ಮನೆ ರಾಜ್ಯ ರಾಜ್ಯದಲ್ಲಿ 133 ಕೋವಿಡ್‌ ಪಾಸಿಟಿವ್‌ ಪ್ರಕರಣ

ರಾಜ್ಯದಲ್ಲಿ 133 ಕೋವಿಡ್‌ ಪಾಸಿಟಿವ್‌ ಪ್ರಕರಣ

0

ಬೆಂಗಳೂರು (Bengaluru)- ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 133 ಕೋವಿಡ್ (Covid) ಪ್ರಕರಣಗಳು ದೃಢಪಟ್ಟಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,737ಕ್ಕೆ ಏರಿದೆ.

ಈ ಅವಧಿಯಲ್ಲಿ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ.147 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಇಂದು 11,415 ಕೋವಿಡ್ ಟೆಸ್ಟ್ ನಡೆಸಲಾಗಿದೆ.

ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇಕಡ 1.16ರಷ್ಟಿದ್ದು, ವಾರದ ಕೋವಿಡ್ ಪಾಸಿಟಿವಿಟಿ ದರ ಶೇಕಡ 1.20ರಷ್ಟಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 127 ಪ್ರಕರಣ ದಾಖಲಾಗಿವೆ. ಬೆಂಗಳೂರಿನಲ್ಲಿ 141 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 1,667 ಸಕ್ರಿಯ ಪ್ರಕರಣಗಳಿದೆ.

ಉಳಿದಂತೆ, ದಕ್ಷಿಣ ಕನ್ನಡದಲ್ಲಿ 2, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಧಾರವಾಡ, ಹಾಸನ ಜಿಲ್ಲೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಉಳಿದೆಲ್ಲಾ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಹಿಂದಿನ ಲೇಖನಕೆಪಿಎಸ್‌ಸಿ ನೇಮಕಾತಿ ಹಗರಣ ಮತ್ತೆ ಮುನ್ನೆಲೆಗೆ: ಕೆಪಿಎಸ್‌ಸಿ ಶುದ್ಧವಾಯಿತಾ; ಸಿದ್ದುಗೆ ಹೆಚ್ಡಿಕೆ ಪ್ರಶ್ನೆ  
ಮುಂದಿನ ಲೇಖನಆಝಾನ್‌ ವಿಚಾರ ಮೇ 9 ರಂದು ದೇಗುಲಗಳಲ್ಲಿ ಸುಪ್ರಭಾತ: ಪ್ರಮೋದ್‌ ಮುತಾಲಿಕ್‌