ನವದೆಹಲಿ (New Delhi)- ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಮೇ 12) ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಎರಡನೇ ಜಾಗತಿಕ ಕೋವಿಡ್ ಸಮಾವೇಶದ ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭೆ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆ ನಂತರ ಆರಂಭವಾಗುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ನರೇಂದ್ರ ಮೋದಿ ಕಳೆದ 2022 ರ ಸೆಪ್ಟೆಂಬರ್ 22 ರಂದು ನಡೆದಿದ್ದ ಮೊದಲ ಜಾಗತಿಕ ಕೋವಿಡ್ ಸಮಾವೇಶದಲ್ಲೂ ಪಾಲ್ಗೊಂಡಿದ್ದರು.
ಎರಡನೇ ಜಾಗತಿಕ ಕೋವಿಡ್ ಸಮಾವೇಶದಲ್ಲಿ ಕೋವಿಡ್ ರೂಪಾಂತರಿಗಳಿಂದ ಎದುರಾಗಿರುವ ಹೊಸ ಸವಾಲುಗಳನ್ನು ಹೇಗೆ ಎದುರಿಸುವುದು ಹಾಗೂ ವಿಶ್ವ ಆರೋಗ್ಯ ರಕ್ಷಣೆಗೆ ಮಾಡಬೇಕಿರುವ ತುರ್ತು ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದು, ಸಾಂಕ್ರಾಮಿಕ ತಡೆ ಕುರಿತ ಸಿದ್ಧತೆಗಳ ಬಗ್ಗೆ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರೂ ಕೂಡ ಭಾಗವಹಿಸಲಿದ್ದಾರೆ.