ಮನೆ ಸುದ್ದಿ ಜಾಲ ಮೈಸೂರು ವಿವಿಯ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಿಂದ ಅತಿಥಿ ಉಪನ್ಯಾಸಕನಿಗೆ ಜೀವ ಬೆದರಿಕೆ: ಆರೋಪ

ಮೈಸೂರು ವಿವಿಯ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಿಂದ ಅತಿಥಿ ಉಪನ್ಯಾಸಕನಿಗೆ ಜೀವ ಬೆದರಿಕೆ: ಆರೋಪ

0

ಮೈಸೂರು: ಮೈಸೂರು ವಿವಿಯ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ. ಮಾದೇಶ್ ಅವರು ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ತಮಗೆ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಕೆಲಸ ನಿರ್ವಹಿಸಲು ಅಡ್ಡಿಯುಂಟುಮಾಡುತ್ತಿದ್ದಾರೆಂದು ಎಂ. ಅಭಿಜಿತ್ ದೂರಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು ಎರಡೂವರೆ ತಿಂಗಳ ಹಿಂದೆ ಪ್ರೊ.ಪಿ. ಮಾದೇಶ್ ಅವರು ಕ್ಷುಲ್ಲಕ ಕಾರಣಕ್ಕೆ ತಮ್ಮನ್ನು ನಿಂದಿಸಿದ್ದರು. ಈ ಬಳಿ ಕುಲಪತಿಗಳಿಗೂ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಜಯಲಕ್ಷ್ಮಿಪುರಂ  ಠಾಣೆಗೂ ದೂರು ನೀಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೊತೆಗೆ ಪ್ರೊ.ಪಿ. ಮಾದೇಶ್ ಅವರು ತಮ್ಮ ಪುತ್ರನಿಗೆ ತಮ್ಮ ಪ್ರಭಾವ ಬಳಸಿಕೊಂಡು ಕೆಲಸಕ್ಕೆ ತೆಗೆದುಕೊಂಡು ೧೨ ಗಂಟೆಗಳ ಕಾರ್ಯಭಾರವನ್ನು ಕಾನೂನು ಬಾಹಿರವಾಗಿ ನೀಡಿದ್ದಾರೆ. ಈ ಕುರಿತು ದೂರು ನೀಡಿದ್ದ ಕಾರಣ ತಮಗೆ ಕೇವಲ ನಾಲ್ಕು ಗಂಟೆ ಕಾರ್ಯಭಾರ ಮಾತ್ರ ನೀಡಲಾಗಿದೆ.

ಈ ರೀತಿ ವಿಭಾಗದ ಮುಖ್ಯಸ್ಥರು ಅಕ್ರಮ ಎಸಗುತ್ತಿದ್ದು, ತಮಗೆ ಸಂಬಂಧಿಸಿದವರು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.