ಮನೆ ಅಪರಾಧ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಎಂಬಿಎ ವಿದ್ಯಾರ್ಥಿಗೆ  23...

ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಎಂಬಿಎ ವಿದ್ಯಾರ್ಥಿಗೆ  23 ಲಕ್ಷ ವಂಚನೆ

0

ನಾಗ್ಪುರ: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ನಾಗ್ಪುರದ ಕಾಲೇಜ್‌ ವೊಂದರ ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Our Whatsapp Group

ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 28 ವರ್ಷದ ವಿದ್ಯಾರ್ಥಿ ಮೋಸಕ್ಕೆ ಒಳಗಾಗಿದ್ದಾನೆ. 

2023ರ ನವೆಂಬರ್ 17ರಂದು ಟೆಲಿಗ್ರಾಮ್ ಮೆಸೇಜಿಂಗ್‌ ಆ್ಯಪ್‌ನಲ್ಲಿ ಹೂಡಿಕೆ ಸಲಹೆಗಾರನಂತೆ ವಂಚಕ ವಿದ್ಯಾರ್ಥಿಯನ್ನು ಸಂಪರ್ಕಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿದ್ಯಾರ್ಥಿ ಆರಂಭದಲ್ಲಿ ₹1,000 ಹೂಡಿಕೆ ಮಾಡಿ ₹1,400 ಗಳಿಸಿದ್ದನು. ಆ ಮೂಲಕ ವಿದ್ಯಾರ್ಥಿಯ ನಂಬಿಕೆ ಗಿಟ್ಟಿಸಿಕೊಳ್ಳುವಲ್ಲಿ ವಂಚಕ ಯಸಸ್ವಿಯಾಗಿದ್ದ. ಬಳಿಕ ಹೆಚ್ಚಿನ ಲಾಭ ಗಳಿಸುವ ಇರಾದೆಯಲ್ಲಿ ಒಟ್ಟು 23 ಲಕ್ಷ ಹೂಡಿಕೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಸಿಗದಿದ್ದಾಗ ಕೊನೆಗೂ ವಂಚನೆ ಮನಗಂಡ ವಿದ್ಯಾರ್ಥಿ, ವಾಥೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಹಿಂದಿನ ಲೇಖನಯುವ ಮತದಾರರ ಗಮನ ಸೆಳೆಯಲು ಬೈಕ್ ರ್‍ಯಾಲಿ: ಡಾ ಕೆ ವಿ ರಾಜೇಂದ್ರ
ಮುಂದಿನ ಲೇಖನಮಹದೇಶ್ವರ ಬೆಟ್ಟದಲ್ಲಿ ಭಕ್ತರ ಮೇಲೆ ಕಾಡಾನೆ ದಾಳಿ: ಮಹಿಳೆ ಸಾವು