ಮನೆ ಸುದ್ದಿ ಜಾಲ ಅರ್ಜಿ ಹಾಕಿ ಆರು ತಿಂಗಳಾದರು ರೈತನಿಗೆ ಸ್ಪಿಂಕ್ಲರ್ ನೀಡದ ಕೃಷಿ ಇಲಾಖೆ

ಅರ್ಜಿ ಹಾಕಿ ಆರು ತಿಂಗಳಾದರು ರೈತನಿಗೆ ಸ್ಪಿಂಕ್ಲರ್ ನೀಡದ ಕೃಷಿ ಇಲಾಖೆ

0

ಗುಂಡ್ಲುಪೇಟೆ: ತಾಲ್ಲೂಕಿನ ರೈತರು ನೀರಾವರಿ ಉಪಯೋಗಕ್ಕಾಗಿ ಸ್ಪಿಂಕ್ಲರ್ ಗೆ ಅರ್ಜಿ ಹಾಕಿದ್ದಾರೆ ತಾಲ್ಲೂಕಿನ ಹಸಗೂಲಿ ಗ್ರಾಮದ ರಾಜು ಬಿನ್ ಮಾದಪ್ಪ ಎಂಬುವವರು ಅರ್ಜಿ ಹಾಕಿ ಆರೇಳು ತಿಂಗಳು ಕಳೆದಿದ್ದು ಡಿಡಿ ಕಟ್ಟಿ ಒಂದು ತಿಂಗಳು ಕಳೆದಿದ್ದರೂ ಇನ್ನೂ ಸ್ಪಿಂಕ್ಲರ್ ಪೈಪ್ ನೀಡಿಲ್ಲ ತಮಗೆ ಬೇಕಾದವರಿಗೆ ಅರ್ಜಿ ಹಾಕಿ 15 ರಿಂದ 20 ದಿನದಲ್ಲಿಯೇ ನೀಡುತ್ತಾರೆ ನಮಗೆ ನೀಡದೆ ಸತಾಯಿಸುತ್ತಾರೆ ಎಂದು ಆರೋಪಿಸಿದರು.
ನಾನು ಬೇಗೂರು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಅರೇಳು ತಿಂಗಳ ನಂತರ ಡಿಡಿ ಕಟ್ಟುವಂತೆ ತಿಳಿಸಿದರು ಅದರಂತೆ ಸಾವಿರದ ಒಂಬೈನೂರು ಚಿಲ್ಲರೆ ಡಿಡಿ ಕಟ್ಟಿ ಒಂದು ತಿಂಗಳ ಮೇಲಾಗಿದೆ ಸ್ಪಿಂಕ್ಲರ್ ಸೆಟ್ ವಿತರಿಸಿಲ್ಲ ಯಾವಾಗ ಹೋಗಿ ಕೇಳಿದರೂ ನೀಡದೆ ಸತಾಯಿಸುತ್ತಾರೆ ಎಂದು ಆರೋಪಿಸಿದರು.

ನಾನು ಅರೇಳು ತಿಂಗಳ ಹಿಂದೆ ಸ್ಪಿಂಕ್ಲರ್ ಗೆ ಅರ್ಜಿ ಹಾಕಿ ಒಂದು ತಿಂಗಳ ಹಿಂದೆಯೇ ಡಿಡಿ ಕಟ್ಟಿದ್ದರು ಸ್ಪಿಂಕ್ಲರ್ ನೀಡದೆ ಅಲೆದಾಡಿಸುತಿದ್ದಾರೆ.
– ರಾಜು ರೈತ ಹಸಗೂಲಿ ಗ್ರಾಮ


ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಾಗಲಿ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳಾಗಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ರೈತರನ್ನು ಅಲೆದಾಡಿಸದೆ ಅವರ ಬಳಿ ಅಹಂ ವರ್ತನೆ ತೋರದೆ ಕೆಲಸ ನಿರ್ವಹಿಸಬೇಕು ಎಂಬುದು ಸಾರ್ವಜನಿಕರ ಅಬಿಪ್ರಾಯ.
ಅದಷ್ಟು ಬೇಗ ಸಬೂಬು ಹೇಳದೆ ರೈತರನ್ನು ರೈತಸಂಪರ್ಕ ಕೇಂದ್ರಕ್ಕೆ ಅಲೆದಾಡಿಸದೆ ಸ್ಪಿಂಕ್ಲರ್ ಸೆಟ್ ಅಥವ ಇನ್ನಿತರ ಉಪಕರಣಗಳನ್ನು ವಿತರಿಸಬೇಕು ಎಂಬುದು ರೈತರ ಒತ್ತಾಯ.

ಹಿಂದಿನ ಲೇಖನಶ್ರೀನಗರದಲ್ಲಿ ‘ನಿಗೂಢ ಸ್ಫೋಟ’: ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ
ಮುಂದಿನ ಲೇಖನಶೀನಾ ಬೋರಾ ಹತ್ಯೆ ಪ್ರಕರಣ: ಮಹಾರಾಷ್ಟ್ರ ಸರ್ಕಾರ, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್