ಮನೆ ಕ್ರೀಡೆ 2 ನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು

2 ನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು

0

ಲಾರ್ಡ್ಸ್ (Lords): ಇಲ್ಲಿ ನಡೆದ 2ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್‌ 100 ರನ್‌ ಗಳ ಭರ್ಜರಿ ಜಯಗಳಿಸಿದೆ.

ಟಾಸ್ ಗೆದ್ದು  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಇಂಗ್ಲೆಂಡ್ ತಂಡವನ್ನು 49 ಓವರ್ ಗಳಲ್ಲಿ 246 ರನ್ ಗಳಿಗೆ ಕಟ್ಟಿಹಾಕಿತು. 

247 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (10 ಎಸೆತಗಳಲ್ಲಿ 0 ರನ್) ಶಿಖರ್ ಧವನ್ (26 ಎಸೆತಗಳಲ್ಲಿ 9 ರನ್) ಮುಗ್ಗರಿಸಿದ ಪರಿಣಾಮ ಭಾರತ ತಂಡ ಆರಂಭಿಕ ಅಘಾತ ಎದುರಿಸಬೇಕಾಯಿತು. 

ನಂತರ ವಿರಾಟ್ ಕೊಹ್ಲಿ (25ಎಸೆತಗಳಲ್ಲಿ 16 ರನ್) ಸಹ ನಿರಾಶೆ ಮೂಡಿಸಿದರು. ರಿಷಭ್ ಪಂತ್ ಸೇರಿದಂತೆ ಮಧ್ಯಮ ಕ್ರಮಾಂಕ ಹಾಗೂ ಕಡೆಯ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದ ಪರಿಣಾಮ ಭಾರತ 38.5 ಓವರ್ ಗಳಲ್ಲಿ 146 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಇಂಗ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತು. ರೀಸ್ ಟೋಪ್ಲಿ 24 ರನ್ ಗಳನ್ನು ನೀಡಿ 2 ಮೇಡ್ ಇನ್ ಓವರ್, 6 ವಿಕೆಟ್ ಗಳನ್ನು ಪಡೆದು ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಗೆಲುವಿನ ಮೂಲಕ ಸರಣಿಯಲ್ಲಿ ಇಂಗ್ಲೆಂಡ್ ಭಾರತದೊಂದಿಗೆ ಸಮಬಲ ಸಾಧಿಸಿದ್ದು, ಉಭಯ ತಂಡಗಳೂ ತಲಾ ಒಂದು ಪಂದ್ಯಗಳನ್ನು ಗೆದ್ದಿವೆ.