ಆನೇಕಲ್: ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿದ್ದ ಸಾಗಿಸುತ್ತಿದ್ದ 2.93 ಕೋಟಿ ರೂ. ಅನ್ನು ಹೆಬ್ಬಗೋಡಿ ಪೊಲೀಸರು ಸೀಜ್ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಸಿಎಂಎಸ್ ಏಜೆನ್ಸಿಗೆ ಸೇರಿದ ವಾಹನದಲ್ಲಿ ಎಟಿಎಂಗೆ ಹಣ ಸಾಗಿಸುವಾಗ ವಶಕ್ಕೆ ಪಡೆಯಲಾಗಿದೆ. ಹೆಬ್ಬಗೋಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ವಾಹನ ಪರಿಶೀಲನೆ ಮಾಡಿದ್ದು, ಬಂದೂಕು ಸಹಿತ ಸೆಕ್ಯೂರಿಟಿ ಗಾರ್ಡ್ ಇಲ್ಲದೆ ಹಣ ಸಾಗಿಸುತ್ತಿರುವುದು ಪತ್ತೆ ಆಗಿದೆ.
ಅನುಮಾನಗೊಂಡು ಪರಿಶೀಲಿಸಿದಾಗ ದಾಖಲೆ ಇಲ್ಲದ ಹಣ ಪತ್ತೆ ಆಗಿದ್ದು, ಹಣದ ಬಗ್ಗೆ ಚುನಾವಣಾ ಆಯೋಗ ಮತ್ತು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.