ಮನೆ ಸುದ್ದಿ ಜಾಲ ಶಾಸಕ ರಾಮದಾಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ

ಶಾಸಕ ರಾಮದಾಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ

0

ಮೈಸೂರು: ವಿದ್ಯಾರಣ್ಯಪುರಂನ ಶಾಸಕ ಎಸ್.ಎ.ರಾಮದಾಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕರಾದ ಎಸ್.ಎ.ರಾಮದಾಸ್, ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಎಂದರೆ ಅದಕ್ಕೆ ಲಕ್ಷಾಂತರ ಜನರ ತ್ಯಾಗ ಬಲಿದಾನಗಳು ಇವೆ. ಸ್ವಾತಂತ್ರ್ಯ ಬಂದ ಮೇಲೂ ಕೂಡಾ ಭಾರತ ಒಟ್ಟಾಗಿರಲಿಲ್ಲ, ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಈ ದೇಶದ ಏಕೀಕರಣಕ್ಕೆ ಕಾರಣರಾದ ಪ್ರಮುಖರು. ಭಾಷಾವಾರು ಸಂಸ್ಕೃತಿವಾರು ಸಂಘಟನೆ ಮಾಡಿ ಒಂದು ರಾಜ್ಯವನ್ನಾಗಿಸಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡಾ ಭಾರತಕ್ಕೆ ಸಂವಿಧಾನವನ್ನು ಕೊಟ್ಟರು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ ಈ ಸುಸಂದರ್ಭದಲ್ಲಿ ನಾವೂ ಕೂಡಾ ಇಂತಹ ಸುಸಂದರ್ಭದಲ್ಲಿ ದೇಶಕ್ಕೆ ನಾನೇನು ಕೊಡಬಲ್ಲೆ ಎಂದು ಚಿಂತಿಸಬೇಕು.  ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯ ಮೇಲೆ ಘೋಷಣೆಯನ್ನು ಮಾಡಿದರು ದೇಶಕ್ಕೆ ಸ್ವಾತಂತ್ರ್ಯ ಬಂದ 75 ನೆ ವರ್ಷದಲ್ಲಿ ಎಲ್ಲರಿಗೂ ಕೂಡಾ ಸ್ವಂತ ಸೂರು ನೀಡಬೇಕೆಂದು ಆದೇ ರೀತಿ ಕೃಷ್ಣರಾಜ ಕ್ಷೇತ್ರದಲ್ಲೂ ಕೂಡಾ ನಾವು ಇನ್ನೊಂದು ವರ್ಷದ ಒಳಗೆ ಸ್ವಂತ ಮನೆಯನ್ನು ಕೊಡಬೇಕೆಂದಿದ್ದೇವೆ ಎಂದರು.

ಇನ್ನೋರ್ವ ಮಹಾನ್ ವ್ಯಕ್ತಿ ಸುಬಾಷ್ ಚಂದ್ರ ಬೋಸ್ ಅವರನ್ನು ನಾವು ನೆನೆಯಬೇಕು, ಅವರು INA ಯನ್ನು ಪ್ರಾರಂಭ ಮಾಡಿ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಸುತ್ತಿ ಭಾರತದಿಂದ ಬ್ರಿಟಿಷರನ್ನು ಓಡಿಸಲು ಅವರದೇ ಆದ ಕೊಡುಗೆ ನೀಡಿದರು. ದೇಶದ ಮೇಲೆ ಶತ್ರು ದೇಶದವರು ಸಾಕಷ್ಟು ಆಕ್ರಮಣ ಮಾಡಲು ನೋಡುತ್ತಿದ್ದಾರೆ, ದೇಶದ ಒಳಗೆ ಇರುವ ನಾವು ಅದಕ್ಕೆ ಪುಷ್ಟಿ ನೀಡಬಾರದು ಎಂಥದ್ದೇ ಆಕ್ರಮಣವಾದರೂ ನಾವೆಲ್ಲ ದೇಶದ ಜೊತೆ ಗಟ್ಟಿಯಾಗಿ ನಿಲ್ಲಬೇಕು. ನಾವೆಲ್ಲರೂ ಸಹ ತಾಯಿ ಭಾರತಿಗಾಗಿ ಕೈಲಾದ ಸೇವೆಯನ್ನ ಸಲ್ಲಿಸೋಣ ಎಂದರು.

ಹಿಂದಿನ ಲೇಖನಬ್ಯಾಗ್ ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಮಾದಕ ವಸ್ತು ವಶ
ಮುಂದಿನ ಲೇಖನಬಿಜೆಪಿಯವರು ಮೊದಲು ಪಕ್ಷದ ಆಂತರಿಕ ಗೊಂದಲ ಸರಿಪಡಿಸಿಕೊಳ್ಳಿ: ಆರ್.ಧ್ರುವನಾರಾಯಣ್