ಮನೆ ರಾಜಕೀಯ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿವೃತ್ತ ಸೂಪರಿಂಟೆಂಡೆಂಟ್ಆಫ್ ಪೊಲೀಸ್ ಎನ್​.ನಾಗರಾಜಸ್ಪರ್ಧೆ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿವೃತ್ತ ಸೂಪರಿಂಟೆಂಡೆಂಟ್ಆಫ್ ಪೊಲೀಸ್ ಎನ್​.ನಾಗರಾಜಸ್ಪರ್ಧೆ

0

ಬೆಂಗಳೂರು: ಇದೇ ಡಿಸೆಂಬರ್​ 12ಕ್ಕೆ ನಡೆಯಲಿರುವ ರಾಜ್ಯ ಒಕ್ಕಲಿಗ ಸಂಘದ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ನಿನ್ನೆಯೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 35 ನಿರ್ದೇಶಕ ಸ್ಥಾನಗಳಿಗೆ ಬರೋಬ್ಬರಿ 312 ನಾಮಪತ್ರಗಳು ಸಲ್ಲಿಕೆಯಾಗಿವೆ. ನಿವೃತ್ತ ಪೊಲೀಸ್​ ಅಧಿಕಾರಿ​​ ಎನ್​.ನಾಗರಾಜ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ರಾಜ್ಯ ಒಕ್ಕಲಿಗ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಶಪಥದೊಂದಿಗೆ ಡಾ. ಟಿ.ಹೆಚ್.ಆಂಜನಪ್ಪ ಹಾಗೂ ಪ್ರೊ.ಕೆ.ನಾರಾಯಣಗೌಡ ನೇತೃತ್ವದಲ್ಲಿ ನಿನ್ನೆ ಎನ್​.ನಾಗರಾಜ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿವಿ ಪುರಂನಲ್ಲಿರುವ ಒಕ್ಕಲಿಗರ ಸಂಘದ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ನಿವೃತ್ತ ಸೂಪರಿಂಟೆಂಡೆಂಟ್ ಆಫ್​ ಪೊಲೀಸ್​ ಆಗಿರುವ ಎನ್​.ನಾಗರಾಜ ಮೂಲತಃ ದೇವನಹಳ್ಳಿಯವರು. ವೃತ್ತಿ ಜೀವನದಲ್ಲಿ ಅವರು ತೋರಿದ ಅತ್ಯುತ್ತಮ ಸೇವೆಗಾಗಿ ಎರೆಡು ಬಾರಿ ರಾಷ್ಟ್ರಪತಿ ಪದಕ ಪಡೆದ ಕೆಲವೇ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಅಲ್ಲದೇ ಕಾಡುಗಳ್ಳ ವೀರಪ್ಪನ್ ಕಾರ್ಯಪಡೆಯಲ್ಲಿ ಸುಮಾರು 5 ವರ್ಷಗಳಕಾಲ​ ಅಧಿಕಾರಿಗಳ ತಂಡವನ್ನ ಮುನ್ನಡೆಸಿದ್ದಾರೆ. ಇನ್ನು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಬಹಳ ಗೌರವ ಸ್ಥಾನವಾದ ಮಾನವ ಹಕ್ಕುಗಳ ಪ್ರಾದೇಶಿಕ  ಮುಖ್ಯಸ್ಥರಾಗಿದ್ದರು. ಅಲ್ಲದೇ ಈ ಅವಧಿಯಲ್ಲಿ ಜನಾಂಗೀಯ ಕಲಹದಿಂದ ಬೇಸತ್ತಿದ್ದ ಯುರೋಪಿನ ಬೋಸ್ನಿಯಾದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ನಿಯೋಜಿತರಾದರು. ಈ ಕಾರ್ಯದಲ್ಲಿ ಎರೆಡು ಬಾರಿ ವಿಶ್ವಸಂಸ್ಥೆ ಪದಕ ಪಡೆದಿರುವುದು ಗಮನಾರ್ಹವಾಗಿದೆ. ಸದ್ಯ ಎನ್​.ನಾಗರಾಜ ಅವರು ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪವನ್ನ ಇಟ್ಟುಕೊಂಡು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಡಾ.ಟಿ.ಹೆಚ್​.ಆಂಜನಪ್ಪ ಹಾಗೂ ಪ್ರೊ, ಕೆ.ನಾರಾಯಣಗೌಡ ತಂಡದಲ್ಲಿ ಗುರುತಿಸಿಕೊಂಡಿರುವ ನಾಗರಾಜ ಅವರು, ಗೆದ್ದು ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗುವ ಆತ್ಮವಿಶ್ವಾಸದಲ್ಲಿದ್ದಾರೆ.