ಮನೆ ರಾಷ್ಟ್ರೀಯ ಒಂದೇ ಆಟೋದಲ್ಲಿ ೨೭ ಮಂದಿ ಪ್ರಯಾಣ: ವಾಹನ ತಡೆದ ಪೊಲೀಸರೇ ಶಾಕ್

ಒಂದೇ ಆಟೋದಲ್ಲಿ ೨೭ ಮಂದಿ ಪ್ರಯಾಣ: ವಾಹನ ತಡೆದ ಪೊಲೀಸರೇ ಶಾಕ್

0

ಫತೇಪುರ್(ಉತ್ತರ ಪ್ರದೇಶ): ಅತೀ ವೇಗವಾಗಿ ಚಲಿಸುತ್ತಿದ್ದ ಆಟೋ ತಡೆದ ಉತ್ತರ ಪ್ರದೇಶದ ಪೊಲೀಸರೇ ಶಾಕ್ ಆಗಿದ್ದು, ೩ ಸೀಟಿನ ಆಟೋದಲ್ಲಿ ೨೭ ಮಂದಿ ಪ್ರಯಾಣಿಸುತ್ತಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಪ್ರಯಾಣಿಕರಲ್ಲಿ ವಯಸ್ಸಾದವರು, ಮಕ್ಕಳೇ ಹೆಚ್ಚಾಗಿದ್ದದ್ದು ಪೊಲೀಸರಿಗೆ ನಂಬಲಾಸಾಧ್ಯವಾದ ಸಂಗತಿಯಾಗಿದ್ದು, ಆಟೋದಿಂದ ಒಬ್ಬೊಬ್ಬರನ್ನೇ ಇಳಿಸಿ ಪೊಲೀಸರು ಎಣಿಕೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಫತೇಪುರದ ಬಿಂಡ್ಕಿ ಕೊತ್ವಾಲಿ ಪ್ರದೇಶದಲ್ಲಿ ಮೊದಲ ಬಾರಿಗೆ ಆಟೋ ಪೊಲೀಸರ ಕಣ್ಣಿಗೆ ಬಿದ್ದಿದೆ. ಸ್ಪೀಡ್ ಗನ್‌ನಲ್ಲಿ ಆಟೋ ಅಧಿಕ ವೇಗದಲ್ಲಿ ಚಲಿಸುತ್ತಿರುವುದು ಪತ್ತೆಯಾಗಿದೆ. ಕೂಡಲೇ ಆಟೋವನ್ನು ಹಿಂಬಾಲಿಸಿದ ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಪ್ರಯಾಣಿಕರನ್ನು ಕೆಳಗಿಳಿಸಿ ಎಣಿಕೆ ಮಾಡಿದಾಗ ೨೭ ಜನರು ಪ್ರಯಾಣಿಸುತ್ತಿದ್ದದ್ದನ್ನು ನೋಡಿ ಪೊಲೀಸ್ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಪೊಲೀಸರು ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಿಂದಿನ ಲೇಖನಮಡಿಕೇರಿಯಲ್ಲಿ ಮುಂದುವರೆದ ಮಳೆ: ಹಾರಂಗಿ ಜಲಾಶಯದಿಂದ ೨೧,೧೬೬ ಕ್ಯುಸೆಕ್ ನೀರು ನದಿಗೆ
ಮುಂದಿನ ಲೇಖನಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ನೇಮಕ