ಮನೆ ಆರೋಗ್ಯ ದೇಶದಲ್ಲಿ 15,102 ಕೊರೊನಾ ಪ್ರಕರಣ ಪತ್ತೆ

ದೇಶದಲ್ಲಿ 15,102 ಕೊರೊನಾ ಪ್ರಕರಣ ಪತ್ತೆ

0

ನವದೆಹಲಿ:  ಮಹಾಮಾರಿ ಕೊರೊನಾ ಅಬ್ಬರ ಕಡಿಮೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 15,102 ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದೇ ವೇಳೆ 278 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,28,67,031ಕ್ಕೆ ಏರಿಕೆಯಾಗಿದೆ. ಆ ಪೈಕಿ 5,12,622 ಮಂದಿ ಸಾವಿಗೀಡಾಗಿದ್ದಾರೆ.ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದುವರೆಗೆ 4,21,89,887 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 1,64,522 ಸಕ್ರಿಯ ಪ್ರಕರಣಗಳಿವೆ.

ದೈನಂದಿನ ಪಾಸಿಟಿವಿಟಿ ದರ ಶೇ 1.28 ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದುಬಂದಿದೆ. ದೇಶದಲ್ಲಿ ಇದುವರೆಗೆ 1,76,19,39,020 ಕೋಟಿ ಡೋಸ್‌ ಕೋವಿಡ್ ಲಸಿಕೆ ಹಾಕಲಾಗಿದೆ.

ಹಿಂದಿನ ಲೇಖನರಾಜ್ಯದಲ್ಲಿ ಶಾಂತಿ ಭದ್ರತೆಗೆ ಅಪಾಯ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಒತ್ತಾಯ
ಮುಂದಿನ ಲೇಖನಉತ್ತರಪ್ರದೇಶ ಚುನಾವಣೆ: 4ನೇ ಹಂತದ ಮತದಾನ ಆರಂಭ