ಮನೆ ಅಪರಾಧ ಬ್ಯಾಂಕ್‌ ಖಾತೆ ಬ್ಲಾಕ್‌ ಸಂದೇಶ ನಂಬಿ 3.10 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಬ್ಯಾಂಕ್‌ ಖಾತೆ ಬ್ಲಾಕ್‌ ಸಂದೇಶ ನಂಬಿ 3.10 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

0

ಮಂಗಳೂರು: ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ ಕೆವೈಸಿ ಅಪ್‌ ಡೇಟ್‌ ಮಾಡಬೇಕು ಎಂದು ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 3.10 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ದೂರುದಾರರ ಮೊಬೈಲ್‌ ಗೆ ಮೇ 24ರಂದು ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದ್ದು, ಕೆವೈಸಿ ಅಪ್‌ ಡೇಟ್‌ ಮಾಡಬೇಕೆಂದು ಎಂದು ಸಂದೇಶ ಬಂದಿತ್ತು. ಬಳಿಕ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕೆವೈಸಿ ಅಪ್‌ ಡೇಟ್‌ ಮಾಡುವ ಅಧಿಕಾರಿ ಎಂದು ಪರಿಚಯ ಮಾಡಿದ ಆತ ಕಸ್ಟಮರ್‌ ಐಡಿ ಕೇಳಿದ್ದಾನೆ.

ಬಳಿಕ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ನಂಬರ್‌ ಕೇಳಿದ್ದು, ಅನಂತರ ಮೊಬೈಲ್‌ ಗೆ ಬಂದ ಒಟಿಪಿಯನ್ನು ಪಡೆದುಕೊಂಡಿದ್ದಾನೆ. ಒಟಿಪಿ ನೀಡಿದ ಕೂಡಲೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 3,10,000 ರೂ. ವರ್ಗಾವಣೆಯಾಗಿದೆ. ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ, ಒಟಿಪಿ ಪಡೆದು ಖಾತೆಯಿಂದ ಹಣ ವರ್ಗಾ ಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ
ಮುಂದಿನ ಲೇಖನತಮಿಳುನಾಡಿನ ಸಚಿವ ವಿ ಸೆಂಥಿಲ್ ಬಾಲಾಜಿ ಮನೆ ಮೇಲೆ ಐಟಿ ದಾಳಿ