಲ್ಲ. ಇವೆರಡೂ ಮಿಥ್ಯ ಪ್ರಸಂಗಗಳೇ! ಇಲ್ಲಿ ಕೇಳು!” ಎಂದು ಹೇಳಿ ಭರತ ವಿಪ್ರನು ಸೌವೀರನ್ನ ಪತಿಗೆ ಪರಮಾರ್ಥದ ವಿವೇಕವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ ಉಪದೇಶಿಸಿದನು. ನರಹತೀ! ನೀನು ಪ್ರತ್ಯಕ್ಷ ಪ್ರಮಾಣದಿಂದ ಸತ್ಯವೆಂದು ಹೇಳಿದ ಸನ್ನಿವೇಶವನ್ನು ಒಮ್ಮೆ ಸುಮತಿಯನಾಗಿ ಪರಿಶೀಲಿಸಿ ನೋಡು. ನನ್ನ ಪಾದಗಳು ನೆಲದ ಮೇಲೆ ನಿಂತಿದ್ದು ಸ್ಥಿಮಿತವಾಗಿವೆ. ಅವುಗಳ ಭಾರವನ್ನು ನೆಲ ಹೊರುತ್ತಿದೆ. ಪಾದಗಳು ಅವುಗಳ ಮೇಲಿರುವ ತೊಡೆಗಳ ಭಾರವನ್ನು ಹೊರುತ್ತಿವೆ. ತೊಡೆಗಳು ಸೊಂಟದ ಭಾರವನ್ನು ಹೊರುತ್ತಿವೆ. ಸೊಂಟವು ಹೊಟ್ಟೆಯ ಭಾರವನ್ನು ಹೊರುತ್ತಿವೆ. ಆ ಹೊಟ್ಟೆಯ ಮೇಲೆ ಪಕ್ಷೆಭರವಿದೆ. ವಕ್ಷಸ್ಸು ಭುಜಗಳ ಭಾರವನ್ನು ಹೊರುತ್ತಿದೆ, ಭುಜಗಳು ಪಲ್ಲಕ್ಕಿಯ ಭಾರವನ್ನು ಹೊರುತ್ತಿವೆ. ನೃಪಾಲಾ! ಶರೀರದಲ್ಲಿ ಉಪರಿ ಉಪರಿಯಾಗಿ ಅಳವಡಿಸಿದ ವಿವಿಧ ಅವಯವಗಳು ಶಿಬಿಕಾ ಭಾರವನ್ನು ಏಕ ಸಮಯದಲ್ಲಿ ಹೊರಲ್ಪಡುತ್ತಿವೆ. ಇವುಗಳಲ್ಲಿ ಯಾವೊಂದೂ ಪ್ರತ್ಯೇಕವಾಗಿ ನಾನು ಎಂದು ಹೇಳುವ ವ್ಯವಹಾರಕ್ಕೆ ಉಪಲಕ್ಷಣವಲ್ಲ. ಇವುಗಳ ಸಮಾಹಾರ ರೂಪಕ್ಕಾದರೂ ಪೃಥವ್ಯಾದಿ ದ್ರವ್ಯಗುಣವಿರಹಿತವಾಗಿ ವ್ಯವಹಾರವಿಲ್ಲ.

        ಇಂದು ರಾಜಲಾಂಛನಗಳೊಂದಿಗೆ ಪಲ್ಲಕ್ಕಿಯನ್ನು ಹತ್ತಿ ಸುಖಾಸನಸೀನನಾದ ಒಂದು ಶರೀರವನ್ನು ನಿನ್ನನ್ನು ಪಾರ್ಥಿವೇಂದ್ರನು ಎಂದೂ, ಪಲ್ಲಕ್ಕಿಯನ್ನು ಭುಜಗಳ ಮೇಲೆ ಹೊತ್ತಂತಹ ಒಂದು ಶರೀರವನ್ನು ನನ್ನನ್ನು ವಾಹಕನೆಂದು ಹೇಳುತ್ತಿರುವ ವ್ಯವಹಾರವು ಶರೀರಭೇದದಿಂದ ಏರ್ಪಟ್ಟಿರುವುದು. ಈ ನಮ್ಮ ಎರಡೂ ದೇಹಗಳನ್ನೇ ಅಲ್ಲದೇ ಸೃಷ್ಟಿಯಲ್ಲಿ ಉತ್ಪನ್ನವಾದ ಸಮಸ್ತ ಭೂತರಾಶಿಯನ್ನು ಪೃಥಿವ್ಯತ್ತೇಜೋ ವಾಯುವ್ಯಾಕಾಶ ದ್ರವಪಂಚಕ ವಹಿಸುತ್ತಿದೆ. ಸತ್ತ ರಜೋ ತಮಸ್ಸುಗಳೆಂಬ ಮೂರು ಗುಣಗಳ ಪರಿಣಾಮ ರೂಪವಾದ ಸುಳಿಯಲ್ಲಿ ಬಿದ್ದು ದೇಹವು ವರ್ತಿಸುತ್ತಿದೆ. ಎಲೈ

ಮಹೀನಾಯಕನೇ! ಲೋಕದಲ್ಲಿ ನಾನು ನೀನು ಎಂಬ ಉಪಾಧಿಬೇಧದಿಂದ ದ್ವಿದಾಭೂತವಾಗಿ ಹುಟ್ಟಿದ ವ್ಯವಹಾರಕ್ಕೆ ಅವಿದ್ಯೆಯೇ ಕಾರಣ. ಈ ಅವಿದ್ಯೆಯಿಂದ ಸವಾಂತರ್ಕವಾದ ಆತ್ಮಸ್ವರೂಪವನ್ನು ತಿಳಿಯುವವರೆಗೂ ಬುದ್ದಿಗೆ ನಾಮರೂಪಗಳ ಉಪಾಧಿದೃಷ್ಟಿ ಮಾತ್ರವೇ ಗೋಚರಿಸುತ್ತದೆ. ಅಂತಹ ದೃಷ್ಟಿಗೆ ಈ ಸೃಷ್ಟಿಯಲ್ಲಿನ ವಿವಿಧ ನಾಮರೂಪಗಳೊಂದಿಗೆ ಅನೇಕ ಪದಾರ್ಥಗಳಿವೆಯೆಂದು, ಅವೆಲ್ಲವೂ ವಿಭಿನ್ನ ಆತ್ಮಗಳೆಂದು ಗೋಚರಿಸುತ್ತದೆ. ನಾನು ಎಂಬ ಉಪಾಧಿಯಲ್ಲಿರುವ ಆತ್ಮವು ಯುಷ್ಕದುಪಾಧಿಯಲ್ಲಿರುವ ಆತ್ಮವು ಒಂದೇನೇ? ಅಥವಾ ಸಮಾನ ಲಕ್ಷಣಗಳನ್ನುಳ್ಳ ಎರಡು ಭಿನ್ನಾತ್ಮಗಳೇ? ಎಂಬ ಸಂದೇಹವುಂಟಾದಾಗ ಸ್ಕೂಲ ದೃಷ್ಟಿಗೆ ಅವೆರಡೂ ಬೇರೆ ಬೇರೆಯಾಗಿರುವಂತೆಯೇ ಕಾಣಿಸುತ್ತದೆ. ಈ ನಾನಾತ್ವ ವ್ಯವಹಾರ ದೃಷ್ಟಿಯು ಜೀವಿಗೆ ಸ್ವಾಭಾವಿಕವಾದ ಅವಿದ್ಯೆಯಿಂದ ಸಂಕ್ರಮಿಸಿದ ಲಕ್ಷಣ. ಕರ್ಮಕ್ಕೆ ಒಳಗಾಗಿ ವರ್ತಿಸಿದ ದೇಹಕ್ಕೆ ಕರ್ಮಸಂಚಯದಿಂದ ಹಾನಿವೃದ್ಧಿಗಳೇರ್ಪಟ್ಟಾಗ ಗುಣಾತೀತವಾಗಿ, ಶುದ್ಧ ಚೈತನ್ಯಸ್ವರೂಪವಾದ ಆತ್ಮಕ್ಕೆ ಸಂಪ್ರಾಪ್ತಿಯಾಗುವುದಿಲ್ಲ. ಮಹಾರಾಜಾ! ಆಯಾಸದ ದೇಹದೊಂದಿಗೆ ಇದ್ದುದರಿಂದ ಪಲ್ಲಕ್ಕಿಯನ್ನು ಸರಿಯಾಗಿ ಹೊರದೇಯಿದ್ದುದಕ್ಕಾಗಿ ನಿನಗೆ ಶರೀರಾಯಾಸ ಉಂಟಾಗಿದೆಯಂದು ಹೇಳುತ್ತಿದ್ದೀಯಾ. ಅಸತ್ಯವಾದ ಈ ದುರ್ಬಲ ಯುಕ್ತಿಯು ನಿನಗೆ ಸರ್ವಾನರ್ತವಾದ ಆತ್ಮಜ್ಞಾನವಿಲ್ಲದೇ ಯಿರುವುದರಿಂದ ಸಂಭವಿಸಿದೆ. ಈ ರೀತಿಯಾದ ನಾನಾತ್ವ ವ್ಯವಹಾರವು ಮಿಥ್ಯಾಭೂತವೆಂದು ಗ್ರಹಿಸದೇ ಹೋದರೂ ಪ್ರತ್ಯಕ್ಷ ಪ್ರಮಾಣವನ್ನು ತೋರಿಸುವುದು ದೊಡ್ಡ ಸತ್ಯಾಸತ್ಯತೆಯೆಂಬಂತೆ ನೀನು ಅನರ್ಥಾಪಾದಕವಾಗಿ ಪ್ರಸಂಗಿಸಿದೆ. ಅಷ್ಟೇ ಅಲ್ಲದೇ ಈ ಪಲ್ಲಕ್ಕಿಯ ಭಾರವು ಸ್ಥಿತಿವಾಗಿರುವುದು ನನ್ನ ಕಡೆಯಿಂದ ಎಷ್ಟು ಸತ್ಯವೋ ನಿನ್ನ ಕಡೆಯೂ ಸಹ ಅಷ್ಟೇ ಸತ್ಯವಾದುದು. ಭೂಮಿ, ಪಾದಗಳು, ಸೊಂಟ, ಉದರ, ತೊಡೆಗಳು, ವಕ್ಷಸ್ಥಳ, ಭುಜಗಳು ಇವೆಲ್ಲದರ ಮೇಲೂ ಆಧಾರವಾಗಿರುವ ಪಲ್ಲಕ್ಕಿಯನ್ನು ಹೊಂದುತ್ತಿರುವ ಕರ್ಮದೇಹಕ್ಕೂ, ಸುಖವಾಗಿರುವ ಶರೀರಕ್ಕೂ ಇರುವ ಕಿಂಚಿತ್ತನ್ನಾದರೂ ವ್ಯವಹಾರಬೇಧವನ್ನು ಪರಿತ್ಯಜಿಸು ಎಂದು ಶಾಂತವದನನಾಗಿಯೇ ಹೇಳಿ ಆಧರಾಮರೇಂದ್ರನು ಮತ್ತೆ ಪಲ್ಲಕ್ಕಿಯನ್ನು ತನ್ನ ಭುಜಗಳ ಮೇಲಕ್ಕೆತ್ತಿಕೊಂಡು ಮೌನವಾಗಿ ಮುಂದೆ ನಡೆಯಲಾರಂಭಿಸಿದನು.

       ಈ ರೀತಿಯಾಗಿ ಪರಮ ದುರ್ಲಭವಾದ ತತ್ತ್ವ ವಿವೇಕವನ್ನು ತನಗೆ ಅನಾಯಾಸವಾಗಿ ಪ್ರಸಾದಿಸಿದ ಆ ಬ್ರಹ್ಮ ವಿದ್ಯಾದರನ ವಿನಯ ವಿಧೇಯತೆಗಳಿಗೆ ಸೌವೀರನೃಪತಿ ಮುಗ್ಧನಾದನು. ಮಹಾವಿಷ್ಣುವಿನ ರೂಪವನ್ನು ತಳೆದು ಅಪಕೃಷ್ಣದ್ವಿಜನನ್ನು ಕಳೆದು ಸಂಚರಿಷ್ಟುವಾದ ಆ ಮಹಾತ್ಮನು ತನಗೆ ಸನ್ನಿಧಿಯನ್ನು ಅನುಗ್ರಹಿಸಿ, ಧರ್ಮಾವೇಶದೊಂದಿಗೆ ಮಾಡಿದ ಸದುಪದೇಶವನ್ನು ನೆನೆದು ಆತನ

ಕಣ್ಣುಗಳಲ್ಲಿ ಕೃತಜ್ಞತೆಯು ಕಾಣಿಸಿತು. ಕೂಡಲೇ ಆತನು ಪಲ್ಲಕ್ಕಿಯನ್ನಿಳಿದು ಭರತನ ಪಾದಕಮಲಗಳನ್ನು ಮುಟ್ಟಿ ನಮಸ್ಕರಿಸಿ ಸವಿನಯವಾಗಿ ಹೀಗೆಂದನು – “ಮಹಾತ್ಮಾ। ಪ್ರಚ್ಚನ್ನ ವೇಷವನ್ನು ಧರಿಸಿದರೂ ನಿಮ್ಮಲ್ಲಿ ಎದ್ದು ಕಾಣುತ್ತಿರುವ ವಿಜ್ಞಾನ ದೀಪ್ತಿಯನ್ನು ಗುರ್ತಿಸದೇ ಹೋದ ಅವಿವೇಕಿ ನಾನು.  ಕ್ಷಾತವ್ಯವೆನ್ನುವುದಕ್ಕೂ ಸಹ ನನಗೆ ಬಾಯಿಂದ ಮಾತೇ ಬರದಂತಾಗಿದೆ. ಮೊದಲು ನೀವು ಆ ಪಲ್ಲಕ್ಕಿಯನ್ನು ಹೊರುವುದು ಬಿಡಿ. ನಿಮ್ಮಿಂದ ಭಾರವನ್ನು ಹೊರಿಸಿದ ನನ್ನ ತಪ್ಪನ್ನು ಕ್ಷಮಿಸಿ, ನನ್ನನ್ನು ಕರುಣಿಸಿರಿ. ಆರ್ಯಾ! ಬ್ರಹ್ಮ ಜ್ಞಾನ ಸಂಪನ್ನರಾದ ನೀವು ಈ ರೀತಿಯಾಗಿ ಜಾಲ್ಕಮೃತ್ತಿಯಲ್ಲಿ ಏಕೆ ನಡೆಯುತ್ತಿದ್ದೀರಾ? ಈ ನೀಚಕರ್ಮಕ್ಕೆ ಹೇಗೆ ಪ್ರವೇಶಿಸಿದಿರಿ? ನೀವು ಯಾರು? ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲದೊಂದಿಗೆ ಕೇಳಿದ್ದಕ್ಕಾಗಿ ನನ್ನನ್ನು ಕ್ಷಮಿಸಿರಿ. ಎಂದು ಪ್ರಾರ್ಥಿಸಿದ ಸೌವೀರನನ್ನು ಕಂಡು ಆ ವಿಪ್ರಮೋತ್ತಮನು ಈ ರೀತಿ ಉತ್ತರಿಸಿದನು : ”ರಾಜೇಂದ್ರಾ! ಸರ್ವ ಅನುಭವಯುಕ್ತರಿಗೂ ಉಪಯುಕ್ತವಾದ ‘ಸೋ, ಹಂ’ ಎಂಬ ತತ್ವಾ ರ್ಥವನ್ನು, ಸ್ವಂತ ಅನುಭವದಿಂದ ಗ್ರಹಿಸಬೇಕೆಂಬ ಬಯಕೆಯಿದ್ದರೆ ಜೀವಿಗೆ ದೇಹಧಾರಣೆಯು ತಪ್ಪುವುದಿಲ್ಲ. ಈ ದೇಹವು ಕರ್ಮಾನುಭವ ನಿಮಿತ್ತವಾಗಿ ಉಂಟಾಗುತ್ತದೆ. ಆ ಉಪಭೋಗ ವಾಂಛೆ ಕಷ್ಟಗಳಿಂದಲೇ ನಾನೂ ಸಹ ಉದ್ಭವಿಸಿದೆನು. ಈ ಜೀವಿಗೆ ದೇಶ ಕಾಲವಶಾತ್ ಸುಖ ದುಃಖಗಳು ಉಂಟಾಗುತ್ತವೆ. ಜೀವಿಗಳಿಗೆ ಸುಖ ದುಃಖ ಪರಂಪರೆಯನ್ನು ಧರ್ಮಾಧರ್ಮಗಳೇ ಉಂಟುಮಾಡುತ್ತವೆ. ಈ ಧರ್ಮಾಧರ್ಮ ಗಳೆರಡೂ ಮಾನವರಿಗೆ ಕರ್ಮಗಳನ್ನು ಉಪಭೋಗಿಸುವುದಕ್ಕೆ ನಿಮಿತ್ತವಾದವುಗಳು. ಇವುಗಳಿಂದ ಆಗಮನ ಸ್ಪುರಣವುಂಟಾಗಿ ಜೀವಿಗಳಿಗೆ ಮೋಕ್ಷಾಭಿಲಾಷೆಯು ಹುಟ್ಟಿ ಕರ್ಮ ಸಂಚಯವು ಉಪಶಮನವಾಗುತ್ತದೆ” ಎಂದನು. ಆ ಮಾತುಗಳನ್ನು ಕೇಳಿದ ಸೌವೀರನೃಪತಿ ಮಹೀ ಸುರೋತ್ತಮಾ! ನೀವು ನಿರೂಪಿಸಿದ ಯುಕ್ತ ಪ್ರತ್ಯುಕ್ತಿಗಳಿಂದ ನನಗೆ ಸಹೇತುಕವಾದಂತಹ ಜ್ಞಾನ ಸ್ವರೂಪವು ಅವಗತಪ್ರಾಯವಾಗುತ್ತಿವೆ. ಆದರೆ ನೀವು ಹೇಳಿದ ‘ಸೋ-ಹಂ’ ಎಂಬ ಅಕ್ಷರಗಳ ತಾತ್ಪರ್ಯಾರ್ಥವು ನನ್ನ ಮನಸ್ಸಿಗೆ ಅರ್ಥವಾಗಲಿಲ್ಲ. ಈ ಮಹಾ ವಾಕ್ಯವನ್ನು ಸಕಲ ಚರಾಚರ ವಸ್ತು ಜೀವರಾಶಿಗೂ ಅನ್ವಯಿಸುವುದು ಯೋಗ್ಯವೇ? ಅಥವಾ ಸರ್ವಾಂತರವಾದ ಆತ್ಮಕ್ಕೆ ಉಪ ಲಕ್ಷಣವಾಗಿ ಅನ್ವಯಿಸುವುದು ಸರಿಯೇ? ಇದನ್ನು ನನಗೆ ವಿಶದೀಕರಿಸಿ ಹೇಳಿರಿ” ಎಂದು ಪ್ರಾರ್ಥಿಸಿದನು. ಸೌವೀರನ ಪ್ರಜೆಗಳಿಗೆ ಉತ್ತರವಾಗಿ ಭರತ ಬ್ರಾಹ್ಮಣನು ಪರಮಾರ್ಥ ಸಾರವನ್ನು ಉಪದೇಶಿಸಿದನು.