ಮನೆ ಅಪರಾಧ ಶ್ರೀನಗರದಲ್ಲಿ ‘ನಿಗೂಢ ಸ್ಫೋಟ’: ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ

ಶ್ರೀನಗರದಲ್ಲಿ ‘ನಿಗೂಢ ಸ್ಫೋಟ’: ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ

0

ಶ್ರೀನಗರ: ಶ್ರೀನಗರದ ಖವಾಜಾ ಬಜಾರ್ ಪ್ರದೇಶದಲ್ಲಿ ನಿಗೂಢ ಸ್ಫೋಟಕ್ಕೆ ಅಂಗಡಿಗೆ ಹಾನಿಯಾಗಿದ್ದು, ಇದು ಪಾಕಿಸ್ತಾನ ಸೇನೆ ಅಥವಾ ಉಗ್ರಗಾಮಿಗಳು ನಡೆಸಿದ ಗ್ರೆನೇಡ್​ ದಾಳಿಯಾಗಿರಬಹುದಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಶ್ರೀನಗರದಲ್ಲಿ ಭಾರತೀಯ ಸೇನಾಪಡೆಗಳು ಉಗ್ರರನ್ನು ಮಟ್ಟ ಹಾಕುತ್ತಿರುವ ಹಿನ್ನೆಲೆ ಸಿಆರ್​ಪಿಎಫ್​ ಯೋಧರ ನೆಲೆಯ ಮೇಲೆ ಗ್ರೆನೇಡ್​ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.ಆದರೆ, ಈ ಬಗ್ಗೆ ‘ಈಟಿವಿ ಭಾರತ್’​ ಜೊತೆ ಮಾತನಾಡಿರುವ ಶ್ರೀನಗರ ಎಸ್‌ಎಸ್‌ಪಿ ರಾಕೇಶ್ ಬಲ್ವಾಲ್, ಇದು ಗ್ರೆನೇಡ್ ದಾಳಿಯಲ್ಲ. ಆದರೆ, ನಿಗೂಢ ಸ್ಫೋಟವಾಗಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಘಟನೆಯಲ್ಲಿ ಇದುವರೆಗೆ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು. ಸ್ಫೋಟದ ಸ್ಥಳಕ್ಕೆ ಪೊಲೀಸ್ ತಂಡ ಆಗಮಿಸಿದ್ದು, ಮಾಹಿತಿ ಕಲೆ ಹಾಕುತ್ತಿದೆ.

ಹಿಂದಿನ ಲೇಖನಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ ಗುರಿ: 3 ಒಡಂಬಡಿಕೆಗಳಿಗೆ ಅಂಕಿತ
ಮುಂದಿನ ಲೇಖನಅರ್ಜಿ ಹಾಕಿ ಆರು ತಿಂಗಳಾದರು ರೈತನಿಗೆ ಸ್ಪಿಂಕ್ಲರ್ ನೀಡದ ಕೃಷಿ ಇಲಾಖೆ