ಮನೆ ರಾಜ್ಯ ಪೆನ್ಷನ್ ಹಣ, ದಾನ ಮಾಡಿ ಮಾನವೀಯತೆ ಮೆರೆದ ಓಂಕಾರ್ ರಾಮಾಚಾರ್ !: ಇವರು ಸರ್ಕಾರಿ ನಿವೃತ್ತ...

ಪೆನ್ಷನ್ ಹಣ, ದಾನ ಮಾಡಿ ಮಾನವೀಯತೆ ಮೆರೆದ ಓಂಕಾರ್ ರಾಮಾಚಾರ್ !: ಇವರು ಸರ್ಕಾರಿ ನಿವೃತ್ತ ಮುಖ್ಯೋಪಾಧ್ಯಾಯರು

0

“ಸರ್ಕಾರ ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಎಷ್ಟೆಲ್ಲ ಉಪಕಾರ ಮಾಡಿದೆ ನಾನೂ ಅದಕ್ಕೆ ಪ್ರತ್ಯುಪಕಾರ ಮಾಡಬೇಕು “

ಎಂದು ಯೋಚಿಸುತ್ತ ಕರ್ನಾಟಕ ದಲ್ಲಿ ನೆರೆ, ಪ್ರವಾಹ, ಭೂಕಂಪ, ಚಂಡಮಾರುತ ಹಾಗೂ ಇನ್ನಿತರ ಪ್ರಕೃತಿ ವಿಕೋಪ ದಿಂದ ಜನರು ನಲುಗಿದಾಗ ತಮಗಾಗಿ ಸರ್ಕಾರ ಕೊಡುತ್ತಿದ್ದ ಪೆನ್ಷನ್ ನ ಹಣ ದಲ್ಲಿ ಬಹುತೇಕ ಭಾಗವನ್ನು  ಉಳಿಸಿ ಅದನ್ನು ಇಂತಹಾ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಗಳ ಮುಖೇನ ದಾನ ಕೊಡುತ್ತಾ ಜನರ ಆಸರೆ ಗೆ ನಿಂತಿರುವ ಒಬ್ಬ ಪ್ರಾಮಾಣಿಕ ಉತ್ತಮ ಮನುಷ್ಯ ಎಂದರೆ ತಪ್ಪಾಗಲಾರದು.

ಮನೆತನ :

ಇವರು 1.04.1944  ರಲ್ಲಿ ಜನಿಸಿದರು (79 ವರ್ಷ )ಮೂಲತಹ ಬಳ್ಳಾರಿ ಯ ಕೌಲ್ ಬಜಾರ್ ನವರು. ಇವರ ತಂದೆ ಸುಂದರ ಮೂರ್ತಿ ಆಚಾರ್ ಅಂದಿನ ಕಾಲದ ವಿಧ್ಯಾವಂತರು  ಹಾಗೂ ತಾಯಿ ಗೋವಿಂದಮ್ಮ ಮನೆ ನಡೆಸಿಕೊಂಡು ಹೋಗುತ್ತಿದ್ದರು. ಇವರಿಬ್ಬರಿಗೆ ಬರೋಬ್ಬರಿ ಹತ್ತು ಜನ ಮಕ್ಕಳು ಐದು ಜನ ಗಂಡು ಹಾಗೂ ಐದು ಹೆಣ್ಣು ಮಕ್ಕಳ ಬೃಹತ್ ಕುಟುಂಬದಲ್ಲಿ ಓಂ ಕಾರ್ ರಾಮಾಚಾರ್ ರವರು 7 ನೇಯವರಾಗಿದ್ದರು.

ಮೈಸೂರಿನ ನಂಟು :

ನಂತರ ಇವರು ಬಳ್ಳಾರಿ ಯಿಂದ ಮೈಸೂರಿಗೆ ಬರಬೇಕಾಯಿತು ಕಾರಣ ತಮ್ಮ ಸ್ವಂತ ಅಕ್ಕನ ಮಗಳಾದ ವಿಜಯ ಲಕ್ಷ್ಮಿ ಯವರನ್ನು ವಿವಾಹ ವಾದರು. ಇವರಿಬ್ಬರ ಮಗ ಗಣೇಶ್ ಬಾಬು ಇವರು ಮೈಸೂರಿನಲ್ಲಿ ಟೆನ್ನಿಸ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೂ ಇವರಿಗೆ ಒಬ್ಬ ಮಗಳು ಪ್ರಿಯದರ್ಶಿನಿ puc ವ್ಯಾಸಾಂಗ ಮಾಡುತ್ತಿದ್ದಾರೆ. ಇವರು ರಾಮಕೃಷ್ಣ ಬಡಾವಣೆ ಯಲ್ಲಿ  ಇಂದಿಗೆ ವಾಸ ಮಾಡುತ್ತಿದ್ದಾರೆ.

ತಿ. ನರಸೀಪುರ ದ ನಂಟು :

ಇವರು 1973 ನೇ ಇಸವಿಗೆ ಮುಕ್ಯೋಪಾದ್ಯಾಯರಾಗಿ ತಿ. ನರಸೀಪುರಕ್ಕೆ ವರ್ಗಾವಣೆ ಆಗಿ ಬರುತ್ತಾರೆ ಹಾಗೂ ಇಲ್ಲಿ ಸುಮಾರು ತಮ್ಮ ಪೂರ್ಣ ಅವಧಿ ಯನ್ನು ಇಲ್ಲಿಯೇ ಕಳೆಯುತ್ತಾರೆ.

ಅಂದಿಗೆ ತಿ ನರಸೀಪುರ ದ ಶಾಲೆ ಗೆ ಒಂದು ಕಟ್ಟಡ ದ ಹೊರತು ಮತ್ತೇನೂ ಇರುವುದಿಲ್ಲ. ಶಾಲೆಯಲ್ಲಿ ಮಕ್ಕಳು ಆಟವಾಡುವಾಗ ಹಾಗೂ ನಾಡ ಗೀತೆ ಯನ್ನು ಹಾಡುವ ವೇಳೆಗೆ ಸರಿಯಾಗಿ ಅವರೆಲ್ಲರೂ ಚದುರಿ ಹೋಗುವ ಹಾಗೆ ಹಸುಗಳೊಟ್ಟ್ಟಿಗೆ ಗಾಡಿ ಗಳು ಬಂದು ಬಿಡುತ್ತಿದ್ದವು ಆಗ ಮಕ್ಕಳು ಹಲವಾರು ಬಾರಿ ಹೆದರಿ ಚೆಲ್ಲಾಪಿಲ್ಲಿ ಯಾಗಿ ಓಡುವುದನ್ನ ನೋಡಿದ ಓಂಕಾರ ರಾಮಾಚಾರ್ ರವರು ಇದಕ್ಕೆ ಇತಿಶ್ರೀ ಹಾಡಲಿಕ್ಕೆ ಮುಂದಾಗುತ್ತಾರೆ. ಬಹಳ ಕಷ್ಟ ಪಟ್ಟು ಹಣ ಹೊಂದಿಸಿ ಶಾಲೆಯ ಸುತ್ತಲೂ  ಕಂಪೌಂಡ್ ಕಟ್ಟಿಸುತ್ತಾರೆ. ನಂತರ ಇದರಿಂದ ಮಕ್ಕಳು ನೆಮ್ಮದಿಯಾಗಿ ಪ್ರಾರ್ಥನೆ ಮಾಡಬಹುದು ಎಂದು ಭಾವಿಸಿ ದ್ದ ಅವರಿಗೆ ಅದರ ನಾಳೆ ಗೆ ಶಾಕ್ ಕಾದಿರುತ್ತದೆ. ರಾತ್ರಿ ವೇಳೆ ಅಲ್ಲಿನ ಕೆಲವು ಕಿಡಿಗೇಡಿಗಳು ಶಾಲೆಯ ಕಂಪೌಂಡ್ ಹೊಡೆದು ಹಾಕಿ ಯತಾ ಪ್ರಕಾರ ಎತ್ತಿನ ಗಾಡಿಗಳನ್ನು ಓದಿಸಿಕೊಂಡು ಹೋಗುತ್ತಾರೆ. ಇದರಿಂದ ಬೇಸತ್ತ ರಾಮಾಚಾರ್ ಒಂದು ಉಪಾಯ ಮಾಡುತ್ತಾರೆ.

ತೆಂಗಿನ ಸಸಿಗಳನ್ನು ತಂದು ಕಂಪೌಂಡ್ ಜೊತೆಗೆ ತಮ್ಮ ಹೆಂಡತಿಯ ಮಾಂಗಲ್ಯ ದ (ಚಿನ್ನ ) ಸಾರವನ್ನು ಅಡಮಾನ ಇಟ್ಟು ಅದರಲ್ಲಿ ಬಂದಂತಹ ಹಣ ದಲ್ಲಿ ಶಾಲಾ ಆವರಣದಲ್ಲಿ ಇದ್ದ ಬಾವಿಗೆ ಮೋಟಾರ್ ಹಾಕಿಸಿ ಸುಮಾರು 161 ತೆಂಗಿನ ಸಸಿಗಳನ್ನು ತಂದು ನೆಟ್ಟು ಅದಕ್ಕೆ ನೀರು ಪೂರೈಕೆ ಮಾಡಿ ಅದನ್ನು ಬೆಳೆಸುತ್ತಾರೆ. ಕಂಪೌಂಡ್ ಗಳನ್ನು ಹೊಡೆದು ಹಾಕಿದ ಹಾಗಲ್ಲ ತೆಂಗಿನ ಮರಗಳನ್ನು ಕೀಳುವುದು. ಹಾಗಾಗಿ ಮಕ್ಕಳು ನೆಮ್ಮದಿಯಿಂದ ಆಟ ಹಾಗೂ ಪ್ರಾರ್ಥನೆ ಗಳನ್ನು ಮಾಡಲು ಅನುವು ಮಾಡಿಕೊಟ್ಟ ಕೀರ್ತಿ ರಾಮಾಚಾರ್ ರವರಿಗೆ ಸಲ್ಲುತ್ತದೆ.

ಬಿಸಿಯೂಟ :

ಶಾಲೆಯಲ್ಲಿ ಬಹಳಷ್ಟು ಮಕ್ಕಳು ಗ್ರಾಮೀಣ ಪ್ರದೇಶಗಳಿಂದ ಬರುತ್ತಿದ್ದ ಕಾರಣ ಅವರಿಗೆ ಮದ್ಯಾನ್ಹದ ಊಟದ ವ್ಯವಸ್ಥೆ ಇರುತ್ತಿರಲಿಲ್ಲ. ಹಾಗಾಗಿ ಶಾಲೆ ಗೆ ಸ್ವಲ್ಪ ದೂರದಲ್ಲೇ,, ಮಲ್ಲಿಕಾರ್ಜುನ ಬಸ್ ನ ಮಾಲೀಕರು ಪ್ರತಿದಿನ ಬಡವರಿಗೆ ಭಿಕ್ಷುಕರಿಗೆ  ಊಟ ಹಾಕುತ್ತಿದ್ದರು. ಬಡಬಗ್ಗರು  ಸರತಿ ಸಾಲಿನಲ್ಲಿ ಬಂದು ಊಟವನ್ನು ಪಡೆಯ ಬಹುದಿತ್ತು. ಆ ಸಾಲಿನಲ್ಲಿ ತಮ್ಮದೇ ಶಾಲೆಯ ಮಕ್ಕಳನ್ನು ಕಂಡ ಓಂ ಕಾರ್ ರಾಮಾಚಾರ್ ಮನಸ್ಸು ನೋವಿನಲ್ಲಿ ತೋಯ್ದು ಹೋಯ್ತು.

ಶಾಲೆ ಗೆ ಬಂದಿದ್ದೆ ಬಡ ಮನೆತನ ದ ಮನೆಗಳಿಂದ ಬರುವ ಮಕ್ಕಳ ಹೆಸರನ್ನು ಪಟ್ಟಿ ಮಾಡಿ ಒಬ್ಬ ಅಡಿಗೆ ಬಟ್ಟನನ್ನು ನೇಮಿಸಿ ಹಸಿದ ಮಕ್ಕಳಿಗೆ ಮದ್ಯಾನ್ಹದ ಊಟಕ್ಕೆ ಏರ್ಪಾಡು ಮಾಡಿದರು ಅದು ತಮ್ಮ ಸ್ವಂತ ಸಂಬಳದಲ್ಲಿ. ಬಿಸಿಯೂಟ ಅಂದಿಗೆ ಓಂ ಕಾರ್ ರಾಮಾಚಾರ್ ರವರೇ ಪ್ರಾರಂಭಿಸಿದ್ದರು.

ಪ್ರಶಸ್ತಿಗಳು :

ಇವರಿಗೆ ಪ್ರಪ್ರಥಮ ಬಾರಿಗೆ 1988ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಗೆ ಭಾಜನ ರಾಗುತ್ತಾರೆ. ಅಂದು ಎಸ್ ಆರ್ ಬೊಮ್ಮಾಯಿ ಯವರು ಮುಖ್ಯಮಂತ್ರಿ ಗಳಾಗಿದ್ದು ರಘುಪತಿ ಯವರು ಶಿಕ್ಷಣ ಸಚಿವರು ಹಾಗೂ ಗೋವಿಂದ ನಾರಾಯಣ್ ರವರು ಗವರ್ನರ್ ರಾಗಿದ್ದರು.

ಸನ್ 1990 ರಲ್ಲಿ ಓಂ ಕಾರ್ ರಾಮಾಚಾರ್  ರಾಷ್ಟ್ರ ಪ್ರಶಸ್ತಿ ಗೆ  ಭಾಜನ ರಾದರು. ಅಂದು ಪಿವಿ ನರಸಿಂಹ ರಾವ್ ರವರು ಭಾರತ ದ ಪ್ರಧಾನಿ ಗಳಾಗಿದ್ದು, ಆರ್ ಕೆ ವೆಂಕಟರಾಮನ್ ರವರು ರಾಷ್ಟ್ರಪತಿ, ಹಾಗೂ ಮಮತಾ ಬ್ಯಾನರ್ಜಿ ಕೇಂದ್ರ ಕ್ರೀಡಾ ಸಚಿವೆ ಆಗಿದ್ದರು.

ಇದೇ ಅಲ್ಲದೇ ಸುಮಾರು 9  ಪ್ರಶಸ್ತಿ ಗಳು ಇವರನ್ನು ಹರಸಿ ಬಂದಿವೆ.

ಇಂದಿಗೂ ಇವರು ಹಲವಾರು ರೀತಿಯಲ್ಲಿ  ನೊಂದ ಜನರಿಗೆ ಸಹಾಯ ಹಸ್ತ ನೀಡಿ ಅವರ ಕೈ ಲಾದ ಸಹಾಯಗಳನ್ನು ಮಾಡುತ್ತಾ ಇದ್ದಾರೆ. ಇದಕ್ಕೆ ಇವರ ಮನೆಯ ಎಲ್ಲಾ ಸದಸ್ಯರ ಪ್ರೋತ್ಸಾಹ ಕೂಡಾ ಇರುವುದು ನಿಜಕ್ಕೂ ಶ್ಲಾಘನೀಯ.

ಹಿಂದಿನ ಲೇಖನಒಡನಾಡಿ ಸಂಸ್ಥೆಯಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ರವರ ಹುಟ್ಟುಹಬ್ಬದ ಆಚರಣೆ
ಮುಂದಿನ ಲೇಖನಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳ: ಶ್ರೀ ಪರಶುರಾಮ ದೇವಾಲಯಕ್ಕೆ ನುಗ್ಗಿದ ನೀರು