ಮನೆ ಸಾಹಿತ್ಯ ಒಂದು ಹೆಜ್ಜೆ ಮುಂದೆ ಹೋಗಿ

ಒಂದು ಹೆಜ್ಜೆ ಮುಂದೆ ಹೋಗಿ

0

     ಒಂದು ಸಿನೆಮಾ ಮಂದಿರದ ಕಸ ಗುಡಿಸುವವನು ಬಹಳ ನಿಷ್ಠೆಯಿಂದ ಸಮಯಪಾಲನೆ ಮಾಡುತ್ತಿದ್ದನು. ನಿಯತವಾಗಿ ಕರ್ತವ್ಯ ಪಾಲನೆ ಮಾಡುತ್ತಿದ್ದನು. ಅದಲ್ಲದೆ ಸಿನೆಮಾ  ಮಂದಿರದ ಸುರಕ್ಷತೆಯನ್ನೂ ನೋಡಿಕೊಳ್ಳುತ್ತಿದ್ದನು.

Join Our Whatsapp Group

ಹಲವು ಬಾರಿ ಮ್ಯಾನೇಜ‌ರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಅವನಿಗೆ ತಮ್ಮ ಕೆಲಸವನ್ನೂ ನೀಡಿ ಅಲ್ಲಿಂದ ಹೊರಟುಹೋಗುತ್ತಿದ್ದರು. ಈತ ತನ್ನ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದನಲ್ಲದೆ ಇತರರು ಹೇಳಿದ ಕೆಲಸವನ್ನು ಮೈಗಳ್ಳತನವಿಲ್ಲದೆ ಚಾಚೂ ತಪ್ಪದೆ ಮಾಡುತ್ತಿದ್ದನು. ಒಮ್ಮೆ e ಸಿನೆಮಾ ಮಂದಿರದ ಮಾಲಿಕ ಅಲ್ಲಿಗೆ ಬಂದರು. ಅವರು ಹಠಾತ್ತಾಗಿ ಪರೀಕ್ಷಿಸಲು ಬಂದಿದ್ದರು. ಸಿನೆಮಾ ಮಂದಿರದ ವ್ಯವಸ್ಥೆಯ ಬಗ್ಗೆ ಕೇಳಿದರು. ಅಲ್ಲಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಇಲ್ಲದಾಗ ಯಾರು ನೋಡಿಕೊಳ್ಳುತ್ತಿದ್ದಾರೆಂದು ಕೇಳಿದರು. ಆಗ ಕಸ ಗುಡಿಸುವವನು ಏನು ಹೇಳಿದನು…

 ಪ್ರಶ್ನೆಗಳು

1. ಕಸ ಗುಡಿಸುವವನ ಉತ್ತರವೇನಾಗಿತ್ತು?

2. ಈ ಕಥೆಯ ನೀತಿಯೇನು?

 ಉತ್ತರಗಳು

1. “ನಾನು ನೋಡಿಕೊಳ್ಳುತ್ತೇನೆ. ಸರ್.” ಈ ಉತ್ತರವನ್ನು ಕೇಳಿ ಅವನನ್ನು ಸಿನೆಮಾ ಮಂದಿರದ ಹೊಸ ಮ್ಯಾನೇಜರ್ ಆಗಿ ನೇಮಿಸಲಾಯಿತು.

2. ಈ ಪ್ರಪಂಚದಲ್ಲಿ ಫಲಿತಾಂಶಗಳನ್ನು ನೀಡುವವರು ಬೇಕು. ನಾವು ಫಲವನ್ನು ನೀಡಿದರೆ ನಮ್ಮ ಜಾತಿ, ಜನಾಂಗ, ಬಣ್ಣ ಮತ್ತು ವಿದ್ಯಾರ್ಹತೆ ಏನೇ ಇರಲಿ ಸಮಾಜದಲ್ಲಿ ಅಂಗೀಕರಿಸಲ್ಪಡುತ್ತೇವೆ. ಭಕ್ತಿ ಹಾಗೂ ಬದ್ಧತೆಯಿಂದ ಕೆಲಸಮಾಡುವವರಿಗಾಗಿ ಪ್ರಪಂಚ ಕಾಯುತ್ತಿದೆ. ನೀವು ಏನು ಮಾಡಬೇಕೋ ಅದಕ್ಕೆ ಬದ್ಧರಾಗಿರಿ ಹಾಗೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಚ್ಚು ಕೆಲಸ ಮಾಡಿ. ಆಗ ನಿಮ್ಮ ಬದುಕಿನಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸುತ್ತೀರಿ.