ಮನೆ ರಾಜಕೀಯ ಮೂರನೇ ಬಾರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಮುಂದುವರಿಕೆ

ಮೂರನೇ ಬಾರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಮುಂದುವರಿಕೆ

0

ಮೈಸೂರು: ಎಸ್.ಟಿ. ಸೋಮಶೇಖರ್ ಅವರು ಸಚಿವರಾದ ಬಳಿಕ 3ನೇ ಬಾರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆದಿದ್ದಾರೆ.

ಬಿ. ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾದ ರಾಜ್ಯ ಸರ್ಕಾರದಲ್ಲಿ ಮೈಸೂರಿಗೆ ವಿ. ಸೋಮಣ್ಣ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಯಿತು. ಒಂದು ವರ್ಷ ಕಾರ್ಯ ನಿರ್ವಹಿಸಿದ ಬಳಿಕ ಇವರನ್ನು ಕೊಡಗು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ, ಮೈಸೂರು ಉಸ್ತುವಾರಿ ಹೊಣೆಯನ್ನು ಎಸ್. ಟಿ ಸೋಮಶೇಖರ್ ಅವರಿಗೆ ನೀಡಲಾಯಿತು.

ಬಿ. ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೈಸೂರು ಜಿಲ್ಲೆಗೆ ನೂತನ ಉಸ್ತುವಾರಿ ಸಚಿವ ಬರಲಿದ್ದಾರೆ ಎಂಬ ಊಹೆ ಅನೇಕರದ್ದಾಗಿತ್ತು. ಆದರೆ, ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ಕೂಡ ಎಸ್. ಟಿ ಸೋಮಶೇಖರ್ ಅವರಿಗೆ ಮೈಸೂರಿನ ಜೊತೆ ಪಕ್ಕದ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹೊಣೆಯನ್ನು ವಹಿಸಿದರು.

ಎರಡು ಜಿಲ್ಲೆಗಳ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಎಸ್. ಟಿ ಸೋಮಶೇಖರ್ ಅವರಿಗೆ ಈಗ ಮೈಸೂರು ಜಿಲ್ಲೆಯ ಉಸ್ತುವಾರಿ ಮಾತ್ರ ಸಿಕ್ಕಿದೆ. ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್. ಟಿ ಸೋಮಶೇಖರ್ ಅವರಿಗೆ ಮೈಸೂರು ಜಿಲ್ಲೆಯನ್ನು ಮಾತ್ರ ಕೊಟ್ಟಿದ್ದಾರೆ.

ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಜವಾಬ್ದಾರಿಯನ್ನು ವಿ. ಸೋಮಣ್ಣ ಅವರಿಗೆ ವಹಿಸಿದ್ದಾರೆ. ಮೈಸೂರು ಜಿಲ್ಲೆಗೆ ಸತತ ಮೂರನೇ ಬಾರಿಗೆ ಎಸ್. ಟಿ. ಸೋಮಶೇಖರ್ ಅವರೇ ಉಸ್ತುವಾರಿಯಾಗಿ ಹೊಣೆ ಹೊತ್ತಿದ್ದಾರೆ.

ಹಿಂದಿನ ಲೇಖನಗಂಡ-ಹೆಂಡತಿ ಯಾವ ರೀತಿ ಮಲಗುತ್ತಾರೆ ಎಂಬುವುದು ಅವರಿಬ್ಬರ ನಡುವಿನ ಪ್ರೀತಿಯ ಆಳವನ್ನು ತೋರಿಸುತ್ತದೆಯಂತೆ.
ಮುಂದಿನ ಲೇಖನಶೀಘ್ರದಲ್ಲೇ 777ನ ಚಾರ್ಲಿ ಬಿಡುಗಡೆ: ರಕ್ಷಿತ್ ಶೆಟ್ಟಿ