ಮನೆ Uncategorized ಬಿಜೆಪಿಯವರು ಮೊದಲು ಪಕ್ಷದ ಆಂತರಿಕ ಗೊಂದಲ ಸರಿಪಡಿಸಿಕೊಳ್ಳಿ: ಆರ್.ಧ್ರುವನಾರಾಯಣ್

ಬಿಜೆಪಿಯವರು ಮೊದಲು ಪಕ್ಷದ ಆಂತರಿಕ ಗೊಂದಲ ಸರಿಪಡಿಸಿಕೊಳ್ಳಿ: ಆರ್.ಧ್ರುವನಾರಾಯಣ್

0

ಮೈಸೂರು:  ಬಿಜೆಪಿ ಪಕ್ಷದವರು ಮೊದಲು  ನಿಮ್ಮ ಪಕ್ಷದ ಆಂತರಿಕ ಗೊಂದಲ ಸರಿ ಮಾಡಿಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್  ವಾಗ್ದಾಳಿ ನಡೆಸಿದರು.

 ಕಾಂಗ್ರೆಸಿಗರಿಗೆ ಕೆಲಸ ಇಲ್ಲ ಸುಮ್ಮನೆ ಮಾತನಾಡುತ್ತಾರೆ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿರುವ ಆರ್.ದೃವನಾರಾಯಣ್, ಆಡಳಿತ ಪಕ್ಷ ವೈಪಲ್ಯಗಳಿದ್ದಾಗ ಎಚ್ಚರಿಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ನಿಮಗೆ ಮೈಸೂರಿನಲ್ಲಿ ಒಂದೇ ಒಂದು ವಿಧಾನ ಪರಿಷತ್ ಸ್ಥಾನ  ಗೆಲ್ಲಸೋಕೆ ಆಗಲಿಲ್ಲ. ರಘು ಅವರನ್ನ ಸೋಲಿಸಿದ್ರಿ. ಕಾಂಗ್ರೆಸ್ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ. ಹತಾಶೆ ಮನೋಭಾವನೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಆಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಪ್ರಾರಂಭ ಆಗಿದೆ. ಕಾಂಗ್ರೆಸ್ ಯಾವುದೇ ಗೊಂದಲ ಇಲ್ಲ. ಮೊದಲು ನಿಮ್ಮ ಪಕ್ಷದ ಆಂತರಿಕ ಗೊಂದಲ ಸರಿ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬ ರಮೇಶ್ ಜಾರಕೀಹೋಳಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್ ಧೃವನಾರಾಯಣ್, ರಮೇಶ್ ಜಾರಕಿಹೋಳಿ ಒಬ್ಬ ಕಳಂಕಿತ. ಕಳಂಕಿತರ ಬಾಯಲ್ಲಿ ಹೇಳೋದಕ್ಕೆ ನಾವು ಪ್ರಾಮುಖ್ಯತೆ ಕೊಡಲು ಆಗುತ್ತಾ..? ಮೊದಲು ನಿಮ್ಮ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ಬೆಳಗಾಂ ಜಿಲ್ಲೆಯಲ್ಲೆ ಕತ್ತಿ ಮನೆಯಲ್ಲಿ ಅವರದೇ ಪಕ್ಷದ ಮುಖಂಡರು ರಮೇಶ್ ಜಾರಕಿಹೊಳಿ ಬಿಟ್ಟು ಸಭೆ ಮಾಡಿದ್ದಾರೆ. ಇದರ ಅರ್ಥ ಏನು.? ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ  ಅಸಮಧಾನ ಬುಗಿಲೆದ್ದಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಚಿವ ವಿ ಸೋಮಣ್ಣಗೆ ಚಾಮರಾಜನಗರ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ವಿ. ಸೋಮಣ್ಣ ಉಸ್ತುವಾರಿ ಆಗಿರುವುದನ್ನು ನಾನು ಸ್ವಾಗತಿಸುತ್ತೇನೆ. ಚಾಮರಾಜನಗರವನ್ನು ಬಿಜೆಪಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸೋಮಣ್ಣ ಬಂದರೂ ಏನು ಬದಲಾವಣೆ ಆಗೋದಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಏನು ಸಮಸ್ಯೆ ಆಗೋದಿಲ್ಲ. ಯಡಿಯೂರಪ್ಪ ಇರುವವರೆಗೂ ವಿ.ಸೊಮಣ್ಣ. ಇಲಾಖೆಗೆ  ಅನುದಾನ ಬಿಡುಗಡೆ ಆಗಿಲ್ಲ. ಈಗ ಬಸವರಾಜ್ ಬೊಮ್ಮಯಿ ಸಿಎಂ ಆದ ಮೇಲೆ ಅನುದಾನ ಬಿಡುಗಡೆ ಮಾಡಿದ್ದಾರೆ. ನೆನಗುದಿಗೆ ಬಿದ್ದ ಯೋಜನೆಗಳನ್ನ ಸೋಮಣ್ಣ ಮಾಡಲಿ ಎಂದು ಮನವಿ ಮಾಡುತ್ತೇನೆ ಎಂದು ಆರ್.ಧೃವನಾರಾಯಣ್ ತಿಳಿಸಿದರು.

ವಿ.ಸೋಮಣ್ಙ ಮೇಲೂ ಮೊಕದ್ದಮೆ ಹೂಡಬೇಕು: ಕಾಂಗ್ರೆಸ್ ನಾಯಕರ ವಿರುದ್ದ ಎಫ್ ಐ ಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಸರ್ಕಾರದಲ್ಲಿ ದ್ವಂದ್ವ ನೀತಿ ಇದೆ. ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರದಲ್ಲಿ 2 ಸಾವಿರ ಜನ ಇದ್ರು. ಅಲ್ಲಿ ಸಿಎಂ ಇದ್ರು, ಗೃಹ ಸಚಿವರೂ ಇದ್ದರು.  ರೇಣುಕಾಚಾರ್ಯ, ಗೃಹ ಮಂತ್ರಿಗಳ ಕ್ಷೇತ್ರದಲ್ಲಿ ದೊಡ್ಡ ಜಾತ್ರೆಯೆ ಆಗಿದೆ. ಅವರ ಮೇಲು ಕ್ರಮ ಆಗಬೇಕು ಅಂತ ಕಾಂಗ್ರೆಸ್ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈಗ ಅಲ್ಲೊಂದು ಇಲ್ಲೊಂದು ಎಫ್ ಐ ಆರ್ ಹಾಕಬೇಕು. ನಿನ್ನೆ ಚಾಮರಾಜನಗರಕ್ಕೆ ಸೋಮಣ್ಣ ಬಂದಾಗಲು ಜಾತ್ರೆ ಆಗಿದೆ. ಅವರ ಮೇಲು ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು

ಹಿಂದಿನ ಲೇಖನಶಾಸಕ ರಾಮದಾಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ
ಮುಂದಿನ ಲೇಖನ5G ಪ್ರಕರಣ; ನಟಿ ಜೂಹಿ ಚಾವ್ಲಾಗೆ ವಿಧಿಸಿದ ದಂಡದ ಪ್ರಮಾಣ ಇಳಿಸಿದ ಹೈಕೋರ್ಟ್!