ಮನೆ ರಾಜಕೀಯ ಕಾಮಗಾರಿಗಳ ಗುಣಮಟ್ಟ ಕಾಪಾಡುವುದು ಗುತ್ತಿಗೆದಾರರ ಆದ್ಯ ಕರ್ತವ್ಯ; ಕೆ.ಗೋಪಾಲಯ್ಯ

ಕಾಮಗಾರಿಗಳ ಗುಣಮಟ್ಟ ಕಾಪಾಡುವುದು ಗುತ್ತಿಗೆದಾರರ ಆದ್ಯ ಕರ್ತವ್ಯ; ಕೆ.ಗೋಪಾಲಯ್ಯ

0

ಬೆಂಗಳೂರು: ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 67 ರ ನಾಗಪುರದ ಸ್ವಾತಿ ಹೋಟೆಲ್ ಬಳಿ ಕೈ ಗೊಂಡಿರುವ ರಸ್ತೆ ಡಾಂಬರೀಕರಣ  ಕಾಮಗಾರಿಯನ್ನು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಬೆಳಿಗ್ಗೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು, ಇಂಜಿನಿಯರ್ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು.

ಸ್ಥಳೀಯರು ಕೂಡ ತಮ್ಮ ಬಡಾವಣೆಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾಮಗಾರಿಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿರುತ್ತವೆ ಎನ್ನುವುದರ ಮೇಲೆ ನಿಗಾ ಇರಿಸಬೇಕು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಗುತ್ತಿಗೆದಾರರು, ಇಂಜಿನಿಯರ್ ಗಳು ಕಾಮಗಾರಿ ಮಾಡಿಕೊಂಡು ಹೋಗುತ್ತಾರೆ ಎಂದು ಕೈ ಕಟ್ಟಿಕೊಂಡು ನೋಡುತ್ತ ನಿಂತುಕೊಳ್ಳದೆ. ತಮ್ಮ ಬಡಾವಣೆಯ ಅಭಿವೃದ್ಧಿ ಕಾಮಗಾರಿ ತನ್ನ ಮನೆಯದೆ ಎಂಬ ಭಾವನೆ ಎಲ್ಲರಿಗೂ ಬಂದರೆ ಕಾಮಗಾರಿಗಳು ದೀರ್ಘ ಬಾಳಿಕೆ‌ ಬರಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.

ಹಿಂದಿನ ಲೇಖನಮೈಸೂರು ವಿವಿಯ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಿಂದ ಅತಿಥಿ ಉಪನ್ಯಾಸಕನಿಗೆ ಜೀವ ಬೆದರಿಕೆ: ಆರೋಪ
ಮುಂದಿನ ಲೇಖನಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿರುವ ಯುವಕರ ಪತ್ತೆಗೆ ಪಿಎಲ್ಎ ನೆರವು ಕೋರಿದ ಭಾರತೀಯ ಸೇನೆ