ಮನೆ ಸುದ್ದಿ ಜಾಲ ಅಪಘಾತ: ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ

ಅಪಘಾತ: ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ

0

ಬೆಂಗಳೂರು: ಕನ್ನಡದ ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್(Nannamma super star) ರಿಯಾಲಿಟಿ ಶೋನ ಸ್ಪರ್ಧಿಗಳಾಗಿದ್ದ ಅಮೃತಾ ನಾಯ್ದು ಹಾಗೂ ಆಕೆಯ ಮಗಳು ಸಮನ್ವಿ ಅಪಘಾತಕ್ಕೀಡಾಗಿದ್ದು, ಮಗಳು ಸಮನ್ವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಇಂದು ಮರಣೋತ್ತರ ಪರೀಕ್ಷೆ ಬಳಿಕ ಮಗುವಿನ ಮೃತದೇಹವನ್ನು ಕುಟುಂಬ್ಥರಿಗೆ ಹಸ್ತಾಂತರಿಸಲಾಗುತ್ತಿದ್ದು, ತಾಯಿ ಚಿಕಿತ್ಸೆಯಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ

ಸಮನ್ವಿ (6) ಹಿರಿಯ ಹರಿಕಥಾ ಕಲಾವಿದ ದಿವಂಗತ ಗುರುರಾಜ್ ನಾಯ್ಡು ಮೊಮ್ಮಗಳಾಗಿದ್ದು, ಸದ್ಯ ಬಾಲಕಿಯ ಮೃತದೇಹ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿದೆ.  ಪುಟಾಣಿ ಸಮನ್ವಿಯ ನಿಧನಕ್ಕೆ ಸ್ಯಾಂಡಲ್ ವುಡ್ನ ಕಲಾವಿದರಾದ ಕಿಚ್ಚ ಸುದೀಪ್, ತಾರಾ ಅನುರಾಧ್, ಅನುಪ್ರಭಾಕರ್, ಸೃಜನ್ ಲೋಕೇಶ್ ಸೇರಿದಂತೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ. 

ಅಪಘತ ನಡೆದಿದ್ದು ಹೇಗೆ? : ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸಂಜೆ ಹೊತ್ತು ಶಾಪಿಂಗ್ ಮಾಡಲೆಂದು ತಾಯಿ-ಮಗಳು ಸ್ಕೂಟರ್ ಮೇಲೆ ಹೋಗುತ್ತಿದ್ದ ವೇಳೆ ಸ್ಕೂಟರ್​ಗೆ ಹಿಂದಿನಿಂದ  ಟಿಪ್ಪರ್  ಢಿಕ್ಕಿ ಹೊಡೆದಿದ್ದು, ಚಕ್ರದಡಿಗೆ ಸಿಲುಕಿ ಪುಟ್ಟ ಬಾಲಕಿ ಸಮನ್ವಿ ಸ್ಥಳದಲ್ಲೇ ಮೃತಪಟ್ಟರೆ, ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಟಿಪ್ಪರ್ ಚಾಲಕನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಟಿಪ್ಪರ್ ಚಾಲಕನನ್ನು ಬಂಧಿಸಲಾಗಿದೆ.

ಆಟೋ ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಟಿಪ್ಪರ್ ಚಾಲಕ  ಮಂಚೇಗೌಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.