ಮನೆ ರಾಜಕೀಯ ರಾಜ್ಯಪಾಲರಿಂದ ರಾಜ್ಯ ಸರ್ಕಾರದ ದಿಕ್ಸೂಚಿ ಭಾಷಣ: ಸಚಿವ ಎಂಟಿಬಿ ನಾಗರಾಜು

ರಾಜ್ಯಪಾಲರಿಂದ ರಾಜ್ಯ ಸರ್ಕಾರದ ದಿಕ್ಸೂಚಿ ಭಾಷಣ: ಸಚಿವ ಎಂಟಿಬಿ ನಾಗರಾಜು

0

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಮಾಡಿದ ಭಾಷಣ ರಾಜ್ಯ ಸರ್ಕಾರದ ದಿಕ್ಸೂಚಿಯಾಗಿದೆ ಎಂದು ಪೌರಾಡಳಿತ,ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಬಣ್ಣಿಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಭರವಸೆಯ ಅಂಶಗಳು ವ್ಯಕ್ತವಾಗಿವೆ.ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

  ಏಪ್ರಿಲ್-ಜೂನ್ 2021ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ(ಎಫ್ ಡಿಐ) ಹರಿವಿನಲ್ಲಿ ಕರ್ನಾಟಕವು ಶೇಕಡಾ 48 ರಷ್ಟನ್ನು ಆಕರ್ಷಿಸಿ ಅಗ್ರಸ್ಥಾನದಲ್ಲಿರುವುದು ಸಂತಸದ ಸಂಗತಿ ಎಂದು ಸಚಿವ ಎಂಟಿಬಿ ನಾಗರಾಜು ತಿಳಿಸಿದ್ದಾರೆ.

ಹಿಂದಿನ ಲೇಖನರಾಮನಗರ & ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 26 ಕೋಟಿ ರೂ. ದುರ್ಬಳಕೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಆನ್ ಲೈನ್ ಜೂಜು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್