ಮನೆ ಆರೋಗ್ಯ 1,573 ನೂತನ ಕೋವಿಡ್ ಪ್ರಕರಣಗಳು ದೃಢ

1,573 ನೂತನ ಕೋವಿಡ್ ಪ್ರಕರಣಗಳು ದೃಢ

0

ನವದೆಹಲಿ: ಕಳೆದ 24 ಗಂಟೆಗಳಲ್ಲಿ 1,573 ನೂತನ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 10,981ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ದಿನದ ಕೊರೊನಾ ಪಾಸಿಟಿವಿಟಿ ದರ ಶೇ 1.30 ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ 1.47 ಆಗಿದೆ. 24 ಗಂಟೆಗಳಲ್ಲಿ ಕೇರಳದಲ್ಲಿ ನಾಲ್ಕು ಜನರು ಸೋಂಕಿನಿಂದ ಮೃತಪಟ್ಟಿದ್ದು, ಕೋವಿಡ್‌ ನಿಂದ ಈವರೆಗಿನ ಮೃತರ ಒಟ್ಟು ಸಂಖ್ಯೆ 5,30,841ಕ್ಕೆ ಏರಿದೆ.

ಇಲ್ಲಿಯವರೆಗೆ ದೇಶದಾದ್ಯಂತ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,47,07,525 ದಾಖಲಾಗಿದೆ. ಇದರಲ್ಲಿ 4,41,65,703 ಜನರು ಗುಣಮುಖರಾಗಿರುತ್ತಾರೆ.

ಒಟ್ಟು ಸೋಂಕಿತರ ಪೈಕಿ ಶೇ 0.02 ಸಕ್ರಿಯ ಪ್ರಕರಣಗಳಿವೆ. ಹಾಗೆಯೇ ರಾಷ್ಟ್ರೀಯ ಕೋವಿಡ್ ಚೇತರಿಕೆಯ ಪ್ರಮಾಣ ಶೇ 98.79 ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.