ಮನೆ ಸುದ್ದಿ ಜಾಲ 9 ವರ್ಷದಲ್ಲಿ ಸರ್ಕಾರಿ ಬ್ಯಾಂಕಗಳ ಲಾಭ 1.04 ಲಕ್ಷ ಕೋಟಿ: ಸಚಿವೆ ನಿರ್ಮಲಾ ಸೀತಾರಾಮನ್

9 ವರ್ಷದಲ್ಲಿ ಸರ್ಕಾರಿ ಬ್ಯಾಂಕಗಳ ಲಾಭ 1.04 ಲಕ್ಷ ಕೋಟಿ: ಸಚಿವೆ ನಿರ್ಮಲಾ ಸೀತಾರಾಮನ್

0

ನವದೆಹಲಿ: ಸರ್ಕಾರಿ ವಲಯದ ಬ್ಯಾಂಕುಗಳ (ಪಿಎಸ್ ಬಿಎಸ್) ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಉಪಕ್ರಮಗಳ ಭಾಗವಾಗಿ ಕಳೆದ 9 ವರ್ಷದಲ್ಲಿ ಸರ್ಕಾರಿ ಬ್ಯಾಂಕುಗಳ ಲಾಭ 1.04ಲಕ್ಷ ಕೋಟಿ ರೂಗಳಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Join Our Whatsapp Group

ಅಲ್ಲದೆ ಆರ್ಥಿಕ ವಲಯದ ಉತ್ತೇಜನಕ್ಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಸಚಿವೆ ಪುನರುತ್ಚಿಸಿದ್ದಾರೆ.

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನ ಕಾರ್ಪೊರೇಟ್  ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಅತ್ಯುತ್ತಮ ಕಾರ್ಪೊರೇಟ್ ಆಡಳಿತ ತತ್ವಗಳನ್ನು ಅನುಸರಿಸುವ ಮೂಲಕ ಬ್ಯಾಂಕ್ ಗಳು ಸಂಪೂರ್ಣ ಅಭಿವೃದ್ಧಿಯನ್ನು ಸಾಧಿಸಬೇಕು. ಯಾವುದೇ ಕಾರಣಕ್ಕೂ ಹಿಂದಿನ ಯಶಸ್ಸುಗಳೇ ಸಾಕೆಂದು ಕೂರಬಾರದು. ಸಾಂಸ್ಥಿಕ ಆಡಳಿತ, ನಿಯಂತ್ರಕ  ಮಾನದಂಡ, ಸುಸ್ಥಿ ಸಾಲ ಸಮಸ್ಯೆ  ನಿವಾರಣೆಯತ್ತ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದ್ದಾರೆ.