ಮನೆ ಸುದ್ದಿ ಜಾಲ ಲಾಲ್ ಬಹದ್ಧೂರ್ ಶಾಸ್ತ್ರೀ ಅವರ ಪುಣ್ಯತಿಥಿ: ಪುಷ್ಪನಮನ ಸಲ್ಲಿಸಿದ ಸಚಿವ ಅಶ್ವಥ್ ನಾರಾಯಣ್

ಲಾಲ್ ಬಹದ್ಧೂರ್ ಶಾಸ್ತ್ರೀ ಅವರ ಪುಣ್ಯತಿಥಿ: ಪುಷ್ಪನಮನ ಸಲ್ಲಿಸಿದ ಸಚಿವ ಅಶ್ವಥ್ ನಾರಾಯಣ್

0

ಬೆಂಗಳೂರು:  ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್, ದೇಶದ ರಕ್ಷಣೆಗೆ ಕಟಿಬದ್ಧರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತಿçಯವರ ಕೆಚ್ಚು ಭಾರತದ ಸಮಗ್ರತೆಯನ್ನು ಉಳಿಸುವಲ್ಲಿ ನಿರ್ಣಾಯಕ ಶಕ್ತಿಯಾಗಿದೆ. ಉನ್ನತ ವಿಚಾರ, ಸರಳ ಬದುಕು ಮತ್ತು ಉತ್ಕೃಷ್ಟ ನೈತಿಕತೆಯ ಪ್ರತೀಕವಾಗಿದ್ದ ಬದುಕು ದೇಶಕ್ಕೆ ಮಾದರಿಯಾಗಿದೆ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧೀಜಿಯವರ ವಿಚಾರ ಮತ್ತು ಜೀವನಗಳಿಂದ ಪ್ರೇರೇಪಿತರಾಗಿ ದೇಶಸೇವೆಗೆ ಧುಮುಕಿದ ಶಾಸ್ತಿçಯವರು ವಿದ್ವತ್ತು ಮತ್ತು ದೂರದರ್ಶಿತ್ವಗಳನ್ನು ಹೊಂದಿದ್ದ ತುಂಬಾ ಅಪರೂಪದ್ದ ರಾಜನೀತಿಜ್ಞರಾಗಿದ್ದರು. ಅವರು ಇನ್ನಷ್ಟು ವರ್ಷಗಳ ಕಾಲ ನಮ್ಮ ಪ್ರಧಾನಿಯಾಗಿ ಇದ್ದಿದ್ದರೆ ದೇಶವು ಹಲವು ಶಾಪಗಳಿಂದ ವಿಮುಕ್ತವಾಗಿರುತ್ತಿತ್ತು. ಅದರಲ್ಲೂ ದೇಶವನ್ನು ಕಾಯುವ ಸೇನಾಸಿಬ್ಬಂದಿಯನ್ನು ಗುರುತಿಸುವ ಮೂಲಕ ಅವರಿಗೆಲ್ಲ ಮನ್ನಣೆ ಸಿಕ್ಕುವಂತೆ ನೋಡಿಕೊಂಡರು. ಇದು ಅನುಸರಣೀಯ ಕ್ರಮವಾಗಿದೆ ಎಂದು ಅಶ್ವತ್ ನಾರಾಯಣ್ ನೆನೆದರು.