ಬೆಂಗಳೂರು : ರಾಷ್ಟ್ರ ಪ್ರಶಸ್ತಿ ಪದಕವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಸುಪ್ರಜಾನಗರದಲ್ಲಿ ನಡೆದಿದೆ. 22 ಗ್ರಾಂ ತೂಕದ ಚಿನ್ನದ ಪದಕ ಇದಾಗಿದ್ದು, ಕರಕುಶಲ ಕಲೆಗೆ ನೀಡುವ ಅತ್ಯುನ್ನತ ‘ಶಿಲ್ಪಗುರು‘ ಪ್ರಶಸ್ತಿ ಪದಕ ಸೇರಿ ಇನ್ನಿತರ ಪ್ರಶಸ್ತಿ ಕಳ್ಳತನ ಮಾಡಲಾಗಿದೆ.
ಕಳೆದ 35 ವರ್ಷಗಳಿಂದ ಕರಕುಶಲ ಕ್ಷೇತ್ರದಲ್ಲಿನ ಸಾಧನೆಗಾಗಿ ಶಿಲ್ಪಗುರು ಪ್ರಶಸ್ತಿ ಪದಕವನ್ನು ಹೇಮಾ ಚಂದ್ರಶೇಖರಯ್ಯ ಅವರಿಗೆ ನೀಡಲಾಗಿತ್ತು. ಆದರೆ ಪ್ರಶಸ್ತಿಯಾಗಿ ಪಡೆದುಕೊಂಡಿದ್ದ ಪದಕಗಳನ್ನ ಕಳ್ಳರು ದೋಚಿದ್ದಾರೆ.
ಹೇಮಾ ಚಂದ್ರಶೇಖರಯ್ಯಾ ಅವರ ಸಾಧನೆ ಗಮನಿಸಿ 2002ರಲ್ಲಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದ್ದರು. 2014 ರಲ್ಲಿ ಶಿಲ್ಪಗುರು ಪ್ರಶಸ್ತಿ ಹೇಮಾ ಚಂದ್ರಶೇಖರಯ್ಯಾ ಪಡೆದಿದ್ದರು. ಇದೇ ತಿಂಗಳು 5ರಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ತೆರಳಿದ್ದ ದಂಪತಿ ವಾಪಾಸ್ ಮನೆಗೆ ಮಾರ್ಚ್ 15 ರಂದು ಮರಳಿದ್ದಾರೆ. ಆದರೆ ಇವರು ಬರುವುದರೊಳಗೆ ಕಳ್ಳರು ಮನೆಯಲ್ಲಿದ್ದ ಚಿನ್ನದ ಪದಕಗಳನ್ನು ದೋಚಿ ಪರಾರಿಯಾಗಿದ್ದಾರೆ
22 ಗ್ರಾಂ ತೂಕದ ಚಿನ್ನದ ಪದಕದ ಜೊತೆಗೆ ಚಿನ್ನಾಭರಣ, 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ ಘಟನೆ ಕುರಿತು ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.