580 ವರ್ಷಗಳ ನಂತರ ಸಂಭವಿಸಿದ ಅತಿ ದೊಡ್ದ ಚಂದ್ರ ಗ್ರಹಣ ಮತ್ತು ಮುಂದಿನ ಒಂದು ದಿನದಲ್ಲಿ ಸಂಭಸಿಲಿರುವ ಖಗ್ರಾಸ ಸೂರ್ಯ ಗ್ರಹಣ, ಅಪಶಕುನದ ಮುನ್ಸೂಚನೆ ಎಂದು ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಹಿಂದೆನೇ ಭವಿಷ್ಯವನ್ನು ನುಡಿದಿದ್ದರು. ಆರೋಗ್ಯ ಮತ್ತು ನೈಸರ್ಗಿಕ ವಿಕೋಪದ ವಿಚಾರದಲ್ಲಿ ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಇನ್ನೇನು ಅನಾಹುತ ಕಾದಿದೆಯೋ ಎಂದು ಅಪಾಯದ ದಿನವನ್ನು ಎದುರು ನೋಡುವಂತೆ ಮಾಡಿದೆ ಇವರುಗಳ ಭವಿಷ್ಯ.
ಕೊರೊನಾ ವಿಚಾರದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಿದ್ದು ಮುತ್ಯಾ ಕಾಲಜ್ಞಾನವನ್ನು ನುಡಿದಿದ್ದರು, ಜೊತೆಗೆ, ಕೋಡಿಮಠದ ಶ್ರೀಗಳೂ ಭವಿಷ್ಯವನ್ನು ನುಡಿದಿದ್ದರು. ಅವರು ಹಿಂದೆ ಹೇಳಿದ್ದ ಭವಿಷ್ಯವೇನು, ಈಗ ಆಗುತ್ತಿರುವುದನ್ನು ಅವಲೋಕಿಸಿದಾಗ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ.
“ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತಿದೆ. ಹೀಗಾಗಿ, ಸಾವು ಹೆಚ್ಚಾಗಲಿದೆ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ. ಲೋಕ ಕಲ್ಯಾಣವಾಗಲು ಇನ್ನೂ ಸ್ವಲ್ಪದಿನ ಕಳೆಯಬೇಕು, ಜಗಳಗಳು, ಕಾಯಿಲೆಗಳು, ಯುದ್ದಗಳು ಇನ್ನು ಶುರುವಾಗುತ್ತದೆ” ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ನುಡಿದ ಭವಿಷ್ಯವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.