ನವದೆಹಲಿ: ಇಂದಿನಿಂದ 10 ಹಾಗೂ 12ನೇ ತರಗತಿ ಪರೀಕ್ಷೆಗಳು ಆರಂಭವಾಗಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ‘ಚಾಟ್ ಜಿಪಿಟಿ’ ತಂತ್ರಾಂಶದ ಬಳಕೆಯನ್ನು ನಿಷೇಧಿಸಲಾಗಿದೆ.
ಮೊಬೈಲ್, ಚಾಟ್ ಜಿಪಿಟಿ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಗೆ ತರಲು ಅನುಮತಿ ಇಲ್ಲ ಎಂದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ.
ಇಂದಿನಿಂದ ಪರೀಕ್ಷೆ: 10, 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಇಂದಿನಿಂದ (ಫೆ.15) ಆರಂಭವಾಗಲಿವೆ. 10ನೇ ತರಗತಿ ಪರೀಕ್ಷೆ ಮಾರ್ಚ್ 21ಕ್ಕೆ, 12ನೇ ತರಗತಿ ಪರೀಕ್ಷೆ ಏಪ್ರಿಲ್ 5ಕ್ಕೆ ಮುಕ್ತಾಯವಾಗಲಿದೆ.
Saval TV on YouTube