ಬಾಲಿವುಡ್ ಮತ್ತು ಭೂಗತ ಜಗತ್ತಿನ ಮತ್ತೆ ಒಂದು ರೀತಿಯ ವೈರುಧ್ಯವೂ ಇದೆ ಹೊಂದಾಣಿಕೆಯೂ ಇದೆ. ಮೊದಲೆಲ್ಲಾ ನಾಯಕ, ನಾಯಕ ನಟಿ, ತಾಂತ್ರಿಕ ವರ್ಗ ಹೀಗೆ ಪ್ರತಿಯೊಬ್ಬರ ಆಯ್ಕೆ ಹಿಂದೆ ಕೂಡ ಭೂಗತ ಶಕ್ತಿಗಳು ಕೆಲಸ ಮಾಡುತ್ತಿದ್ದವು. ಏಕೆಂದರೆ ಬಹುತೇಕ ಬಾಲಿವುಡ್ ಚಿತ್ರಗಳಿಗೆ ಬೇಕಾದ ಫೈನಾನ್ಸ್ ಇದೆ ಅಂಡರ್ ವರ್ಲ್ಡ್ ಕಡೆಯಿಂದ ಬರುತ್ತಿತ್ತು. ಅಂಡರ್ ವರ್ಲ್ಡ್ ಕಂಟ್ರೋಲ್ನಲ್ಲಿ ಇರದ ನಿರ್ಮಾಪಕರನ್ನು ಕೂಡ ಅಂಡರ್ ವರ್ಲ್ಡ್ ಟಾರ್ಗೆಟ್ ಮಾಡಿ ಅವರಿಂದ ಹಣವನ್ನು ವಸೂಲಿ ಮಾಡುತ್ತಿತ್ತು. ಮುಂಬೈ -ದುಬೈ- ಕರಾಚಿ ನೆಟ್ವರ್ಕ್ ಮೂಲಕ ದೊಡ್ಡಮಟ್ಟದ ಹವಾಲಾ ದಂಧೆ ನಡೆಯುತ್ತಿತ್ತು. ಭೂಗತ ವ್ಯಕ್ತಿಗಳಿಗೆ ಇಲ್ಲಿ ‘ಭಾಯ್….’ ಎಂದು ಗೌರವಿಸುವ ಪರಿಪಾಠ ಕೂಡ ಇದೆ. ಸಿನಿಮಾ ಆರಂಭದಿಂದ ಹಿಡಿದು ಅದರ ಬಿಡುಗಡೆಯ ತನಕ ಪ್ರತಿಯೊಂದನ್ನೂ ಕೂಡ ಭೂಗತ ಜಗತ್ತು ನಿರ್ಧರಿಸುತ್ತಿತ್ತು. ಅನೇಕ ಸಲ ನಿರ್ಮಾಪಕರು ಅಥವಾ ನಟ ನಟಿಯರು ಭೂಗತ ಜಗತ್ತನ್ನು ಆಶ್ರಯಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಮತ್ತೆ ಕೆಲವೊಂದು ಸಂದರ್ಭದಲ್ಲಿ ಭೂಗತ ಜಗತ್ತು ನಾಯಕ ನಟರುಗಳಿಗೆ ಕರೆ ಮಾಡಿ ಇಂತಹವರ ಚಿತ್ರಗಳಲ್ಲಿ ನಟಿಸುವಂತೆ ತಾಕೀತು ಮಾಡುತ್ತಿತ್ತು. ರಾಜಕಾರಣ,ಕಾನೂನು,ಪೊಲೀಸರು ಎಲ್ಲವೂ ಕೂಡ ಇಲ್ಲಿ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದರು. ಬಾಲಿವುಡ್ ಮತ್ತು ಭೂಗತ ಜಗತ್ತಿನ ಮುಂದೆ ನಡೆಯುತ್ತಿದ್ದ ವ್ಯವಹಾರಗಳ ಬಗ್ಗೆ ಒಂದಷ್ಟು ಅಪರೂಪದ ಸಂಗತಿಗಳನ್ನು ಬಾಲಿವುಡ್ ಜಗತ್ತನ್ನು ಹತ್ತಿರದಿಂದ ಬಲ್ಲ ಕೆಲವರು ತಮ್ಮ ಪುಸ್ತಕಗಳ ಮೂಲಕ ಅನಾವರಣಗೊಳಿಸಿದ್ದಾರೆ.
ಬಾಲಿವುಡ್ ಮತ್ತು ಭೂಗತ ಜಗತ್ತಿನ ಮಧ್ಯೆ ಇರುವಂತಹ ನಿಕಟ ಸಂಪರ್ಕಗಳ ಬಗ್ಗೆ ಬೆಳಕು ಚೆಲ್ಲುವ ಪುಸ್ತಕಗಳು ಅನೇಕ ಇವೆ. ಅದರಲ್ಲಿ ಅತ್ಯಂತ ಪ್ರಮುಖವಾದದ್ದು ಮೋಹನ್ ದೀಪ್ ಅವರ ‘ದಿ ಫೈವ್ ಫೂಲಿಶ್ ವರ್ಜಿನ್ಸ್’ ಒಂದು ಸ್ವಾಮ್ಯಸೂಚಕ ಕಾದಂಬರಿ. ಒಮ್ಮೆ ನೀವು ಅದನ್ನು ಓದಲು ಪ್ರಾರಂಭಿಸಿದರೆ, ಅದು ನಿಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಕಾದಂಬರಿಯ ಕೊನೆಯಲ್ಲಿ ಸುದರ್ಶನ್ ಫಕೀರ್ ಅವರ ಕಟುವಾದ ಕವಿತೆಯಿಂದ ಕಥೆಯ ವಿಷಯವನ್ನು ಸೂಕ್ತವಾಗಿ ಸಂಕ್ಷೇಪಿಸಲಾಗಿದೆ.