ಮನೆ ಉದ್ಯೋಗ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.97 ಲಕ್ಷ ಹುದ್ದೆಗಳು ಖಾಲಿ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.97 ಲಕ್ಷ ಹುದ್ದೆಗಳು ಖಾಲಿ

0

ನವದೆಹಲಿ(Newdelhi): ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಇವೆ.

ಈ ಕುರಿತು ಬುಧವಾರ ಲೋಕಸಭೆಗೆ ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, 2021 ಮಾರ್ಚ್ 1ರಂತೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ 9,79,327 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಖಾಲಿ ಹುದ್ದೆಗಳನ್ನು ಸಕಾಲಕ್ಕೆ ಭರ್ತಿ ಮಾಡಲಾಗುತ್ತದೆ. ಈ ಸಂಬಂಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮಗದೊಂದು ಪ್ರಶ್ನೆಗೆ ಉತ್ತರಿಸಿದ ಜಿತೇಂದ್ರ ಸಿಂಗ್, ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) 1,472 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.

ಹಿಂದಿನ ಲೇಖನಮಹದಾಯಿ ಬಗ್ಗೆ ಮಾತನಾಡಲು ಕಾಂಗ್ರೆಸ್’ಗೆ ಹಕ್ಕಿಲ್ಲ: ಸಿಎಂ.ಬೊಮ್ಮಾಯಿ
ಮುಂದಿನ ಲೇಖನವಿವಾಹೇತರ ಸಂಬಂಧದಿಂದ ಜನಿಸಿದ್ದ ಅಪ್ರಾಪ್ತೆಯ ಪಾಲಕತ್ವವನ್ನು ಜೈವಿಕ ಪೋಷಕರಿಗೆ ನೀಡಿದ ಬಾಂಬೆ ಹೈಕೋರ್ಟ್