ಮನೆ ಶಿಕ್ಷಣ ಸಂಬಂಧದಲ್ಲಿ ಆಕರ್ಷಣೆ ಉಳಿಸಿಕೊಳ್ಳುವುದು ಹೇಗೆ?

ಸಂಬಂಧದಲ್ಲಿ ಆಕರ್ಷಣೆ ಉಳಿಸಿಕೊಳ್ಳುವುದು ಹೇಗೆ?

0
ಸಂಬಂಧದಲ್ಲಿ ಆಕರ್ಷಣೆ ಉಳಿಸಿಕೊಳ್ಳುವುದು

ಯಾವುದೇ ಸಂಬಂಧವಿರಲಿ ಅದರಲ್ಲೊಂದು ಆಕರ್ಷಣೆ ಉಳಿಸಿಕೊಳ್ಳಬೇಕು. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ?

ಯಾವುದೇ ಸಂಬಂಧವಿರಲಿ ಅದರಲ್ಲೊಂದು ಆಕರ್ಷಣೆ ಉಳಿಸಿಕೊಳ್ಳಬೇಕು. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ? ಮೇಕಪ್‌, ದಿರಿಸುಗಳಲ್ಲಿ ನಿಮ್ಮ ಆಕರ್ಷಣೆ ಉಳಿಯಬಹುದು. ಆದರೆ ಅವೆಲ್ಲವೂ ಕ್ಷಣಿಕವಾಗಿರಬಹುದು. ಗುಂಪಿನಲ್ಲಿ ಅಥವಾ ನೀವೊಬ್ಬರೇ ಇದ್ದೂ ಎಲ್ಲರ ಕಣ್ಣಿಗೆ ನೀವು ಆಕರ್ಷಕವಾಗಿ ಕಾಣಬೇಕು ಅಂದರೆ ಅದು ನಿಮ್ಮ ವ್ಯಕ್ತಿತ್ವದಲ್ಲೇ ಇರಬೇಕು. ಕೆಲವನ್ನು ರೂಢಿಸಿಕೊಳ್ಳಬಹುದು. ಇನ್ನೂ ಕೆಲವು ಸ್ವಭಾವತಃ ಬರಬಹುದು.

ಸದಾ   ಧನಾತ್ಮಕವಾಗಿರಿ

ನೀವು ಯೋಚಿಸುವ ವಿಚಾರಗಳಷ್ಟೆ ಧನಾತ್ಮಕವಾಗಿರಬೇಕು ಅಂತೇನೂ ಇಲ್ಲ. ನಿಮ್ಮದೊಂದು ವ್ಯಕ್ತಿತ್ವದಲ್ಲೇ ಅಂತಹದ್ದೊಂದು ಅಂಶ ಮೈಗೂಡಿ ಹೋಗಬೇಕು. ನಿಮ್ಮ ಆರ್ಥಿಕ, ಸಾಮಾಜಿಕ ಸ್ಥಾನಮಾನ, ಸೌಂದರ‍್ಯ, ತ್ವಚೆಯ ಬಣ್ಣ , ನಡೆನುಡಿ ಬಗ್ಗೆ ಕೀಳರಿಮೆ ಬೇಡ. ಸಣ್ಣಸಣ್ಣ ಸಂಗತಿಯನ್ನೂ ತೀರ ಗಂಭೀರವಾಗಿ ತೆಗೆದುಕೊಳ್ಳೋಬೇಡಿ. ಸದಾ ನಕಾರಾತ್ಮಕ ಮಾತು, ಕಿರಿಕಿರಿ ಅನುಭವಿಸುವಿಕೆ ನಿಮ್ಮ ಆಂತರಿಕ ಸೌಂದರ‍್ಯವನ್ನಷ್ಟೆ ಅಲ್ಲ, ಬಾಹ್ಯ ಸೌಂದರ‍್ಯವನ್ನು ಕೂಡ ಕುಗ್ಗಿಸುತ್ತದೆ. ಸಾಧ್ಯವಾದಷ್ಟು ನೀವು ಮಾಡುವ ಕೆಲಸ, ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿರುವಂತೆ ನೋಡಿಕೊಳ್ಳಿ.

ನೀವು  ನಿವಾಗಿಯೇ    ಇರಿ.

ಬೇರೆಯವರನ್ನು ಆಕರ್ಷಿಸಬೇಕು ಎನ್ನುವ ಕಾರಣಕ್ಕೆ ನಿಮ್ಮತನವನ್ನು ಬಿಟ್ಟು ಕೊಡಬೇಡಿ. ನಿಮ್ಮ ಮಾತು, ವರ್ತನೆಯಲ್ಲಿ ಸಾಧ್ಯವಾದಷ್ಟು ಸಹಜತೆಯನ್ನು ಕಾಪಾಡಿಕೊಳ್ಳಿ. ನಿಮ್ಮತನ ಎನ್ನುವುದು ನಿಮ್ಮ ಐಡೆಂಟಿಟಿ ಆಗಬೇಕು. ಹಾಗಂತ ಇತರರನ್ನು ನೋಯಿಸುವ ನಡವಳಿಕೆಯನ್ನು ಖಂಡಿತವಾಗಲೂ ರೂಢಿಸಿಕೊಳ್ಳಬೇಡಿ. ಆದರೆ ನಿಮ್ಮತನವೇ ನಿಮ್ಮ ವ್ಯಕ್ತಿತ್ವದ ಆಕರ್ಷಣೆಯಾಗುವಂತೆ ನೋಡಿಕೊಳ್ಳಿ.

ನಿಮ್ಮ  ಬಗ್ಗೆ    ನೀವೇ ಕಾಳಜಿ ತೆಗೆದುಕೊಳ್ಳಿ.

ಯಾರೋ ನಿಮ್ಮನ್ನು ಓಲೈಸಬೇಕು, ನಿಮ್ಮ ಪ್ರತಿ ಅಳು, ಸೋಲಿನಲ್ಲೂ ನಿಮ್ಮ ಜತೆ ಇರಬೇಕು, ಸದಾ ನಿಮ್ಮ ಕಷ್ಟಕ್ಕೆ ಮರುಗಬೇಕು ಎನ್ನುವ ಭಾವನೆಯಿಂದ ಹೊರ ಬನ್ನಿ. ನೀವು ಇತರರು ನಿಮ್ಮನ್ನು ಓಲೈಸಬೇಕು ಎಂದುಕೊಂಡಷ್ಟು ನಿಮ್ಮ ನೀರಿಕ್ಷೆ ಹೆಚ್ಚುತ್ತದೆ. ಆದ್ದರಿಂದ ಯಾವುದೇ ರೀತಿಯ ನಿರೀಕ್ಷೆ ಇಟ್ಟುಕೊಳ್ಳದೆ ನಿಮ್ಮ ಸೋಲು, ಕೆಲವು, ಅನಾರೋಗ್ಯ ಪ್ರತಿ ಏಳುಬೀಳನ್ನು ಸಮರ್ಥವಾಗಿ ನಿಭಾಯಿಸಿ.

ಹಿಂದಿನ ಲೇಖನ40ರ ನಂತರ ಲೈಂಗಿಕ ಸಾಮರ್ಥ್ಯ ಕುಗ್ಗದಂತೆ ಕಾಪಾಡುವ ಡಯಟ್
ಮುಂದಿನ ಲೇಖನಸೆಕ್ಸ್ ನಂತರ ಈ ಅಭ್ಯಾಸಗಳು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ