ಮನೆ ರಾಜ್ಯ ಹಾಸನ ಜಿಲ್ಲೆಯಲ್ಲಿ ‌ಕಾಡಾನೆ ಹಾವಳಿ ತಡೆಗೆ ಕ್ರಮ: ಸಚಿವ ಕೆ.ಗೋಪಾಲಯ್ಯ

ಹಾಸನ ಜಿಲ್ಲೆಯಲ್ಲಿ ‌ಕಾಡಾನೆ ಹಾವಳಿ ತಡೆಗೆ ಕ್ರಮ: ಸಚಿವ ಕೆ.ಗೋಪಾಲಯ್ಯ

0

ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಾನೆ ಹಾವಳಿ ತಡೆ ಸಂಬಂಧ ವಿಶೇಷ ತಂಡ ಬಂದು ಈಗಾಗಲೇ ಅಧ್ಯಯನ ಕೂಡ ನಡೆಸಿದೆ. ಈ ವಿಚಾರವನ್ನು ಸಿಎಂ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಜ್ಞರ ತಂಡ ವರದಿ ಕೊಟ್ಟ ಬಳಿಕ ಸಿಎಂ ಜೊತೆ ಮತ್ತೆ ಮಾತನಾಡುವುದಾಗಿ ತಿಳಿಸಿದರು.

ಆನೆ ಹಾವಳಿ ತಡೆಗೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಲಾಗುತ್ತೆ. ಒಂದೇ ದಿನಕ್ಕೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆನೆಗಳ ಸ್ಥಳಾಂತರದ ಕೆಲಸ ಹಂತ ಹಂತವಾಗಿ ಆಗುತ್ತದೆ ಎಂದರು.

ಆನೆ ಹಾವಳಿ ತಡೆಗೆ ರಾಜ್ಯದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಕೇಂದ್ರದಿಂದ ಹೆಚ್ಚಿನ ಅನುದಾನ ಹಾಗೂ ಕಡಿಮೆ ಹಣದಲ್ಲಿ ರೈಲ್ವೆ ಹಳಿಗಳನ್ನು ನೀಡುವಂತೆ ಮನವಿ ಮಾಡಲಾಗುವುದು. ಗಣಿಗಾರಿಕೆ ಸೇರಿದಂತೆ ಹಲವು ಯೋಜನೆಗಳ ಅನುಷ್ಟಾನ ದಿಂದ ಆನೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ತಮ್ಮ ಆವಾಸ ಸ್ಥಾನ ಬದಲಿಸುತ್ತಿವೆ. ವನ್ಯ ಜೀವಿಗಳು ಹಾಗೂ ಮಾನವ ಸಂಘರ್ಷ ತಡೆಗೆ ಇಲಾಖೆ ವತಿಯಿಂದ ಗಂಭೀರ ಪ್ರಯತ್ನವನ್ನು ವೈಜ್ಞಾನಿಕವಾಗಿ ಮಾಡಲಾಗುವುದು ಎಂದರು.

ಈ ಭಾಗದಲ್ಲಿ ನೂರಕ್ಕೂ ಅಧಿಕ‌ ಆನೆಗಳು ಎರಡು ,ಮೂರು ಗುಂಪುಗಳಾಗಿ ವಾಸ ಮಾಡುತ್ತಿವೆ.‌ಇದೀಗ ನನಗೆ ಇರುವ ಮಾಹಿತಿ  ಪ್ರಕಾರ ಆನೆಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡಾಗುತ್ತಿದೆ.‌ಇದಕ್ಕಾಗಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಎಂದರು.

ಕಳೆದ ಏಳೆಂಟು ವರ್ಷದಿಂದ ಆನೆಗಳ ಸಂತಾನಾಭಿವೃದ್ಧಿ ಅಧಿಕವಾಗಿದೆ. ಇವುಗಳಿಗೆ ಅರಣ್ಯದಲ್ಲಿಯೇ ನೀರು ಮತ್ತು ಆಹಾರ ಸಿಗುವಂತೆ ನೋಡಿಕೊಳ್ಳವುದು ಅಗತ್ಯವಾಗಿದೆ ಎಂದರು.

ಮಂಗಳೂರು ಸ್ಫೋಟ ‌ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ದೇವರ ದಯೆಯಿಂದ ಈ ಘಟನೆ ತಕ್ಷಣ ಪತ್ತೆಯಾಯಿತು. ಇಲ್ಲವಾದರೆ ದೊಡ್ಡ ಅಪಘಾತ ಆಗುತ್ತಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬರುವ ದಿನವೇ ಬ್ಲಾಸ್ಟ್. ಮಾಡಬೇಕೆಂದು ಪ್ಲಾನ್ ಆಗಿತ್ತು ಎನ್ನೋದು ನಮಗೆಲ್ಲಾ ಆಘಾತ ತಂದಿದೆ.ಈ ಘಟನೆ ಬಗ್ಗೆ ತಳಮಟ್ಟದಿಂದ ತನಿಖೆ ಆಗುತ್ತಿದೆ.ಇದರಲ್ಲಿ ಯಾರ್ಯಾರು ಭಾಗಿಯಾಗಿದಾರೆ, ಯಾರು ಆಶ್ರಯ ಕೊಟ್ಟಿದ್ದಾರೆ ಎಲ್ಲವನ್ನು ಪೊಲೀಸರು ಭೇದಿಸುತ್ತಾರೆ ಎಂದರು.

ಕೇಂದ್ರ ಹಾಗು ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಹಿಂದೆ ಯಾವ ಸಂಸ್ಥೆ ಇದೆ ಅದನ್ನ ಮಟ್ಟಹಾಕೋ ಕೆಲಸ ಕೂಡ ಆಗಲಿದೆ ಎಂದ ಸಚಿವರು ಹೇಳಿದರು.

ಹಿಂದಿನ ಲೇಖನಹರಿಹರ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟಿನ ಪ್ರಮಾಣ ಮಾಡಿಸಿದ ಸಿಎಂ ಬೊಮ್ಮಾಯಿ
ಮುಂದಿನ ಲೇಖನಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ಅಸಮಾಧಾನ ಹೊರಹಾಕಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ