ಮೈಸೂರು(Mysuru): ಉಕ್ರೇನ್, ರಷ್ಯಾ ಹಾಗೂ ಚೀನಾದಿಂದ ಭಾರತಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜು(JSS Medical college) ಮತ್ತು ಉನ್ನತ ಶಿಕ್ಷಣ ಅಕಾಡೆಮಿ(Higher education academy) ಆರಂಭಿಸಿರುವ ಸೇತುಬಂಧ ಕೋರ್ಸಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇವಲ 48 ಗಂಟೆಗಳಲ್ಲಿ 511 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಅವರಲ್ಲಿ 270ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದವರೇ ಆಗಿದ್ದಾರೆ.
ಪ್ರಾಯೋಗಿಕ ಹಾಗೂ ಭೌತಿಕ ತರಗತಿ ನಡೆಸಲಿದ್ದು, ಕ್ಲಿನಿಕಲ್ ಅಧ್ಯಯನಕ್ಕೂ ಅವಕಾಶ ನೀಡಲಾಗುವುದು. ಆದರೆ, ರೋಗಿಗೆ ಚಿಕಿತ್ಸೆ ನೀಡುವ, ಶಸ್ತ್ರಚಿಕಿತ್ಸೆ ಮಾಡುವ ಅವಕಾಶ ಇರುವುದಿಲ್ಲ.’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಲ್ಲಿ ಭಾನುವಾರ ತಿಳಿಸಿದರು.
ಕೋರ್ಸ್ ಸಂಪೂರ್ಣ ಉಚಿತ. ಊಟ ಮತ್ತು ವಸತಿ ಸೌಕರ್ಯವನ್ನು ವಿದ್ಯಾರ್ಥಿಗಳೇ ಮಾಡಿಕೊಳ್ಳಬೇಕು. ತರಬೇತಿ ಕುರಿತು ಪ್ರಮಾಣಪತ್ರ ನೀಡುವುದಿಲ್ಲ. ಬೇಕೇಬೇಕು ಎನ್ನುವವರಿಗೆ ಮಾತ್ರ ಪ್ರಮಾಣಪತ್ರ ನೀಡಲಾಗುವುದು. ಈ ಪತ್ರವನ್ನು ಪರಿಗಣಿಸುವುದು, ನಿರಾಕರಿಸುವುದು ಆಯಾ ವಿಶ್ವವಿದ್ಯಾಲಯಗಳಿಗೆ ಬಿಟ್ಟ ವಿಚಾರ ಎಂದರು.
ಸೇತುಬಂಧ ಕೋರ್ಸ್‌ಗೆ ಸೇರುವ ಆಸಕ್ತರು 6366366663 ಸಂಪರ್ಕಿಸಬಹುದು ಎಂದರು.