ಬೆಂಗಳೂರು: ತಮಿಳು ನಟ ಅಜಿತ್ ನಾಯಕರಾಗಿರುವ ವಲಿಮೈ ಸಿನಿಮಾಗೆ ಒಒಟಿಯಲ್ಲಿ 300 ಕೋಟಿ ರೂ. ಆಫರ್ ದೊರೆತಿದೆ.
ಒಒಟಿಯಲ್ಲಿ 300 ಕೋಟಿ ರೂ.ಕೊಟ್ಟು ವಲಿಮೈ ಸಿನಿಮಾ ಕೊಳ್ಳಲು ಒಟಿಟಿ ಫ್ಲ್ಯಾಟ್ ಫಾರಂ ಒಂದು ಮುಂದೆ ಬಂದಿದೆ ಎಂಬ ಸುದ್ದಿ ಸಿನಿ ವಲಯದಲ್ಲಿ ಸಂಚಲನ ಮೂಡಿಸಿದೆ.
Advertisement

ಭರ್ಜರಿ ಆಫರ್ ತಿರಸ್ಕರಿಸಿರುವ ಚಿತ್ರತಂಡ ಏನೇ ಆಗಲಿ, ಥಿಯೇಟರ್’ನಲ್ಲಿ ಬಿಡುಗಡೆ ಮಾಡುವುದಾಗಿ ತೀರ್ಮಾನಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕೆಲವು ಸಣ್ಣ ಬಜೆಟ್ ನ ನಿರ್ಮಾಪಕರು ನಷ್ಟ ಮಾಡಿಕೊಳ್ಳುವುದಕ್ಕಿಂತ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚಿಗೆ ನಟ ಸುದೀಪ್ ಅವರ ಸಿನಿಮಾಗೂ ಒಒಟಿ ಪ್ಲಾಟ್ ಫಾರಂನಲ್ಲಿ 100 ಕೋಟಿ ರೂ. ಆಫರ್ ಬಂದಿತ್ತು.