ಮನೆ ರಾಜ್ಯ ಆಝಾನ್‌ ವಿಚಾರ ಮೇ 9 ರಂದು ದೇಗುಲಗಳಲ್ಲಿ ಸುಪ್ರಭಾತ: ಪ್ರಮೋದ್‌ ಮುತಾಲಿಕ್‌

ಆಝಾನ್‌ ವಿಚಾರ ಮೇ 9 ರಂದು ದೇಗುಲಗಳಲ್ಲಿ ಸುಪ್ರಭಾತ: ಪ್ರಮೋದ್‌ ಮುತಾಲಿಕ್‌

0

ಬೇಲೂರು (Beluru)-ಮಸೀದಿಗಳಿಂದ ಮೈಕ್‌ ತೆರವುಗೊಳಿಸುವುದಕ್ಕೆ ಮೇ 1 ರವರೆಗೆ ಗಡುವು ನೀಡಲಾಗಿದ್ದು, ಮೈಕ್‌ ಗಳನ್ನು ತೆರವುಗೊಳಿಸದಿದ್ದರೆ ಮೇ 9 ರಂದು ದೇಗುಲಗಳಲ್ಲಿ ಸುಪ್ರಭಾತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಎಚ್ಚರಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಝಾನ್‌ ವಿಚಾರವಾಗಿ ಆರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಮೇ 1ಕ್ಕೆ ಡಿಸಿಗಳಿಗೆ ಕೊಟ್ಟಂತಹ ಗಡುವು ಮುಕ್ತಾಯವಾಗುತ್ತದೆ. ಸರ್ಕಾರ ಮೈಕ್‌ಗಳನ್ನು ತೆರವುಗೊಳಿಸದೆ ಇದ್ದರೆ, ಮೇ 9ರಂದು ಇಡೀ ರಾಜ್ಯಾದ್ಯಂತ ಬೆಳಿಗ್ಗೆ 5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್‌ ಚಾಲಿಸ್‌, ಓಂಕಾರ, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ಸಿಗರೇ ಮತಕ್ಕಾಗಿ ಮುಸ್ಲಿಮರನ್ನು ಓಲೈಕೆ ಮಾಡಬೇಡಿ. ಹಿಂದೂ ಸಮಾಜ, ದೇಗುಲದ ಮೇಲೆ ಆಗಿರುವ ದಾಳಿಯನ್ನು ನೀವು ಖಂಡಿಸಬೇಕು, ಗಲಭೆಕೋರರನ್ನು ಶಿಕ್ಷೆಗೆ ಗುರಿ ಮಾಡಿ ಅಂತ ಹೇಳಬೇಕು. ಮತಕ್ಕಾಗಿ ಅವರ ಪರ ಹೇಳಿಕೆ ನೀಡುತ್ತಿರುವುದು ರಾಷ್ಟ್ರಕ್ಕೆ, ಸಮಾಜಕ್ಕೆ ಅಘಾತವನ್ನುಂಟು ಮಾಡುತ್ತಿದ್ದು, ಹಿಂದೂ ಸಮಾಜ ನಿಮ್ಮನ್ನು ತಿರಸ್ಕಾರ ಮಾಡುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಲೇಖನರಾಜ್ಯದಲ್ಲಿ 133 ಕೋವಿಡ್‌ ಪಾಸಿಟಿವ್‌ ಪ್ರಕರಣ
ಮುಂದಿನ ಲೇಖನಬಿಜೆಪಿ ಸರ್ಕಾರ ʻಮಧ್ಯ ಕರ್ನಾಟಕದ ಭವ್ಯ ಭವಿಷ್ಯʼ ಬರೆಯುತ್ತಿದೆ: ಸಿಎಂ ಬೊಮ್ಮಾಯಿ