ಮನೆ Uncategorized ಎರಡನೇ ದಿನದ ಮೋದಿ ಭರ್ಜರಿ ರೋಡ್‌ ಶೋ

ಎರಡನೇ ದಿನದ ಮೋದಿ ಭರ್ಜರಿ ರೋಡ್‌ ಶೋ

0

ಬೆಂಗಳೂರು: ನ್ಯೂ ತಿಪ್ಪಸಂದ್ರದಲ್ಲಿ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಎರಡನೇ ದಿನದ ದಿನ ರೋಡ್ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಪ್ರಧಾನಿ ಜನರಿಗೆ ವಂದಿಸುತ್ತಿದ್ದಾರೆ. ಜನ ಹೂಮಳೆ ಸುರಿಸುತ್ತಾ ನೆಚ್ಚಿನ ಪ್ರಧಾನಿಯನ್ನು ಸ್ವಾಗತಿಸುತ್ತಿದ್ದಾರೆ.

ಹೈಲೈಟ್ಸ್‌:

ಎರಡನೇ ದಿನದ ಪ್ರಧಾನಿ ಮೋದಿ ಮೆಗಾ ರೋಡ್ ಶೋ ಆರಂಭ. 6 ಕಿಮೀ ದೂರ, 5 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ರೋಡ್ ಶೋ. ಜಿಟಿಜಿಟಿ ಮಳೆ ನಡುವೆಯೇ ಮೋದಿ ರೋಡ್ ಶೋ.

ಬಿಳಿ ಕುರ್ತಾ, ಕೆಂಪು ಬಣ್ಣದ ಶಾಲು ಹಾಕಿ ಜನರತ್ತ ಕೈ ಬೀಸುತ್ತಾ, ಹಲವೆಡೆ ಕೈಮುಗಿಯುತ್ತಾ ತೆರೆದ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನದ ಭರ್ಜರಿ ರೋಡ್‌ ಶೋ ನಡೆಸುತ್ತಿದ್ದಾರೆ. ದಾರಿಯುದ್ಧಕ್ಕೂ ಕಲಾಪ್ರಕಾರಗಳ ಮೆರುಗು, ಪುಷ್ಪವೃಷ್ಟಿಯೊಂದಿಗೆ ರೋಡ್‌ ಶೋ ಭರ್ಜರಿಯಾಗಿ ಸಾಗಿದೆ.

ಪ್ರಧಾನಿ ನರೇಂದ್ರ ಮೋದಿಗೆ, ಪಿಸಿ ಮೋಹನ್, ರಾಜೀವ್ ಚಂದ್ರಶೇಖರ್ ರೋಡ್ ಷೋಗೆ ಸಾತ್ ನೀಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲೂ ನಿಂತಿರುವ ಸಾವಿರಾರು ಜನ ಮೋದಿ, ಮೋದಿ ಎಂದು ಜಯಘೋಷ ಹಾಕುತ್ತಿದ್ದಾರೆ.

ಹಿಂದಿನ ಲೇಖನನಗ್ನವಾಗಿ ನೋಡುವಂತ ಕನ್ನಡಕ ಕೊಡುವ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಬಂಧನ
ಮುಂದಿನ ಲೇಖನನಂಜನಗೂಡು: ಮೋದಿ ಆಗಮನಕ್ಕೆ ದಕ್ಷಿಣ ಕಾಶಿಯಲ್ಲಿ ಕ್ಷಣಗಣನೆ