ಮನೆ ರಾಜ್ಯ ಮೈಸೂರು: ವಿವೇಕ ಸ್ಮಾರಕ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಮೈಸೂರು: ವಿವೇಕ ಸ್ಮಾರಕ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

0

ಮೈಸೂರು(Mysuru): ನಗರದ ನಿರಂಜನಮಠದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರ- ವಿವೇಕ ಸ್ಮಾರಕ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಬುಧವಾರ ನಡೆಯಿತು.

ಈ ಸಂದರ್ಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಅರಮನೆಯೊಂದಿಗೆ ನಿಕಟವಾದ ಬಾಂಧವ್ಯ ಬೆಸೆದು ವಿದೇಶ ಪ್ರಯಾಣಕ್ಕೆ ನಿರ್ಧಾರಕ್ಕೆ ತೆಗೆದುಕೊಂಡ ನಗರ ಮೈಸೂರು‌. ಇಲ್ಲಿ ಸ್ಮಾರಕ ನಿರ್ಮಾಣವಾಗುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದರು.

ವಿವೇಕರು ಭಾಷಣ ಮಾಡಿದ್ದ ಷಿಕಾಗೊಕ್ಕೆ ವರ್ಷದ ಹಿಂದೆ ಭೇಟಿ ನೀಡಿದ್ದು ನೆನಪಿನಲ್ಲಿರುವಾಗಲೇ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದೆ. ಯುವ ಸಮುದಾಯದ ಮಾರ್ಗದರ್ಶಿ ಕೇಂದ್ರವಾಗಿ ಸ್ಮಾರಕವು ರೂಪುಗೊಳ್ಳಲಿದೆ. ಭೂಮಿಪೂಜೆಯಲ್ಲಿ ಇಟ್ಟಿಗೆಗಳಿಗೆ ಪೂಜೆ ಸಲ್ಲಿಸುವಾಗ ಎಲ್ಲ ಬಗೆಯ ಹೂಗಳಿದ್ದವು. ಕಮಲ, ಸಂಪಿಗೆಯೂ ಇದ್ದವು. ಸ್ಮಾರಕ ಕೇಂದ್ರವು ಕಮಲದಂತೆ ಅರಳಲಿ, ಸಂಪಿಗೆಯಂತೆ ಕಂಪು ಸೂಸಲಿ ಎಂದರು.

ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಮಾತನಾಡಿ, ವಿವೇಕರು ಉಳಿದುಕೊಂಡಿದ್ದ ಸ್ಥಳ ಪಾಳುಬಿದ್ದಿತ್ತು. ಅದನ್ನು 1980ರ ಸುಮಾರು ಸಿಎಫ್ ಟಿಆರ್ ಐ ವಿಜ್ಞಾನಿ ಸತ್ಯನಾರಾಯಣ ಗುರುತಿಸಿ ಫಲಕ ಸ್ಥಾಪಿಸಿದರು. ಅವರಂತೆ ಮೈಸೂರಿಗರು ಸ್ಮಾರಕ ನಿರ್ಮಾಣಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ ಎಂದು ಸ್ಮರಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಲೇಖಕರಾದ ಡಾ.ಎಸ್.ಎಲ್.ಭೈರಪ್ಪ, ಡಾ.ಸಿಪಿಕೆ, ಡಾ.ಚಿದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮೇಯರ್ ಸುನಂದಾ ಫಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕಾಡಾ ಅಧ್ಯಕ್ಷ ಎನ್.ಶಿವಲಿಂಗಯ್ಯ, ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಇದ್ದರು.

ಸ್ಮಾರಕದ ಸುತ್ತ‌ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಹಿಂದಿನ ಲೇಖನಜಿಯೋ ಗ್ರಾಹಕರಿಗೆ ಬಂಪರ್ ಆಫರ್
ಮುಂದಿನ ಲೇಖನಗೌರಿ ಲಂಕೇಶ್ ಹತ್ಯೆ ಪ್ರಕರಣ: ನವೀನ್‌ರನ್ನು ಸಿಲುಕಿಸಲು ಪೊಲೀಸರ ಜೊತೆ ಸೇರಿ ಸುಳ್ಳು ಕತೆ ಹೆಣೆದ ಆರೋಪ ತಳ್ಳಿಹಾಕಿದ ಶಬ್ಬೀರ್‌