ಮನೆ ಅಂತಾರಾಷ್ಟ್ರೀಯ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಮೂಲಕ ಸುಡಾನ್ ನಿಂದ ಭಾರತಕ್ಕೆ ಆಗಮಿಸಿದ 186 ಜನ

‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಮೂಲಕ ಸುಡಾನ್ ನಿಂದ ಭಾರತಕ್ಕೆ ಆಗಮಿಸಿದ 186 ಜನ

0

ದೆಹಲಿ: ಸುಡಾನ್ ನಲ್ಲಿ ನಡೆಯುತ್ತಿರುವ ಯುದ್ಧದಿಂದ ಈಗಾಗಲೇ ಭಾರತೀಯರನ್ನು ಭಾರತಕ್ಕೆ ಆಪರೇಷನ್ ಕಾವೇರಿ ಕಾರ್ಯಚರಣೆ ಕರೆತರುವ ಕೆಲಸ ನಡೆಯುತ್ತಿದೆ.

Join Our Whatsapp Group

ಇದೀಗ ಭಾರತೀಯರನ್ನು ಸ್ಥಳಾಂತರಿಸಲು ಒಂದು ವಾರದ ಹಿಂದೆ ಪ್ರಾರಂಭಿಸಲಾದ ‘ಆಪರೇಷನ್ ಕಾವೇರಿ’ ಅಡಿಯಲ್ಲಿ ಭಾರತವು 186 ಜನರ ಮತ್ತೊಂದು ಬ್ಯಾಚ್ ಅನ್ನು ಭಾನುವಾರ ಭಾರತಕ್ಕೆ ಕರೆತಂದಿದೆ.

ಸುಡಾನ್ ನಲ್ಲಿರುವ ಇನ್ನಷ್ಟು ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಏರ್ಲಿಫ್ಟ್ ಮಾಡುವ ಕಾರ್ಯ ನಡೆಯುತ್ತಿದೆ. ಬ್ಯಾಚ್ ಗಳಂತೆ, ಭಾರತೀಯರನ್ನು ಕರೆತರಲಾಗುತ್ತಿದೆ, ಇದೀಗ 186 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಗೆ ತಲುಪಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಭಾನುವಾರ (ಏ.30)ದಂದು 229 ಭಾರತೀಯರು ಬೆಂಗಳೂರಿಗೆ ಬಂದಿದ್ದರೆ, 365 ಜನರು ಹಿಂದಿನ ದಿನ ದೆಹಲಿ ತಲುಪಿದ್ದಾರೆ. ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಶುಕ್ರವಾರ ಎರಡು ಬ್ಯಾಚ್ ಗಳಲ್ಲಿ 754 ಜನರು ಭಾರತಕ್ಕೆ ಆಗಮಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈಗ ಭಾರತಕ್ಕೆ ಬಂದಿರುವ ಒಟ್ಟು ಭಾರತೀಯರ ಸಂಖ್ಯೆ 2,140 ಆಗಿದೆ. ಭಾರತೀಯರನ್ನು ಸೌದಿ ಅರೇಬಿಯಾದ ನಗರವಾದ ಜೆಡ್ಡಾದಿಂದ ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಮೊದಲ ಬ್ಯಾಚ್ನಲ್ಲಿ ಒಟ್ಟು 360 ಜನರು ಬುಧವಾರ ವಾಣಿಜ್ಯ ವಿಮಾನದಲ್ಲಿ ದೆಹಲಿಗೆ ತಲುಪಿದ್ದಾರೆ.

ನಂತರ ಎರಡನೇ ಬ್ಯಾಚ್ ನಲ್ಲಿ 246 ಭಾರತೀಯ ಗುರುವಾರ ಭಾರತೀಯ ವಾಯುಪಡೆಯ C17 ಗ್ಲೋಬ್ಮಾಸ್ಟರ್ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದಾರೆ. ಆಪರೇಷನ್ ಕಾವೇರಿ ಅಡಿಯಲ್ಲಿ, ಭಾರತವು ತನ್ನ ನಾಗರಿಕರನ್ನು ಖಾರ್ಟೂಮ್ನ ಯುದ್ಧ ವಲಯಗಳಿಂದ ಮತ್ತು ಇತರ ತೊಂದರೆಗೊಳಗಾದ ಪ್ರದೇಶಗಳಿಂದ ಪೋರ್ಟ್ ಸುಡಾನ್ ಗೆ ಬಸ್ ಗಳಲ್ಲಿ ಕರೆದೊಯ್ಯುತ್ತಿದೆ, ಅಲ್ಲಿಂದ ಅವರನ್ನು ಭಾರತೀಯ ವಾಯುಪಡೆಯ ಹೆವಿ-ಲಿಫ್ಟ್ ಸಾರಿಗೆ ವಿಮಾನದಲ್ಲಿ ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ಕರೆದೊಯ್ಯಲಾಗುತ್ತಿದೆ ಮತ್ತು ಇದರ ಜತೆಗೆ ಭಾರತೀಯ ನೌಕಾಪಡೆಯ ಹಡಗುಗಳ ಮೂಲಕವು ಕರೆತರಲಾಗುತ್ತಿದೆ.

ಹಿಂದಿನ ಲೇಖನಪ್ರಚಾರಕ್ಕೆ ತೆರಳಿದ್ದ ವಿ.ಸೋಮಣ್ಣಗೆ ಲೊ ಬಿಪಿ, ತಲೆ ಸುತ್ತು
ಮುಂದಿನ ಲೇಖನಲಿವರ್ ಮತ್ತು ಕರುಳು ಶುದ್ಧಿಗಾಗಿ ಈ ಪಾನೀಯಗಳನ್ನು ಕುಡಿಯಲೇಬೇಕು!