ಮನೆ ರಾಜಕೀಯ ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ನೇಮಕ

ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ನೇಮಕ

0

ಚೆನ್ನೈ(Chennai): ಚೆನ್ನೈನಲ್ಲಿ ಇಂದು ಬೆಳಿಗ್ಗೆ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ.
ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಸಭೆಗೆ ತಡೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ(ಒಪಿಎಸ್) ಮಾಡಿದ್ದ ಮನವಿಯನ್ನು ಸೋಮವಾರ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ರಾಜಕೀಯ ಪಕ್ಷದ ಜಗಳದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಈ ಮೂಲಕ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರತಿಸ್ಪರ್ಧಿ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಸಂಭವನೀಯ ಏಕೈಕ ನಾಯಕನಾಗಿ ಘೋಷಿಸಲು ನ್ಯಾಯಾಲಯ ದಾರಿ ಮಾಡಿಕೊಟ್ಟಿತ್ತು.
ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಸೋಮವಾರ ಬೆಳಿಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಜಿಸಿ(ಸಾಮಾನ್ಯ ಮಂಡಳಿ)ಸಭೆಯನ್ನು ನಡೆಸಲು ಇಪಿಎಸ್(ಎಡಪ್ಪಾಡಿ ಪಳನಿಸ್ವಾಮಿ) ಬಣಕ್ಕೆ ಅನುಮತಿ ನೀಡಿದ್ದರು. ಜುಲೈ ೮ರಂದು ಒಪಿಎಸ್ ಮತ್ತು ಇಪಿಎಸ್ ಪರ ಹಿರಿಯ ವಕೀಲರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.
ಬೆಂಬಲಿಗರ ಮಾರಾಮಾರಿ: ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಯ ಹೊರಗೆ ಪಕ್ಷದ ನಾಯಕರಾದ ಇ.ಪಳನಿಸ್ವಾಮಿ ಮತ್ತು ಒ.ಪನ್ನೀರಸೆಲ್ವಂ ಬೆಂಬಲಿಗರ ನಡುವೆ ಹೊಡೆದಾಟ ನಡೆದಿದೆ.
ಒಂದೇ ಪಕ್ಷದ ನಾಯಕರಿಬ್ಬರ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು. ಎಐಎಡಿಎಂಕೆ ಪಕ್ಷದ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಪ್ರಬಲ ಬಣವನ್ನು ಸಂಘಟನೆಯ ’ಏಕೈಕ ನಾಯಕ’ನನ್ನಾಗಿ ಆಯ್ಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪನ್ನೀರಸೆಲ್ವಂ ಬಣ ಎಐಎಡಿಎಂಕೆ ಕಚೇರಿ ಹೊರಗೆ ಸಂಘರ್ಷಕ್ಕಿಳಿಯಿತು.

ಹಿಂದಿನ ಲೇಖನಒಂದೇ ಆಟೋದಲ್ಲಿ ೨೭ ಮಂದಿ ಪ್ರಯಾಣ: ವಾಹನ ತಡೆದ ಪೊಲೀಸರೇ ಶಾಕ್
ಮುಂದಿನ ಲೇಖನಮಳೆಯ ಅಬ್ಬರ ತೀವ್ರಗೊಂಡಿದ್ದರೂ, ಕೇಂದ್ರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ ?: ಸರ್ಕಾರಕ್ಕೆ ಕಾಂಗ್ರೆಸ್ ತರಾಟೆ