ಮನೆ ಆರೋಗ್ಯ 2,151 ನೂತನ ಕೋವಿಡ್ ಪ್ರಕರಣ: ಕಳೆದ ಐದು ತಿಂಗಳಲ್ಲೇ ಹೆಚ್ಚು

2,151 ನೂತನ ಕೋವಿಡ್ ಪ್ರಕರಣ: ಕಳೆದ ಐದು ತಿಂಗಳಲ್ಲೇ ಹೆಚ್ಚು

0

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ದೃಢಪಟ್ಟ 2,151 ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ವರ್ಷ ಅಕ್ಟೋಬರ್‌ನಿಂದ ಅತಿ ಹೆಚ್ಚು ಎಂಬುದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆಯಿಂದ ತಿಳಿದುಬಂದಿದೆ.

ಈ ಮೂಲಕ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,903ಕ್ಕೆ ಏರಿಕೆಯಾಗಿದೆ. 2022 ಅಕ್ಟೋಬರ್‌’ನಲ್ಲಿ 28ರಂದು ದಾಖಲಾದ 2,208 ಕೋವಿಡ್ ಪ್ರಕರಣಗಳು ಇಲ್ಲಿವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಮೂವರು, ಕರ್ನಾಟಕದಲ್ಲಿ ಒಬ್ಬರು ಮೃತಪಟ್ಟಿದ್ದು, ಕೋವಿಡ್ ಸಾವಿನ ಸಂಖ್ಯೆ 5,30,848ಕ್ಕೆ ತಲುಪಿದೆ.

ಮರಣ ಪ್ರಮಾಣ ಶೇ 1.19 ಆಗಿದೆ. ಸೋಂಕು ದೃಢಪಡುತ್ತಿರುವ ಪ್ರಮಾಣವು ದಿನಕ್ಕೆ ಶೇ 1.51 ಆಗಿದ್ದು, ವಾರಕ್ಕೆ ಶೇ 1.53 ರಷ್ಟು ಇದೆ.ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,47,09,676 ಆಗಿದೆ. ಇದರಲ್ಲಿ 4,41,66,925 ಜನರು ಗುಣಮುಖರಾಗಿದ್ದಾರೆ.

ಒಟ್ಟು ಸೋಂಕಿತರಲ್ಲಿ ಶೇ 0.03 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣ ಶೇ 98.78 ಆಗಿದೆ.

ಹಿಂದಿನ ಲೇಖನಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಮೇ 10 ರಂದು ಮತದಾನ, 13ಕ್ಕೆ ಫಲಿತಾಂಶ
ಮುಂದಿನ ಲೇಖನಛಾವಲಾ ಅತ್ಯಾಚಾರ ಪ್ರಕರಣ: ಮರಣದಂಡನೆಗೆ ಗುರಿಯಾದವರ ಖುಲಾಸೆ ಪ್ರಶಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ