ಮೈಸೂರು : ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತ ಡಾ.ಸಿ.ಪಿ. ಕೃಷ್ಣಕುಮಾರ್ ಅವರ ಗೌರವಾರ್ಥ ಹೊಸ ತಲೆಮಾರಿನ ಪ್ರತಿಭಾವಂತ ಕವಿ ಮತ್ತು ಕವಯತ್ರಿಯರನ್ನು ಪ್ರೋತ್ಸಾಹಿಸಲು “ಡಾ.ಸಿ.ಪಿ.ಕೆ. ಕಾವ್ಯ ಪ್ರಶಸ್ತಿ” ಕೊಡ ಮಾಡಲಾಗುತ್ತಿದ್ದು, ಪ್ರಸ್ಥಕ ಸಾಲಿನ ಚೊಚ್ಚಲ ವರ್ಷದ ಪ್ರಶಸ್ತಿಗೆ ಹೊಸ ತಲೆಮಾರಿನ 10 ಮಂದಿ ಪ್ರಭಾವವಾನ್ವಿತ ಕವಿಗಳು ಆಯ್ಕೆಗೊಂಡಿದ್ದಾರೆ.
ಧಾರವಾಡದ ಕವಿತಾ ಹೆಗಡೆ ಅಭಯಂ, ಬೆಂಗಳೂರಿನ ವಿಜಯಲಕ್ಷ್ಮಿ ನುಗ್ಗೆಹಳ್ಳಿ, ವಿಜಯಪುರದ ಹೇಮಲತ ವಸ್ತ್ರದ, ಕೊಡಗಿನ ಸಂಗೀತ ರವಿರಾಜ್, ಚಾಮರಾಜನಗರದ ಡಾ.ಎನ್.ಕೆ ದಿಲೀಪ್, ಶಿವಮೊಗ್ಗದ ಶಿ.ಜು. ಪಾಷಾ, ಹಾಸನದ ಕೊಟ್ರೇಶ್ ಎಸ್.ಉಪ್ಪಾರ್, ಗದಗದ ಚಂದ್ರಶೇಖರ ಮಾಡಲಗೇರಿ, ಮೈಸೂರಿನ ನಾಗರಾಜ್ ತಲಕಾಡು, ಮಂಡ್ಯದ ದಿನೇಶ್ ಹೆರಗನಹಳ್ಳಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸದ್ಯದಲ್ಲೇ ನಗರದ ಕೆ.ಜಿ. ಕೊಪ್ಪಲಿನ ನೇಗಿಲಯೋಗಿ ಮರುಳೇಶ್ವರ ಸಭಾಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ “ದಸರಾ ಕವಿ-ಕಾವ್ಯ ಸಂಭ್ರಮ”ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.