ಮನೆ ಶಿಕ್ಷಣ ಗಂಡ-ಹೆಂಡತಿ ಯಾವ ರೀತಿ ಮಲಗುತ್ತಾರೆ ಎಂಬುವುದು ಅವರಿಬ್ಬರ ನಡುವಿನ ಪ್ರೀತಿಯ ಆಳವನ್ನು ತೋರಿಸುತ್ತದೆಯಂತೆ.

ಗಂಡ-ಹೆಂಡತಿ ಯಾವ ರೀತಿ ಮಲಗುತ್ತಾರೆ ಎಂಬುವುದು ಅವರಿಬ್ಬರ ನಡುವಿನ ಪ್ರೀತಿಯ ಆಳವನ್ನು ತೋರಿಸುತ್ತದೆಯಂತೆ.

0
ಸಂಗಾತಿಯ ಪ್ರೀತಿಯ ಅಪ್ಪುಗೆಯಿಂದ ದೊರೆಯುವ ಪ್ರಯೋಜನಗಳು

ಚಿಕ್ಕ-ಪುಟ್ಟ ಮುನಿಸು ಇದ್ದಾಗ ಬೆನ್ನು ತಿರುಗಿಸಿ ಮಲಗುವುದು ಬೇರೆ, ಸರಸ-ವಿರಸ ಇವೆಲ್ಲಾ ಸಂಸಾರದಲ್ಲಿ ಸಹಜ ತಾನೇ? ಆದರೆ ಪ್ರತೀದಿನ ಬೆನ್ನು ತಿರುಗಿಸಿ ಮಲಗುವುದು ಅದು ಸಂಸಾರದಲ್ಲಿ ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದರೆ ನೀವು ಕೂಡ ಒಪ್ಪುತ್ತೀರಿ ತಾನೇ?

ಹೌದು ಒಂದು ಬೆಡ್‌ನಲ್ಲಿ ಗಂಡ-ಹೆಂಡತಿ ಮಲಗಿದಾಗ ಅವರಿಬ್ಬರ ನಡುವೆ ಒಂದು ಬಿಸಿ ಅಪ್ಪುಗೆ, ಪ್ರೀತಿಯ ಚುಂಬನ, ಮನಸ್ಸು ಬಿಚ್ಚಿ ಎರಡು ಮಾತು ಇವೆಲ್ಲಾ ಇಲ್ಲದಿದ್ದರೆ ಆ ಸಂಸಾರದಲ್ಲಿ ಮಾಧುರ್ಯ ಇರಲು ಸಾಧ್ಯವೇ? ದೈಹಿಕ ಆಸೆ ಎನ್ನುವುದು ಪ್ರಕೃತಿ ಸಹಜವಾದ ಆಸೆಯಾಗಿದೆ. ನಮ್ಮ ಆ ಆಸೆಗೆ ಸಂಸಾರವೆಂಬ ಸುಂದರ ಚೌಕಷ್ಟು ಹಾಕಿ ಜೀವನ ನಡೆಸುತ್ತೇವೆ, ಆದರೆ ಸಂಸಾರ ಇನ್ನೂ ಯೌವನ ಹಂತದಲ್ಲಿರುವಾಗ ಅವರಿಬ್ಬರ ನಡುವೆ ಒಂದು ಬಿಸಿ ಅಪ್ಪುಗೆ, ಪಿಸು ಮಾತು ಇಲ್ಲ ಅಂದ್ರೆ ಆ ಸಂಬಂಧದ ಹಳಿ ತಪ್ಪಿದೆ ಎಂದು ಹೇಳಬಹುದು.

ಆದ್ದರಿಂದ ತೃಪ್ತಿಕರವಾ ಸಂಸಾರ ಎಂದ ಮೇಲೆ ಪ್ರೀತಿ, ಕಾಮ, ಪ್ರೇಮ, ಸ್ನೇಹ ಎಲ್ಲವೂ ಇರಲೇಬೇಕು. ಸಂಗಾತಿಯ ಒಂದು ಅಪ್ಪುಗೆ ಅವರು ನಮ್ಮ ಮೇಲಿಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಸೆಕ್ಸ್‌ ಎಕ್ಸ್‌ಪರ್ಟ್ ಗೇರ್ ಪ್ರಕಾರ ಒಂದೊಂದು ಅಪ್ಪುಗೆಯ ಭಂಗಿ ಒಂದೊಂದು ಅರ್ಥವನ್ನು ಸೂಚಿಸುತ್ತದೆಯಂತೆ, ಯಾವ ಬಗೆಯ ಅಪ್ಪುಗೆ ಏನನ್ನು ಸೂಚಿಸುತ್ತದೆ ಎಂದು ನೋಡೋಣ ಬನ್ನಿ:

ಸ್ಪೂನಿಂಗ್  

ಗಂಡ ಹೆಂಡತಿ ಇಬ್ಬರೂ ಒಂದೇ ಕಡೆ ಮುಖ ಮಾಡಿ ಮಲಗುವುದು. ಒಬ್ಬರು ಮತ್ತೊಬ್ಬರನ್ನು ಅಪ್ಪಿಕೊಂಡು ಒಂದೇ ಕಡೆ ಮುಖ ಮಾಡಿ ಮಲಗಿದರೆ ಅವರಿಬ್ಬರ ಯೋಚನೆ ರೀತಿ ಒಂದೇ ರೀತಿ ಇರುತ್ತದೆಯಂತೆ.

ಸಂಗಾತಿಯೊದಿಗಿನ ಬೆಚ್ಚನೆಯ ನಿದ್ರೆ.

 • ಸಂಗಾತಿಯ ಎದೆ ಮೇಲೆ ತಲೆ ಇಟ್ಟು ಮಲಗುವುದು ಸಂಗಾತಿಯ ಎದೆ ಮೇಲೆ ತಲೆ ಇಟ್ಟು ಮಲಗಿದಾಗ ತುಂಬಾ ಸುರಕ್ಷತೆ ಫೀಲ್ ಆಗುವುದಂತೆ. ಅವರಿಬ್ಬರು ದೈಹೆಕವಾಗಿ ಮಾನಸಿಕವಾಗಿ ಒಬ್ಬರಿಗೊಬ್ಬರು ಬೆಸೆದಿರುತ್ತಾರಂತೆ.
 • ಬೆನ್ನಿಗೆ ಬೆನ್ನು ತಾಗಿಸಿ ಮಲಗುವುದು ಹೀಗೆ ಮಲಗಿದರೆ ಇಬ್ಬರು ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಾರೆ ಎಂದರ್ಥ. ನಿಮಗೆ ಅವರನ್ನು ಅಪ್ಪಿಕೊಳ್ಳಬೇಕೆಂದು ಅನಿಸುತ್ತಿರುತ್ತದೆ. ಆದರೆ ಅವರ ಕಂಫರ್ಟ್ಗೆ ಅಡ್ಡಿಯಾಗಬಹುದು ಎಂದು ಯೋಚಿಸಿ ಸುಮ್ಮನಾಗುತ್ತೀರಿ. ಇಬ್ಬರಿಗೂ ಪರಸ್ಪರ ಪ್ರೀತಿಸುತ್ತೀರಿ.
 • ಕಾಲು ಹಾಕೆ ಮಲಗುವುದು ನಿಮ್ಮ ಸಂಗಾತಿ ಮೇಲೆ ಕಾಲು ಹಾಕಿ ಮಲಗುವುದು ನಿಮಿಬ್ಬ ನಡುವಿನ ಬಂಧ ಎಷ್ಟು ಬಿಗಿಯಾಗಿದೆ ಎಂಬುದನ್ನು ಸುಚಿಸುತ್ತದೆ.
 • ಮುಖ – ಮುಖ ಕೊಟ್ಟು ಮಲಗುವುದು ಯಾರು ಈ ರೀತಿ ಅಪ್ಪಿಕೊಂಡು ಮಲಗುತ್ತಾರೋ ಆ ಜೋಡಿಗಳು ಊಟ, ವೈಯಕ್ತಿಕ, ಬ್ಯುಸ್ನೆಸ್,ವೈಯಕ್ತಿಕ ವಿಷಯಗಳು ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಾರೆ.
 • ಬೆನ್ನಿಗೆ ಕೈ ಹಾಕಿ ಮಲಗುವುದು ನನ್ನ ಸಂಗಾತಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನೀವು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇದು ಈ ರೀತಿಯ ಭಾವನೆ ಸಂಗಾತಿಯಲ್ಲಿದ್ದಾಗ ಒಂದು ಕಡೆ ಮುಖ ಹಾಕಿ ಮಲಗಿದ ಸಂಗಾತಿಯ ಬೆನ್ನಿಗೆ ಕೈ ಹಾಕಿ ನನಗೆ ನೀವು ಬೇಕು ಎಂಬ ಆಸೆಯನ್ನು ವ್ಯಕ್ತ ಪಡಿಸುತ್ತಾರೆ ಎಂಬುದನ್ನು ಸೆಕ್ಸ್ ಎಕ್ಸ್ಪರ್ಟ್ ಗ್ರೀರ್ ಹೇಳುತ್ತಾರೆ.
 • ಕೈ ಹಿಡಿದು ಮಲಗುವುದು ಈ ರೀತಿ ಕೈ ಹಿಡಿದು ಮಲಗಿದಾಗ ಸಂಗಾತಿಗೆ ತುಂಬಾ ಸೆಕ್ಯೂರ್ ಫೀಲ್ ಅನಿಸುವುದು. ಮುಖ ತಿರುಗಿಸಿ ಮಲಗುವುದು ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಏನಾದರೂ ಕೋಪವಿದ್ದಾಗ ಈ ರೀತಿ ಮಲಗಬಹುದು. ಆಗ ಅವರು ದೈಹಿಕ ಟಚ್ನಲ್ಲಿ ಅಷ್ಟು ಕಂಫರ್ಟ್ ಇಲ್ಲ ಎಂಬುದಾಗಿ ಸೂಚಿಸುತ್ತದೆ. ಅದೇ ಪ್ರತಿದಿನ ಈ ರೀತಿಯಿದ್ದರೆ ಆ ವ್ಯಕ್ತಿಗೆ ನಿಮ್ಮ ಮೇಲೆ ಆಸಕ್ತಿ ಇಲ್ಲ ಎಂವುದನ್ನು ಸೂಚಿಸುತ್ತದೆ.

ಸಂಗಾತಿಯ ಪ್ರೀತಿಯ ಅಪ್ಪುಗೆಯಿಂದ ದೊರೆಯುವ ಪ್ರಯೋಜನಗಳು.

 • ಲವ್ ಹಾರ್ಮೋನ್ಗಳನ್ನು ಉತ್ಪತ್ತಿಯಾಗುವುದು
 • ಮಾನಸಿಕ ಒತ್ತಡ ಕಡಿಮೆಯಾಗುವುದು
 • ರೋಗ ನಿರೋಧಕ ಶಕ್ತಿ ವೃದ್ದಿಸುವುದು
 • ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
 • ಲೈಂಗಿಕ ತೃಪ್ತಿ ನೀಡುವುದು
 • ಒಳ್ಳೆಯ ನಿದ್ದೆ ಬರುತ್ತದೆ
ಹಿಂದಿನ ಲೇಖನಶಾಲಾ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ಮುಂದಿನ ಲೇಖನಮೂರನೇ ಬಾರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಮುಂದುವರಿಕೆ