ಮನೆ ರಾಷ್ಟ್ರೀಯ ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

0

ಛತ್ತೀಸ್‌ಗಢ: ಭದ್ರತಾ ಪಡೆ ಶುಕ್ರವಾರ(ನ.22) ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ ಹತ್ತು ನಕ್ಸಲರು ಹತರಾಗಿರುವ ಘಟನೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.

Join Our Whatsapp Group

ಎನ್‌ಕೌಂಟರ್‌ ನಡೆಸಿದ ಸ್ಥಳದಲ್ಲಿ ಎಕೆ-47 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.

ಭದ್ರತಾ ಪಡೆ ಶುಕ್ರವಾರ ಮುಂಜಾನೆ ಭಂಡಾರ್‌ಪದರ್‌ನ ಅರಣ್ಯ ಪ್ರದೇಶದಲ್ಲಿ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಗುಂಡಿನ ಚಕಮಕಿ ನಡೆದಿದೆ ಈ ವೇಳೆ ಭದ್ರತಾ ಪಡೆ ನಡೆಸಿದ ದಾಳಿಗೆ ಹತ್ತು ನಕ್ಸಲರು ಹತರಾಗಿದ್ದಾರೆ.

ಘಟನೆ ಸಂಬಂಧ ಮಾಹಿತಿ ನೀಡಿದ ಇನ್ಸ್‌ಪೆಕ್ಟರ್ ಜನರಲ್ ಬಸ್ತಾರ್, ಪಿ ಸುಂದರರಾಜ್ ಅವರು ಭಂಡಾರ್‌ಪದರ್‌ನ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಈ ವೇಳೆ ಹತ್ತು ನಕ್ಸಲರನ್ನು ಹತ್ಯೆಗೈಯಲಾಗಿದ್ದು ಇದೀಗ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಜೊತೆಗೆ ಅವರ ಬಳಿಯಿದ್ದ AK-47 ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಇನ್ನೂ ನಕ್ಸಲರು ಇರುವ ಶಂಕೆ ಇದ್ದು ಭದ್ರತಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ.